Karnataka bandh: ಕಾವೇರಿಗಾಗಿ ಕರ್ನಾಟಕ ಬಂದ್ ಹಿನ್ನೆಲೆ!! ಕರಾವಳಿಗೂ ತಟ್ಟಲಿದ್ಯಾ ಬಂದ್ ಬಿಸಿ-ಪ್ರಮುಖರು ಹೇಳಿದ್ದೇನು??

Cauvery water issue what did Mangaluru private bus owner association said about Karnataka bandh

Karnataka bandh: ರಾಜ್ಯಾದ್ಯಂತ ರೈತಪರ ಸಂಘಟನೆಗಳು ನಾಳೆ (ಸೆ.29) ಸರಕಾರದ ವಿರುದ್ಧ ಕರ್ನಾಟಕ ಬಂದ್‌ಗೆ (Karnataka bandh)ಕರೆ ನೀಡಿದೆ. ತಮಿಳುನಾಡಿಗೆ ಕಾವೇರಿ ನೀರು (Cauvery Water) ಬಿಡುವ ಕುರಿತು ಸುಪ್ರೀಂ ಕೋರ್ಟ್‌ ಆದೇಶ ನೀಡಿತ್ತು. ಇದರ ಪ್ರಕಾರ ತಮಿಳುನಾಡಿಗೆ ನೀರು ಬಿಡಲು ಆದೇಶ ನೀಡಿತ್ತು. ಹೀಗಾಗಿ ಸೆ.26 ರಂದು ಈಗಾಗಲೇ ವಿವಿಧ ಸಂಘಟನೆಗಳು ಬೆಂಗಳೂರು ಬಂದ್‌ಗೆ ಕರೆ ನೀಡಿತ್ತು.

ನಾಳೆ ಬಸ್‌, ಕ್ಯಾಬ್‌, ಹೋಟೆಲ್‌ ಸೇರಿದಂತೆ ಅನೇಕ ಸಂಘಟನೆಗಳು ರಾಜ್ಯಾದ್ಯಂತ ಬೆಂಬಲ ಸೂಚಿಸಿದೆ. ಈ ಮಧ್ಯೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಖಾಸಗಿ ಬಸ್‌ ಮಾಲೀಕರ ಸಂಘದಿಂದ ಬಂದ್‌ಗೆ
ಬೆಂಬಲವಿಲ್ಲ, ನಾಳೆ ಎಂದಿನಂತೆ ಖಾಸಗಿ ಸಿಟಿ ಬಸ್‌, ಸರ್ವಿಸ್‌ ಬಸ್‌ ಸಂಚಾರ ಮಾಡಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಸಗಿ ಬಸ್‌ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ದಿಲ್‌ ರಾಜ್‌ ಆಳ್ವ ಹೇಳಿದ್ದಾರೆಂದು ಟಿವಿ9 ಮಾಧ್ಯಮ ಪ್ರಕಟ ಮಾಡಿದೆ.

ಕರಾವಳಿ ಭಾಗದಲ್ಲಿ ಈ ಬಂದ್‌ ಬಿಸಿ ಇರುವುದಿಲ್ಲ ಎನ್ನಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳು ಹೆಚ್ಚಿರುವುದರಿಂದ ಬಸ್‌ ಮಾಲಕರ ಸಂಘ ಬಂದ್‌ ಕರೆಗೆ ಬೆಂಬಲ ನೀಡಿಲ್ಲ. ನೈತಿಕವಾಗಿ ಬೆಂಬಲ ನೀಡುತ್ತೇವೆ, ಪ್ರತಿಭಟನೆ ಮಾಡಲ್ಲ. ಈ ಮೊದಲು ಪರಿಸರಕ್ಕೆ ಮಾರಕವಾದ ಎತ್ತಿನಹೊಳೆ ಯೋಜನೆ ಬೇಡ ಎಂದಾಗ, ಆ ಭಾಗದ ಶಾಸಕರು, ಕನ್ನಡಪರ ಹೋರಾಟಗಾರರು ಬೆಂಬಲಿಸಿರಲಿಲಲ್ಲ, ನಾವು ಬಂದ್‌ಗೆ ಕರೆ ಕೊಟ್ಟರೂ ಕರ್ನಾಟಕ ಬಂದ್‌ ಆಗಿರಲಿಲ್ಲ. ನೀರು ಎಲ್ಲರ ಹಕ್ಕು ಎಂಬ ವಾದ ಮಂಡಿಸಿದರು. ತುಳು ಭಾಷೆ ರಾಜ್ಯದಲ್ಲಿ ಎರಡನೇ ರಾಜ್ಯ ಭಾಷೆ ಆಗಬೇಕೆಂದು ಒತ್ತಾಯ ಮಾಡಿದೆವು. ಆದರೆ ಈ ಭಾಗ ಶಾಸಕರು ಧ್ವನಿಯೆತ್ತಿದರೂ, ಆ ಭಾಗದ ಶಾಸಕರು ದೈವ ದೇವರ ಹೆಸರಲ್ಲಿ ತಮಾಷೆ ದೃಷ್ಟಿಯಲ್ಲಿ ನೋಡಿದರು ಎಂದು ಹೇಳಿದರು ಎಂದು ಮಾಧ್ಯಮ ಪ್ರಕಟಣೆ ಮಾಡಿದೆ.

ಇದನ್ನೂ ಓದಿ:  BPL ಕಾರ್ಡ್ ದಾರರಿಗೆ ಬಿಗ್ ಶಾಕ್-ಅನ್ನಭಾಗ್ಯದ ಅಕ್ಕಿ ಹಣಕ್ಕೆ ಬಿತ್ತು ಕತ್ತರಿ !! ಸರ್ಕಾರದಿಂದ ಮಹತ್ವದ ನಿರ್ಧಾರ !!

Leave A Reply

Your email address will not be published.