Ujire: ಬೆಳ್ತಂಗಡಿ ಪೊಲೀಸರ ಬಲೆಗೆ ಬಿದ್ದ ಖತರ್ನಾಕ್ ಕಳ್ಳ ! ಅಂತರಾಜ್ಯ ಕಳ್ಳ ಬಲೆಗೆ ಬಿದ್ದದ್ದೇ ರೋಚಕ

dakshina kannada news natorious criminal arrested by belthangady police on theft case

ಉಜಿರೆ: ಆಗಸ್ಟ್‌ 12 ರಂದು ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದಲ್ಲಿ ಫೆಲಿಕ್ಸ್‌ ಎಂಬುವವರ ಮನೆಗೆ ಯಾರೂ ಇಲ್ಲದ ಸಮಯದಲ್ಲಿ ಮನೆಯ ಹಿಂಬಾಗಿಲಿನ ಮೂಲಕ ನುಗ್ಗಿ 15 ಪವನ್‌ ಚಿನ್ನಾಭರಣ, ಮತ್ತು 20 ಸಾವಿರ ಹಣ ಕಳ್ಳತನ ಮಾಡಲಾಗಿತ್ತು. ಈ ಕುರಿತು ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಈ ಪ್ರಕರಣ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಈ ಪ್ರಕರಣದ ಆರೋಪಿ ತಮಿಳುನಾಡು ಜಿಲ್ಲೆಯ ಕನ್ಯಾಕುಮಾರಿ ನಿವಾಸಿ ಉಮೇಶ್‌ ಬಳೆಗಾರ (46) ಎಂಬಾತನನ್ನು ಮೈಸೂರು ಜಿಲ್ಲೆಯ ಝೂ ಪಾರ್ಕ್‌ನಲ್ಲಿ ಸೆ.26 ರಂದು ವಶಕ್ಕೆ ಪಡೆಯಲಾಗಿತ್ತು. ನಂತರ ಪೊಲೀಸರು ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಿ ಎರಡು ದಿನ ಪೊಲೀಸ್‌ ಕಸ್ಟಡಿಯಲ್ಲಿಟ್ಟಿದ್ದರು. ಇದೀಗ ಈತನಿಂದ ಕದ್ದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ನಂತರ ಸೆ.28ರಂದು (ಇಂದು) ಕಳ್ಳತನ ನಡೆಸಿದ ಮನೆಗೆ ಈತನನ್ನು ಪೊಲೀಸರು ಕರೆದುಕೊಂಡು ಹೋಗಿ ಮಹಜರು ಮಾಡಿದ್ದಾರೆ.

ಘಟನೆಯ ವಿವರ: ಮೂಲತಃ ಆಂಧ್ರಪ್ರದೇಶವನಾದ ಆರೋಪಿ ಉಮೇಶ್‌ ಬಳೆಗಾರ, ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಕಳ್ಳತನದ ಫೀಲ್ಡ್‌ಗೆ ಇಳಿದಿದ್ದ. ಈತನಿಗೆ ಬರೋಬ್ಬರಿ 9 ಭಾಷೆ ಮಾತನಾಡಲು ಬರುತ್ತದೆ. ಈತನಿಗೆ ಮೊದಲೊಂದು ಮದುವೆಯಾಗಿದ್ದು, ಇದರಲ್ಲಿ ಆತನಿಗೆ ಮೂವರು ಮಕ್ಕಳಿದ್ದು, ಈ ಮಕ್ಕಳು ಕೂಡಾ ಕಳ್ಳತನದಲ್ಲಿ ಪರಿಣಿತಿ ಹೊಂದಿದ್ದಾರೆ. ಈತನ ಮೊದಲ ಪತ್ನಿ ಸಾವಿಗೀಡಾದ ನಂತರ ತಮಿಳುನಾಡಿನ ಕನ್ಯಾಕುಮಾರಿಯ ಮಹಿಳೆಯೋರ್ವಳನ್ನು ಎರಡನೇ ಮದುವೆಯಾಗಿದ್ದಾನೆ. ಇದರಿಂದ ಆತನಿಗೆ ಎರಡು ಮಕ್ಕಳಿದೆ. ಈತ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದಾನೆ.

ಈತನಿಗೆ ಕೇರಳದಲ್ಲಿ 10, ತಮಿಳುನಾಡಿನಲ್ಲಿ 10, ಆಂಧ್ರಪ್ರದೇಶದಲ್ಲಿ 5, ಕರ್ನಾಟಕದ ಬೆಂಗಳೂರು, ಉಡುಪಿ, ಮೈಸೂರು, ಚಿಕ್ಕಮಗಳೂರು ಸೇರಿ ಬಂಟ್ವಾಳ, ಬೆಳ್ತಂಗಡಿ, ಮೂಡಬಿದಿರೆ, ಪುತ್ತೂರಿನಲ್ಲಿ ಪ್ರಕರಣಗಳು ಇವೆ.
ಈತ ಕಳ್ಳತನ ಪ್ರಕರಣದಲ್ಲಿ ರಾಜ್ಯದ ವಿವಿಧ ಜೈಲಿನಲ್ಲಿದ್ದ. ಜಾಮೀನು ಪಡೆದು ಹೊರ ಬಂದು ಮತ್ತೆ ನ್ಯಾಯಾಲಯಕ್ಕೆ ಹಾಜರಾಗುತ್ತಿರಲಿಲ್ಲ. ಈತನಮೇಲೆ ನಾಲ್ಕು ರಾಜ್ಯದ ನ್ಯಾಯಾಲಯದಿಂದ ವಾರೆಂಟ್‌ ಜಾರಿಯಾಗುತ್ತಿತ್ತು. ಹಾಗಾಗಿ ಪೊಲೀಸರು ಈತನನ್ನು ಹುಡುಕುತ್ತಿದ್ದರು.

ಈತ ತಾನು ಕಳ್ಳತನ ಮಾಡಲೆಂದು ಹೋಗುವಾಗ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕರೆದುಕೊಂಡು ಸ್ಥಳೀಯ ವಸತಿಗೃಹದಲ್ಲಿ ಉಳಿದು, ನಂತರ ಹಗಲು ಹೊತ್ತಿನಲ್ಲಿ ಅವರನ್ನು ಅಲ್ಲಿ ಬಿಟ್ಟು, ಒಬ್ಬಂಟಿಯಾಗಿ ಹೋಗಿ ಕಳ್ಳತನ ಮಾಡಿ ಬಂದು ನಂತರ ಬೇರೆ ಜಿಲ್ಲೆಗೆ ಹೋಗಿ ರೂಂ ಮಾಡುತ್ತಿದ್ದ.

 

 

ಇದನ್ನು ಓದಿ: Chandrayan-3: ಭಾರತದ ವಿಕ್ರಮ್ ಹಾಗೂ ಪ್ರಗ್ಯಾನ್ ನೌಕೆಗಳು ಚಂದ್ರನ ದಕ್ಷಿಣ ದ್ರುವದಲ್ಲಿ ಇಳಿದಿಲ್ಲ !! ಅರೆ ಏನಿದು ಶಾಕಿಂಗ್ ನ್ಯೂಸ್ ?!!

Leave A Reply

Your email address will not be published.