ಮಂಗಳೂರು: ಕರ್ನಾಟಕ ಬಂದ್‌ ಹಿನ್ನೆಲೆ; ನಾಳೆ(ಸೆ.29) ದ.ಕ.ದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇದೆಯಾ? – ಜಿಲ್ಲಾಧಿಕಾರಿ ಸ್ಪಷ್ಟನೆ

Dakshina Kannada:  ಸೆ.29 ರಂದು( ನಾಳೆ) ಕನ್ನಡ ಪರ ಸಂಘಟನೆಗಳು ಮತ್ತು ವಿವಿಧ ರಾಜಕೀಯ ಪಕ್ಷಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದೆ. ಹಾಗಾಗಿ ಶಾಲಾ ಕಾಲೇಜಿಗೆ ರಜೆ ಇದೆಯೋ ಇಲ್ಲವೋ ಎಂಬ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ.  ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ನೀಡುವ ಅಧಿಕಾರವನ್ನು ಶಿಕ್ಷಣ ಇಲಾಖೆ ಜಿಲ್ಲಾಧಿಕಾರಿಗೆ ನೀಡಿದ್ದಾರೆ. ಈ ಕುರಿತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್‌ಗೆ ಬೆಂಬಲ ಇಲ್ಲದಿರುವುದರಿಂದ ಶಾಲಾ ಕಾಲೇಜಿಗೆ ರಜೆ ಇಲ್ಲ, ಹಾಗೂ ಎಂದಿನಂತೆ ಶಾಲಾ ಕಾಲೇಜು ಇರಲಿದೆ ಎಂದು ಹೇಳಿದ್ದಾರೆ.

ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧ ಮಾಡಿ ಹಲವು ಸಂಘಟನೆಗಳು ನಾಳೆ ಬಂದ್‌ಗೆ ಕರೆ ನೀಡಿತ್ತು. ಕರಾವಳಿಯಲ್ಲಿ ಇದಕ್ಕೆ ಖಾಸಗಿ ಬಸ್‌ ಸಂಘಟನೆಯು ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ ನೀಡಿದೆ. ಆದರೆ ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳು ಎಂದಿನಂತೆ ಸಂಚರಿಸಲಿದೆ. ಖಾಸಗಿ ಬಸ್‌ ಒಕ್ಕೂಟ ಬಸ್‌ ಎಂದಿನಂತೆ ಇರಲಿದೆ ಎಂದಿದೆ. ಉಡುಪಿ-ಮಂಗಳೂರಿನಲ್ಲಿ ಹೋಟೆಲ್‌ಗಳು ನಾಳೆ ತೆರೆದಿರಲಿದೆ. ಶುಕ್ರವಾರ ಬಂದ್‌ ಇದ್ದರೂ ಕರಾವಳಿ ಜಿಲ್ಲೆಗಳನ್ನು ಜನಜೀವನ ಎಂದಿನಂತೆ ಇರಲಿದೆ.

ಇದನ್ನೂ ಓದಿ: ದ.ಕ: ಕಾವೇರಿಗಾಗಿ ಕರ್ನಾಟಕ ಬಂದ್ ಹಿನ್ನೆಲೆ!! ಕರಾವಳಿಗೂ ತಟ್ಟಲಿದ್ಯಾ ಬಂದ್ ಬಿಸಿ! ಪ್ರಮುಖರು ಹೇಳಿದ್ದೇನು??

Leave A Reply

Your email address will not be published.