Eye Care: ಮೊಬೈಲ್ ನೋಡಿ ನೋಡಿ ಕಣ್ಣು ನೋವು ಬರ್ತಿದೆಯಾ?! ಹಾಗಿದ್ರೆ ಇಲ್ಲಿದೆ ನೋಡಿ ಪರಿಹಾರ !

some tips if your eyes hurt after looking at the mobile

Eye care: ಕಣ್ಣುಗಳು (Eyes) ಸಂಪೂರ್ಣ ದೇಹದ ಆರೋಗ್ಯದ (Body Health) ಗುಟ್ಟು ಹೇಳುವ ಅಂಗಗಳಾಗಿವೆ (Parts). ಅಷ್ಟೇ ಅಲ್ಲದೇ ಸೌಂದರ್ಯವನ್ನು (Beauty) ಇಮ್ಮಡಿಗೊಳಿಸುವ ಪ್ರಮುಖ ಅಂಗವಾಗಿದೆ. ಆದರೆ ಇತ್ತೀಚಿಗೆ ತುಂಬಾ ಜನರು (People) ದಪ್ಪ ಕನ್ನಡಕ ಧರಿಸುವ ಸ್ಥಿತಿ ಬಂದೊದಗಿದೆ. ಜನರು ಹೆಚ್ಚೆಚ್ಚು ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್, ನೋಡುತ್ತಾ, ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್, ವಿಡಿಯೋ, ವೆಬ್ ಸ್ಟೋರಿಸ್ ನೋಡುತ್ತಾ ಸಮಯ ಕಳೆಯುತ್ತಾರೆ. ಈ ವೇಳೆ ಕಣ್ಣುಗಳು ಹೆಚ್ಚು ಆಯಾಸಗೊಳ್ಳುತ್ತವೆ. ನಿಮಗೂ ಮೊಬೈಲ್ ನೋಡಿ ನೋಡಿ ಕಣ್ಣು ನೋವು (Eye care) ಬರ್ತಿದೆಯಾ?! ಹಾಗಿದ್ರೆ ಇಲ್ಲಿದೆ ನೋಡಿ ಪರಿಹಾರ!

ಕಣ್ಣಿನ ತಜ್ಞರ ಪ್ರಕಾರ, ಜನರ ಕಣ್ಣುಗಳು ಗಂಟೆಗಟ್ಟಲೆ ಮೊಬೈಲ್ ಪರದೆಯ ಮೇಲೆ ನಿಂತಿರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಕೆಲವರು ಕಣ್ಣು ಮಿಟುಕಿಸುವುದನ್ನು ಸಹ ಮರೆತು ಬಿಡುತ್ತಾರೆ. ಒಣ ಕಣ್ಣುಗಳಿಗೆ ಇದು ದೊಡ್ಡ ಕಾರಣ. ಎಂಟು-ಒಂಬತ್ತು ಗಂಟೆಗಳ ಕಾಲ ನಿರಂತರವಾಗಿ ಮೊಬೈಲ್ ನೋಡುವುದರಿಂದ ಹಲವು ಆರೋಗ್ಯ ಸಮಸ್ಯೆ (Health Problem)ಗಳು ಕಾಣಿಸಿಕೊಳ್ಳಬಹುದು ಎಂದು ಹೇಳಲಾಗಿದೆ.

ಸದ್ಯ ಮೊಬೈಲ್ ಎಫೆಕ್ಟ್ ನಿಂದ ದೃಷ್ಟಿ ಸಮಸ್ಯೆಯೂ ಉಲ್ಬಣಗೊಳ್ಳುತ್ತದೆ. ಹಾಗಾಗಿ ದೃಷ್ಟಿ ಸುಧಾರಿಸುವ ಆಹಾರಗಳ ಬಗ್ಗೆ ವಿಶೇಷ ಗಮನ ನೀಡಬೇಕು. ಲುಟೀನ್ ಮತ್ತು ಜಿಯಾಕ್ಸಾಂಥಿನ್ ಅಂಶಗಳು ಹೆಚ್ಚು ಇರುವ ಆಹಾರಗಳನ್ನು ಪ್ರತಿದಿನ ಸೇವಿಸಬೇಕು.
ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಹಸಿರು ತರಕಾರಿಗಳನ್ನು ಸೇವಿಸುವುದರಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದ ವಿಟಮಿನ್ ಎ ಮತ್ತು ವಿಟಮಿನ್ ಸಿ ದೊರೆಯುತ್ತದೆ.

ಕೋಸುಗಡ್ಡೆ: ಕೋಸುಗಡ್ಡೆಯಲ್ಲಿ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಅಂಶ ಸಮೃದ್ಧವಾಗಿವೆ. ಈ ಅಂಶಗಳು ಕಣ್ಣಿನ ರೆಟಿನಾದ ಆ್ಯಕ್ಸಿಡೇಷನ್​ಗೆ ಸಂಬಂಧಿಸಿದ ಎಲ್ಲ ರೀತಿಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಅದರಲ್ಲೂ ಲ್ಯಾಪ್ ಟಾಪ್, ಮೊಬೈಲ್ ಬಳಸುವವರು ಕೋಸುಗಡ್ಡೆ ಸೇವಿಸಿದರೆ ಕಣ್ಣಿನ ಸಮಸ್ಯೆ ಬರುವುದಿಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಪಾಲಕ್​: ಪಾಲಕ್ ಸೊಪ್ಪು ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶವನ್ನು ಒದಗಿಸುತ್ತದೆ. ಪಾಲಕ್ ಸೊಪ್ಪಿನ ಸೇವನೆಯಿಂದ ಅನೇಕ ರೀತಿಯ ಆರೋಗ್ಯ (Health) ಸಮಸ್ಯೆಗಳು ನಿವಾರಣೆಯಾಗುತ್ತವೆ. ಅಲ್ಲದೆ, ಇದು ದೃಷ್ಟಿ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಲುಟೀನ್ ಮತ್ತು ಜಿಯಾಕ್ಸಾಂಥಿನ್‌ನಂತಹ ಆ್ಯಂಟಿ ಆ್ಯಕ್ಸಿಡೆಂಟ್‌ಗಳು ದೃಷ್ಟಿಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇದು ದೇಹಕ್ಕೆ ವಿಟಮಿನ್ ಎ ಅನ್ನು ಸಹ ನೀಡುತ್ತದೆ. ಆದ್ದರಿಂದ ತೀವ್ರ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಪಾಲಕ್ ಸಲಾಡ್ ಸೇವಿಸಬೇಕು.

 

ಇದನ್ನು ಓದಿ: ಬೆಳ್ತಂಗಡಿ ಪೊಲೀಸರ ಬಲೆಗೆ ಬಿತ್ತ ಖತರ್ನಾಕ್ ಕಳ್ಳ ! ಅಂತರಾಜ್ಯ ಕಳ್ಳ ಬಲೆಗೆ ಬಿದ್ದದ್ದೇ ರೋಚಕ

Leave A Reply

Your email address will not be published.