Annamalai: ಪತ್ರಕರ್ತೆಯ ‘ಆ’ ಪ್ರಶ್ನೆಗೆ ಸ್ಫೋಟಿಸಿದ ಅಣ್ಣಾ ಮಲೈ – ‘ಹೇ ಸೀದಾ ದೆಹಲಿಗೆ ಬಾರಯ್ಯಾ’ ಎಂದ ಬಿಜೆಪಿ ಹೈಕಮಾಂಡ್ !!
Tamilnadu news political news K Annamalai irked by question over his post arrived in Delhi to seek BJP views on aiadmk breakup
K Annamalai: ಮಾಜಿ ಐಪಿಎಸ್(IPDL ಅಧಿಕಾರಿ ಹಾಗೂ ಪ್ರಸ್ತುತ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವಂತಹ(Tamilnadu BJP President) ಅಣ್ಣಾ ಮಲೈ(K Annamalai) ಅವರು ಇತ್ತೀಚಿನ ದಿನಗಳಲ್ಲಿ ಹಲವಾರು ವಿವಾದಗಳನ್ನು ತಮ್ಮ ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೇ ಬಿಜೆಪಿಯ NDA ಮೈತ್ರಿ ಕೂಟದ ಪ್ರಮುಖ ಪಕ್ಷದವಾಗಿದ್ದ AIDMKಯ ನಾಯಕನ ಕುರಿತು ಹೇಳಿಕೆ ನೀಡಿ, ಅದು ವಿವಾದಾಕ್ಕೆ ಕಾರಣವಾಗಿ ಆ ಪಕ್ಷವು ಮೈತ್ರಿಯನ್ನು ತೊರೆಯುವಂತಾಗಿತ್ತು. ಆದರೀಗ ಈ ಬೆನ್ನಲ್ಲೇ ಪತ್ರಕರ್ತೆಯೊಬ್ಬರು ಕೇಳಿದ ಪ್ರಶ್ನೆಗೆ ಏಕಾಏಕಿ ಸಿಟ್ಟಾದ ಅಣ್ಣಾ ಮಲೈ ಅವರು ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಹೌದು, ಭಾನುವಾರ ಕೊಯಮತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತೆಯೊಬ್ಬರ ಪ್ರಶ್ನೆಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಇದ್ದಕ್ಕಿದ್ದಂತೆ ಸಿಡಿಮಿಡಿಗೊಂಡು ಕಿರಿಕ್ ಮಾಡಿದ್ದಾರೆ. ಇದು ತಮಿಳುನಾಡಿನಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ ನಿರಂತರವಾಗಿ ವಿವಾದಗಳನ್ನು ಸೃಷ್ಟಿಸುತ್ತಿರುವ ಅಣ್ಣಾ ಮಲೈ ಅವರನ್ನು ಬಿಜೆಪಿ ಹೈಕಮಾಂಡ್ ದೆಹಲಿಗೆ ಬರುವಂತೆ ಸೂಚಿಸಿದೆ.
ಪತ್ರಕರ್ತೆ ಕೇಳಿದ್ದೇನು? ಅಣ್ಣಾ ಮಲೈ ಮಾಡಿದ್ದೇನು?
ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದರೆ ಪಕ್ಷದಲ್ಲಿ ಮುಂದುವರಿಯುತ್ತೀರಾ ಎಂಬ ಪ್ರಶ್ನೆಯನ್ನು ಅಣ್ಣಾಮಲೈ ಅವರಿಗೆ ಮಹಿಳಾ ವರದಿಗಾರ್ತಿ ಕೇಳಿದ್ದಾರೆ. ಈ ಪ್ರಶ್ನೆಗೆ ಇದ್ದಕ್ಕಿದ್ದಂತೆ ರಿಯಾಕ್ಟ್ ಆದ ಅಣ್ಣಾ ಮಲೈ ಅವರು ಇಲ್ಲಿ ಬಾ ಅಕ್ಕ, ಕ್ಯಾಮರಾ ಮುಂದೆ ಬಾ.. ‘ಇಂತ ಬುದ್ಧಿವಂತ’ ಪ್ರಶ್ನೆಯನ್ನು ಯಾರು ಕೇಳುತ್ತಿದ್ದಾರೆಂದು ತಮಿಳುನಾಡಿನ ಜನರು ನೋಡಲಿ ಎಂದು ಬೆದರಿಕೆಯ ಧ್ವನಿಯಲ್ಲಿ ಮಾತನಾಡಿದ್ದಾರೆ.
ಅಲ್ಲದೆ ಪ್ರಶ್ನೆ ಕೇಳುವುದಕ್ಕೆ ಒಂದು ರೂಢಿ ಇದೆ. ಒಬ್ಬ ವ್ಯಕ್ತಿಯು ಪ್ರಶ್ನೆಗಳನ್ನು ಕೇಳುವ ಹಕ್ಕನ್ನು ಹೊಂದಿರುವಾಗ, ಅವರು ಲಕ್ಷ್ಮಣ ರೇಖೆಯನ್ನು ದಾಟಬಾರದು. ಇದಕ್ಕೆ ಮಿತಿ ಇದೆ. ಯಾರೇ ಆಗಲಿ ಆ ರೂಢಿಯನ್ನು ದಾಟಬಾರದು. ಅಂತಹ ಜನರನ್ನು ನಾನು ಸುಮ್ಮನೇ ಬಿಡುವುದಿಲ್ಲ’ ಎಂದು ಬೆದರಿಕೆ ಒಡ್ಡಿದ್ದಾರೆ.
ಈ ಬೆನ್ನಲ್ಲೇ ಅಣ್ಣಾ ಮಲೈ ವಿರುದ್ಧ AIDMK ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ ಕೆಲವು ಜನರು ಕೂಡ ಅಣ್ಣಾ ಮಲೈ ಅವರು ಇಷ್ಟು ರಿಯಾಕ್ಟ್ ಆಗೋ ಅಗತ್ಯ ಇರ ಇಲಿಲ್ಲ ಎಂದಿದ್ದಾರೆ. ಇನ್ನೂ ಈ ಬೆಳವಣಿಗೆಗಳ ನಡುವೆಯೇ ಅಣ್ಣಾಮಲೈ ಅವರನ್ನು ದೆಹಲಿ ಬರುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿದೆ. ಇದು ಭಾರೀ ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ: Yogi adityanath: ‘ಸನಾತನ’ ಅನ್ನೋದು ಮಾತ್ರ ಧರ್ಮ, ಉಳಿದವೆಲ್ಲಾ….. !! ಅಚ್ಚರಿಯ ಹೇಳಿಕೆ ನೀಡಿದ ಯೋಗಿ ಆದಿತ್ಯನಾಥ್