Roopesh shetty: ಧರ್ಮಸ್ಥಳ ಸೌಜನ್ಯ ಪ್ರಕರಣದ ಕುರಿತು ಕೊನೆಗೂ ಮೌನ ಮುರಿದ ರೂಪೇಶ್ ಶೆಟ್ಟಿ- ಕೊರಗಜ್ಜನ ಬಳಿ ಕರಾವಳಿ ನಟ ಬೇಡಿದ್ದೇನು ?!

Sandalwood news Dharmastala news actor Roopesh Shetty says about Dharmasthala Sowjanya case

Roopesh shetty: ಧರ್ಮಸ್ಥಳ ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವುಗುಗಳನ್ನು ಪಡೆದುಕೊಳ್ಳುತ್ತಿದೆ. ಪ್ರತಿದಿನವೂ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಈ ಪ್ರಕರಣವು ಮರುತನಿಗೆ ಆಗಬೇಕೆಂದು ಸಾಥ್ ನೀಡುತ್ತಿದ್ದಾರೆ. ಕೆಲವು ಚಿತ್ರನಟರೂ ಇದಕ್ಕೆ ಬೆಂಬಲ ಸೂಚಿಸಿ ಮಹತ್ವದ ನಿರ್ದಧಾರಗಳನ್ನು ಮಾಡಿದ್ದಾರೆ. ಇದೀಗ ಕರಾವಳಿಯ ಯುವನಟ ಹಾಗೂ ಕರ್ನಾಟಕದಾದ್ಯಂತ ಪ್ರಸಿದ್ಧಿ ಪಡೆದಿರುವ ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ(Roopesh shetty) ಈ ಪ್ರಕರಣದ ಕುರಿತು ಮೌನವನ್ನು ಮರಿದಿದ್ದಾರೆ.

ಹೌದು, ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುವ ಮೂಲಕ ರೂಪೇಶ್ ಶೆಟ್ಟಿ ಸೌಜನ್ಯಳ ಪರ ಧ್ವನಿ ಎತ್ತಿ ನ್ಯಾಯ ಬೇಡಿದ್ದಾರೆ. ಮನುಷ್ಯರ ಕೋರ್ಟ್ ನಲ್ಲಿ ನ್ಯಾಯ ಸಿಗದಿದ್ದರೂ ದೇವರ ನ್ಯಾಯಾಲಯದಲ್ಲಿ ಸೌಜನ್ಯಳಿಗೆ ಖಂಡಿತಾ ನ್ಯಾಯ ಸಿಗುತ್ತದೆ. ಆದರೆ ಅದು ಆದಷ್ಟೂ ಬೇಗ ದೊರಕಲಿ ಎಂದು ಕೊರಗಜ್ಜನಲ್ಲಿ ಬೇಡುತ್ತೇನೆ ಎಂದಿದ್ದಾರೆ.

ವಿಡಿಯೋದಲ್ಲಿ ಏನಿದೆ?
‘ಸುಮಾರು 12 ವರುಷಗಳ ಹಿಂದೆ ನಮ್ಮ ತುಳುನಾಡಿನ ಹೆಣ್ಣುಮಗಳು ಸೌಜನ್ಯಳ ಮೇಲೆ ಅತ್ಯಾಚಾರ ಮಾಡಿ ಅತಿ ಕ್ರೂರವಾಗಿ ಕೊಲೆಮಾಡಲಾಯಿತು. ದುರಂತ ಅಂದರೆ ಇದುವರೆಗೂ ಕೂಡ ಆ ಸಾವಿಗೆ ನ್ಯಾಯ ಸಿಕ್ಕಿಲ್ಲ. ಸದ್ಯದದ ಪರಿಸ್ಥಿತಿಯಲ್ಲಿ ಆ ಹೆಣ್ಣುಮಗಳಿಗೆ ಯಾರು, ಏನು ಮಾಡಿದರು ಎಂಬ ಬಗ್ಗೆ ಉತ್ತರವಿಲ್ಲ. ಆಕೆಯ ಸಾವಿಗೆ ನ್ಯಾಯ ಬೇಗ ಸಿಗುವಂತಾಗಲಿ’.

‘ಬಹುಶಃ ಮನುಷ್ಯ ರೂಪಿಸಿದ ಕಾನೂನಿನಲ್ಲಿ, ಮನುಷ್ಯ ರೂಪಿಸಿದ ಕೋರ್ಟ್ ಗಳಲ್ಲಿ ಆಕೆಗೆ ನ್ಯಾಯ ಸಿಗದಿರಬಹುದು. ಆದರೆ ದೇವತೆಗೆ ನ್ಯಾಯಾಲಯದಲ್ಲಿ, ದೈವ ದೇವರುಗಳ ಸನ್ನಿಧಿಯಲ್ಲಿ ಆಕೆಗೆ ಖಂಡಿತಾ ನ್ಯಾಯ ಸಿಕ್ಕೇ ಸಿಗುತ್ತದೆ. ಯಾಕೆಂದರೆ ಅಲ್ಲಿ ವಾದ-ವಿವಾದಗಳು ಏನೂ ಇರುವುದಿಲ್ಲ. ಸಾಕ್ಷಿಗಳು ಬೇಕೆಂಬುದು ಇಲ್ಲ. ಕೇವಲ ಸತ್ಯಕ್ಕೆ ಮಾತ್ರ ಜಯ. ಹೀಗಾಗಿ ಆದಷ್ಟು ಬೇಗ ಆ ನ್ಯಾಯ ದೊರಕಲಿ ಎಂದು ಕೊರಗಜ್ಜನಲ್ಲಿ ನಾನು ಬೇಡುತ್ತೇನೆ’. ಒಟ್ಟಿನಲ್ಲಿ ಯಾರು ಆ ಪೈಶಾಚಿ ಕೃತ್ಯ ಎಸಗಿದ್ದಾನೋ ಅವರಿಗೆ ದೇವರು ಕಠಿಣ ಶಿಕ್ಷೆ ನೀಡುತ್ತಾನೆ ಎನ್ನುವ ಭರವಸೆ ನನಗಿದೆ’.

‘ಸೌಜನ್ಯಳಿಗೆ ಆದಂತಹ ಅನ್ಯಾಯ ದೇಶದ ಯಾವ ಮೂಲೆಯ ಹೆಣ್ಣುಮಗಳಿಗೂ ಆಗಬಾರದು. ದೇವರಿಗೆ ತಿಳಿದಂತಹ ಸತ್ಯ ಆದಷ್ಟು ಬೇಗ ಎಲ್ಲರಿಗೂ ತಿಳಿಯಲಿ. ಸೌಜನ್ಯಳಿಗೆ ಈ ರೀತಿ ಮಾಡಿದವರು ಮನುಷ್ಯರಲ್ಲ. ಮನುಷ್ಯ ಮೃಗಗಳು. ಈ ಮೃಗಗಳನ್ನು ಆದಷ್ಟು ಬೇಗ ದೇವರು ಮಟ್ಟ ಹಾಕಲಿ ಎಂದು ಬೇಡುತ್ತೇನೆ’ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: New scheme: ರಾಜ್ಯ ಸರ್ಕಾರದಿಂದ ಬರ್ತಿದೆ ಮತ್ತೊಂದು ಹೊಸ ಯೋಜನೆ – ಈ ಭಾಗದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್

Leave A Reply

Your email address will not be published.