Dakshina Kannada: ಹದಿಹರೆಯದವರನ್ನು ತೀವ್ರವಾಗಿ ಕಾಡುತ್ತಿದೆ ಹೃದಯಾಘಾತ : ಮಂಗಳೂರಿನ ಯುವ ಪೊಲೀಸ್ ಸಿಬ್ಬಂದಿ ಹೃದಯಾಘಾತದಿಂದ ಮೃತ್ಯು

Dakshina Kannada death news young police dies due to heart attack in Mangalore latest news

Dakshina Kannada : ಯುವ ಜನತೆ ಇಂದಿಗೆ ಹೃದಯಾಘಾತಕ್ಕೆ ತುತ್ತಾಗಿರುವ ಘಟನೆ ಹಲವು ನಡೆದಿದೆ(Dakshina Kannada news). ಇದೀಗ ಪೊಲೀಸ್‌ ಇಲಾಖೆಯ ಸಿಬ್ಬಂದಿಯೋರ್ವರು ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆಯೊಂದು ನಡೆದಿದೆ. ಮಂಗಳೂರು ಸಶಸ್ತ್ರ ಮೀಸಲು ಪಡೆಯ ಪೊಲೀಸ್‌ ಸಿಬ್ಬಂದಿಯಾದ ಸೋಮನ ಗೌಡ ಚೌಧರಿ (31) ಮೃತಪಟ್ಟ ಪೊಲೀಸ್‌ ಸಿಬ್ಬಂದಿ.

ಸೋಮನ ಗೌಡ ಅವರು ಮೂಲತಃ ಬಿಜಾಪುರ ಜಿಲ್ಲೆಯವರು. ವಯರ್‌ಲೆಸ್‌ ಇನ್ಸ್‌ಪೆಕ್ಟರ್‌ ವಾಹನಕ್ಕೆ ಚಾಲಕನಾಗಿ ಕರ್ತವ್ಯ ಮಾಡುತ್ತಿದ್ದರು. ಡೆಂಗ್ಯೂ ಜ್ವರ ಬಂದಿದ್ದರಿಂದ ಇನ್ಸ್‌ಪೆಕ್ಟರ್‌ ಅವರನ್ನು ನಗರದ ಫಳ್ನೀರ್‌ ನಲ್ಲಿರುವ ಖಾಸಗಿ ಆಸ್ಪತ್ರೆಗೆ ಮಂಗಳವಾರ ಬೆಳಿಗ್ಗೆ ಕರೆದುಕೊಂಡು ಹೋಗಿದ್ದರು ಸೋಮನ ಗೌಡ ಅವರು.

ಅನಂತರ ಅಧಿಕಾರಿಯನ್ನು ಆಸ್ಪತ್ರೆ ಬಳಿ ಬಿಟ್ಟು, ವಾಹನ ಪಾರ್ಕ್‌ ಮಾಡಲು ಹೋದಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ. ಸ್ಥಳೀಯರು ಕೂಡಲೇ 112ಗೆ ಕರೆ ಮಾಡಿದ್ದು, ವೆನ್ಲಾಕ್‌ ಆಸ್ಪತ್ರೆಗೆ ದಾಖಲು ಮಾಡಲೆಂದು ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ದಾರಿಮಧ್ಯೆ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕಳೆದ ಏಳು ವರ್ಷಗಳಿಂದ ನಗರ ಸಶಸ್ತ್ರದಳಲ್ಲಿ ಇದ್ದ ಸೋಮನ ಗೌಡ ಅವರು ವಿವಾಹಿತರು. ಈ ಘಟನೆ ಕುರಿತು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1 Comment
  1. dobry sklep says

    Wow, marvelous blog layout! How lengthy have you ever been running a
    blog for? you made running a blog glance easy.
    The entire glance of your website is excellent, let alone the content!
    You can see similar here najlepszy sklep

Leave A Reply

Your email address will not be published.