Cauvery struggle: ಸತ್ತ ಇಲಿಗಳನ್ನು ಕಚ್ಚಿ ತಿಂದು ಕಾವೇರಿಗಾಗಿ ಪ್ರತಿಭಟಿಸಿದ ರೈತರು – ಯಪ್ಪಾ ದೇವ್ರೇ.. ಇದಾದದ್ದೆಲ್ಲಿ ಗೊತ್ತಾ ?!

Latest nnews shockingnews Cauvery struggle Farmers protest for Cauvery by eating dead rats

Cauvery struggle: ಕಾವೇರಿ (Cauvery struggle) ವಿಚಾರವಾಗಿ ಭಾರೀ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಸ್ಯಾಂಡಲ್ ವುಡ್ (sandalwood), ತಮಿಳು ನಟರು ಜೊತೆಗೆ ರಾಜಕೀಯ ನಾಯಕರು ಕೂಡ ಈ ವಿವಾದಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ರೈತರು ಪ್ರತಿಭಟನೆಯ ಒಂದು ಹೆಜ್ಜೆ ಮುಂದೆ ಇಟ್ಟಿದ್ದು, ಸತ್ತ ಇಲಿಗಳನ್ನು ಕಚ್ಚಿ ತಿಂದು ಕಾವೇರಿಗಾಗಿ ಪ್ರತಿಭಟಿಸಿದ್ದಾರೆ. ಯಪ್ಪಾ ದೇವ್ರೇ, ಇದಾದದ್ದೆಲ್ಲಿ ಗೊತ್ತಾ ?!

ಈ ಘಟನೆ ನಡೆದಿದ್ದು ತಿರುಚಿರಾಪಳ್ಳಿಯಲ್ಲಿ. ತಮಿಳುನಾಡಿನ (tamilnadu) ರೈತರ ಗುಂಪೊಂದು ಸತ್ತ ಇಲಿಗಳನ್ನು ಬಾಯಿಯಲ್ಲಿ ಇಟ್ಟುಕೊಂದು ಕರ್ನಾಟಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದೆ. ಸದ್ಯ ಪ್ರತಿಭಟನೆಯ ವಿಡಿಯೋ ವೈರಲ್ ಆಗಿದೆ.

ಕರ್ನಾಟಕವು (karnataka) ಕಾವೇರಿ ನೀರನ್ನು ಬಿಡುಗಡೆ ಮಾಡದಿದ್ದರೆ, ನೀರಿನ ಸಮಸ್ಯೆಯಿಂದ ಭತ್ತದ ಕೃಷಿಯ ಮೇಲೆ ಪರಿಣಾಮ ಬೀರುತ್ತದೆ. ಈಗಾಗಲೇ ಬಡತನಕ್ಕೆ ತಳ್ಳಲ್ಪಟ್ಟಿರುವ ರೈತರು, ಬದುಕುವ ಸಲುವಾಗಿ ಇಲಿ ಮಾಂಸವನ್ನು ತಿನ್ನಲು ಒತ್ತಾಯಿಸಲಾಗುತ್ತದೆ ಎನ್ನುವ ಸೂಚ್ಯಾರ್ಥವಾಗಿ ಬಾಯಲ್ಲಿ ಇಲ್ಲಿಯನ್ನು ಇಟ್ಟುಕೊಂಡು ಪ್ರತಿಭಟನೆ ಮಾಡಿದ್ದಾರೆ.

ಇವರ ಈ ರೀತಿಯ ಪ್ರತಿಭಟನೆ ಮೊದಲೇನಲ್ಲ. 2017 ರಲ್ಲಿ, 65 ವರ್ಷದ ಚಿನ್ನಗೊಡಂಗಿ ಪಳನಿಸಾಮಿ ಜೀವಂತ ಇಲಿಯನ್ನು ಬಾಯಲ್ಲಿ ಕಚ್ಚಿಕೊಂಡು ಪ್ರತಿಭಟನೆ ನಡೆಸಿದ್ದರು. ತಮಿಳುನಾಡಿನ ರೈತರ ಪರ ಧ್ವನಿ ಎತ್ತಿದ್ದರು. 2016ರಲ್ಲಿ ತಮಿಳುನಾಡಿನ ತಿರುಚ್ಚಿಯಲ್ಲಿ ಸುಮಾರು 30 ರೈತರ ಗುಂಪು ಸತ್ತ ಇಲಿಗಳನ್ನು ಬಾಯಿಯಲ್ಲಿ ಹಿಡಿದುಕೊಂಡು ಪ್ರತಿಭಟನೆ ನಡೆಸಿತ್ತು.

 

https://x.com/ANI/status/1706548642432389587?s=20

ಇದನ್ನು ಓದಿ: Chandan-Niveditha: ನಿವೇದಿತ, ಚಂದನ್ ಡ್ಯಾನ್ಸ್ ನೋಡಿ ಥೂ.. ಅದೇನ್ ಬಾಳ್ ಬಾಳ್ತೀರೋ ಎಂದ ಫ್ಯಾನ್ಸ್ – ಹಾಗಿದ್ರೆ ಆ ವಿಡಿಯೋದಲ್ಲಿ ಇರೋದೇನು?

Leave A Reply

Your email address will not be published.