ಕಡಬ : ಚಲಿಸುತ್ತಿದ್ದ ರಿಕ್ಷಾ ಪಲ್ಟಿ ,ಚಾಲಕ ಮೃತ್ಯು

Latest news death news Driver dies in moving rickshaw accident

Kadaba: ಚಲಿಸುತ್ತಿದ್ದ ಅಟೋ ರಿಕ್ಷಾ ಪಲ್ಟಿಯಾಗಿ ಗಾಯಗೊಂಡ ಚಾಲಕ ಅಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ.

ರಾಮಕುಂಜ ಗ್ರಾಮದ ಇರ್ಕಿ ನಿವಾಸಿ, ಗೊಳಿತ್ತಡಿ ರಿಕ್ಷಾ ನಿಲ್ದಾಣದಲ್ಲಿ ಬಾಡಿಗೆ ನಡೆಸುತ್ತಿದ್ದ ದಿನೇಶ್ ಮಡಿವಾಳ (40ವ.) ಮೃತಪಟ್ಟವರು.

ಬಜತ್ತೂರು ಸಮೀಪದ ಅಯೋದ್ಯಾನಗರ – ಪೊರೋಳಿ ರಸ್ತೆ ತನ್ನ ಬಾಡಿಗೆ ರಿಕ್ಷಾದಲ್ಲಿ ಚಲಿಸುತ್ತಿದ್ದಾಗ ಸ್ಕಿಡ್ ಅಗಿ ಪಲ್ಟಿಯಾಗಿದೆ.

ಈ ವೇಳೆ ಗಾಯಗೊಂಡ ದಿನೇಶ್ ಅವರನ್ನು ಮಂಗಳೂರಿನ ವೆನ್ಲಾಕ್ ಅಸ್ಪತ್ರೆಗೆ ದಾಖಲಿಸಲಾಯಿತು. ಅದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಡಿದ್ದಾರೆ.

ಈ ಬಗ್ಗೆ ಪುತ್ತೂರು ಸಂಚಾರಿ ಠಾಣೆಗೆ ಮೃತರ ತಂದೆ ಪದ್ಮಯ್ಯ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಮೃತರ ಗೌರವಾರರ್ಥ ಗೊಳಿತ್ತಡಿ ರಿಕ್ಷಾ ತಂಗುದಾನದ ರಿಕ್ಷಾ ಚಾಲಕರು ದಿನವಿಡಿ ಬಾಡಿಗೆ ನಡೆಸದೆ ಸಂತಾಪ ಸೂಚಿಸಿದರು.
ತಾಯಿ, , ಪತ್ನಿ , ಪುತ್ರಿ, ಅಗಲಿದ್ದಾರೆ.

 

ಇದನ್ನು ಓದಿ: Shivamogga: ಶಿವಮೊಗ್ಗದ ಬೀದಿ ಬೀದಿಗಳಲ್ಲಿ ಪಾಕಿಸ್ತಾನ, ಅಖಂಡ ಮುಸ್ಲಿಂ ಭಾರತ, ಸಾಬ್ರು ಸಾಮ್ಯಾಜ್ಯ ಎಂಬ ದ್ವಾರ ಬಾಗಿಲು ಅಳವಡಿಕೆ !! ಇದೇನು ಭಾರತವೋ ಇಲ್ಲಾ, ಪಾಕಿಸ್ತಾನವೋ ?!

 

 

Leave A Reply

Your email address will not be published.