Suicide at BJP MLA’s house: ಬಿಜೆಪಿ ಶಾಸಕನ ಮನೆಯಲ್ಲೇ 24ರ ಯುವಕ ಆತ್ಮಹತ್ಯೆಗೆ ಶರಣು – ಕಾರಣ ಕೇಳಿದ್ರೆ ನೀವೇ ಶಾಕ್ !!

Political news Lucknow news youth suicide inside BJP MLA official residence latest news

Suicide at MLA house: ಬಿಜೆಪಿ ಶಾಸಕರ ಮನೆಯಲ್ಲೇ ಯುವಕನೊಬ್ಬ ಆತ್ಮಹತ್ಯೆಗೆ(Suicide at BJP MLA house) ಶರಣಾಗಿರುವಂತಹ ಅಘಾತಕಾರಿ ಘಟನೆಯೊಂದು ಭಾನುವಾರ ರಾತ್ರಿ ನಡೆದಿದೆ.

ಹೌದು, ಉತ್ತರ ಪ್ರದೇಶದ(Uttar pradesh) ಲಖನೌದ ಬಕ್ಷಿ ಕಾ ತಲಾಬ್ ನ ಬಿಜೆಪಿ ಶಾಸಕ ಯೋಗೇಶ್ ಶುಕ್ಲಾ ಅವರ ಹಜರತ್ ಗಂಜ್ ನಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕ ಶಾಸಕರ ಮಾಧ್ಯಮ ಸಲಹೆಗಾರ ಎಂದು ತಿಳಿದುಬಂದಿದೆ. ಶ್ರೇಷ್ಠ ತಿವಾರಿ (24) ಆತ್ಮಹತ್ಯೆಗೆ ಶರಣಾದ ಯುವಕ. ಮೃತ ತಿವಾರಿ ಬಾರಾಬಂಕಿ ಜಿಲ್ಲೆಯ ಹೈದರ್​ಗಢ ಏರಿಯಾದ ನಿವಾಸಿ.

ಅಂದಹಾಗೆ ತಿವಾರಿ ಅವರು ಲಖನೌದ ಬಕ್ಷಿ ಕಾ ತಲಾಬ್ ಅಸೆಂಬ್ಲಿ ಕ್ಷೇತ್ರದ ಶಾಸಕ ಯೋಗೇಶ್ ಶುಕ್ಲಾರಿಗೆ ಸಂಬಂಧಿಸಿದ ಮಾಧ್ಯಮ ತಂಡದ ಸದಸ್ಯರಾಗಿದ್ದರು. ಶುಕ್ಲಾ ಅವರ ಹಜರತ್‌ಗಂಜ್ ನಿವಾಸದಲ್ಲಿ ನೇಣು ಬಿಗಿದುಕೊಂಡು ತಿವಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೆ ಕಾರಣವೇನು?
ಪ್ರೀತಿಸಿದ ಯುವತಿಯೊಂದಿಗೆ ಗಲಾಟೆ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಶ್ರೇಷ್ಠ ತಿವಾರಿ ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದರು. ಇತ್ತೀಚೆಗೆ ಇಬ್ಬರ ನಡುವೆ ಜಗಳವಾಗಿದೆ. ಬೆಳಿಗ್ಗೆ ವಿಡಿಯೋ ಕಾಲ್ ಮಾಡಿ ಯುವತಿಯೊಂದಿಗೆ ಮಾತನಾಡಿದ್ದ ಶ್ರೇಷ್ಠ ತಿವಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದು, ತಕ್ಷಣ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ಯುವತಿ ಪೊಲೀಸರೊಂದಿಗೆ ಹಜರತ್ ಗಂಜ್ ನಲ್ಲಿರುವ ಶಾಸಕರ ಫ್ಲಾಟ್ ಗೆ ಆಗಮಿಸುವಷ್ಟರಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಬಂದಾಗ ಮನೆಯ ಬಾಗಿಲು ಮುಚ್ಚಿತ್ತು. ಬಾಗಿಲು ಒಡೆದು ಮನೆಯೊಳಗೆ ಹೋದ ಪೊಲೀಸರಿಗೆ ಯುವಕ ಶವವಾಗಿ ಪತ್ತೆಯಾಗಿದ್ದಾನೆ.

ಇದನ್ನೂ ಓದಿ: NDA alliance: ಚುನಾವಣೆ ಹೊತ್ತಲ್ಲೇ ಬಿಜೆಪಿಗೆ ಭಾರೀ ದೊಡ್ಡ ಆಘಾತ- NDA ಮೈತ್ರಿ ಕೂಟದಿಂದ ದೇಶದ ಪ್ರಬಲ ಪಕ್ಷ ಔಟ್ !!

Leave A Reply

Your email address will not be published.