Yogi adityanath: ‘ಸನಾತನ’ ಅನ್ನೋದು ಮಾತ್ರ ಧರ್ಮ, ಉಳಿದವೆಲ್ಲಾ….. !! ಅಚ್ಚರಿಯ ಹೇಳಿಕೆ ನೀಡಿದ ಯೋಗಿ ಆದಿತ್ಯನಾಥ್

National news Sanatan Dharma only religion says uttar Pradesh cm Yogi Adityanath

Yogi Adityanath: ದೇಶದಲ್ಲಿ ಸದ್ಯ ಸನಾತನ ಧರ್ಮದ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಮೊಮ್ಮಗ ಉದಯನಿಗೆ ಸ್ಟಾಲಿನ್ ಅವರ ‘ಸನಾತನ ಧರ್ಮವನ್ನು ನಾಶಪಡಿಸಬೇಕು’ ಎಂಬ ವಿವಾದಾತ್ಮಕ ಹೇಳಿಕೆ ಇದೆಲ್ಲದಕ್ಕೂ ಮೂಲ ಕಾರಣ. ಆದರೆ ಈ ಚರ್ಚೆಗಳ ಬೆನ್ನಲ್ಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಹಾಗೂ ಹಿಂದೂ ಧರ್ಮದ ಯೋಗಿ ಆದಿತ್ಯನಾಥ್(Yogi adityanath) ಅವರ ಅಚ್ಚರಿ ಹೇಳಿಕೆ ಒಂದನ್ನು ನೀಡಿದ್ದಾರೆ.

ಹೌದು, ಧರ್ಮ ಇರುವುದೊಂದೇ. ಅದು ಸನಾತನ ಧರ್ಮ(Sanatana Dharma) ಉಳಿದೆಲ್ಲವೂ ಪಂಥಗಳು ಮತ್ತು ಆರಾಧನಾ ವ್ಯವಸ್ಥೆಗಳು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath)ಹೇಳಿದ್ದಾರೆ.

ಅಂದಹಾಗೆ ಮಹಾಂತ್ ದಿಗ್ವಿಜಯ್ ನಾಥ್ ಅವರ 54 ನೇ ಪುಣ್ಯತಿಥಿ ಮತ್ತು ಮಹಂತ್ ಅವೈದ್ಯನಾಥ್ ಅವರ ಒಂಬತ್ತನೇ ಪುಣ್ಯತಿಥಿಯ ನಿಮಿತ್ತ ಏಳು ದಿನಗಳ ಯಾಗ ನಡೆಯಿತು. ದೇಗುಲದ ದಿಗ್ವಿಜಯ್ ನಾಥ್ ಸ್ಮೃತಿ ಸಭಾಂಗಣದಲ್ಲಿ ಭಕ್ತಾದಿಗಳನ್ನುದ್ದೇಶಿಸಿ ಮಾತನಾಡಿದ ಗೋರಕ್ಷಪೀಠಾಧೀಶ್ವರ ಆದಿತ್ಯನಾಥ್, ಶ್ರೀಮದ್ ಭಾಗವತದ ಸಾರವನ್ನು ಅರಿಯಲು ಮುಕ್ತ ಮನಸ್ಸು ಹೊಂದುವ ಮಹತ್ವವನ್ನು ಒತ್ತಿ ಹೇಳಿದರು. “ಸಂಕುಚಿತ ಮನಸ್ಸಿನ ದೃಷ್ಟಿಕೋನಗಳು ಅದರ ವಿಶಾಲತೆಯನ್ನು ಗ್ರಹಿಸಲು ಹೆಣಗಾಡುತ್ತವೆ” ಎಂದು ಅವರು ಹೇಳಿದರು.

ಉದಯನಿಧಿ ಸ್ಟಾಲಿನ್ ಹೇಳಿಕೆ:
ಸನಾತನ ಧರ್ಮ ಎಂಬುದು ಕೊರೊನಾ, ಡೆಂಗ್ಯೂ, ಮಲೇರಿಯಾ ಇದ್ದಂತೆ ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಟೀಕಿಸಿದ್ದರು. ಹೇಗೆ ಈ ರೋಗಗಳ ವಿರುದ್ಧ ಹೋರಾಡಲು ಸಾಧ್ಯವಿಲ್ಲವೂ ಅದನ್ನು ಬುಡಸಮೇತ ನಿರ್ಮೂಲನೆ ಮಾಡಬೇಕೋ ಹಾಗೆಯೇ ಸನಾತನ ಧರ್ಮವನ್ನು ವಿರೋಧಿಸಿ ಪ್ರಯೋಜನವಿಲ್ಲ ಅದನ್ನು ಇಲ್ಲದಂತೆ ಮಾಡಬೇಕು ಎಂದು ಹೇಳಿದ್ದರು. ಈ ಹೇಳಿಕೆಯು ದೇಶಾದ್ಯಂತ ಗದ್ದಲವನ್ನು ಸೃಷ್ಟಿ ಮಾಡಿತ್ತು.

ಇದನ್ನೂ ಓದಿ: Face book- Instagram: ಫೇಸ್‌ಬುಕ್, ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಬಿಗ್ ಶಾಕ್- ಇನ್ನು ಪ್ರತಿ ತಿಂಗಳು ನೀವು ಪಾವತಿಸಬೇಕು 1,164 ರೂ ಶುಲ್ಕ !!

Leave A Reply

Your email address will not be published.