Chandan-Niveditha: ನಿವೇದಿತ, ಚಂದನ್ ಡ್ಯಾನ್ಸ್ ನೋಡಿ ಥೂ.. ಅದೇನ್ ಬಾಳ್ ಬಾಳ್ತೀರೋ ಎಂದ ಫ್ಯಾನ್ಸ್ – ಹಾಗಿದ್ರೆ ಆ ವಿಡಿಯೋದಲ್ಲಿ ಇರೋದೇನು?

Latest news Fans comment after seeing Nivedita and Chandan dance

Chandan-Niveditha: ಕನ್ನಡ ಕಿರುತೆರೆ ನಟಿ, ಬಿಗ್ ಬಾಸ್ (biggboss) ಸ್ಪರ್ಧಿ ನಿವೇದಿತಾ ಗೌಡ (Niveditha Gowda) ಹಾಗೂ ಸಿಂಗರ್ ಚಂದನ್ ಶೆಟ್ಟಿ (Chandan shetty) ಮದುವೆ ಆದ ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟಿವ್ ಆಗಿದ್ದು, ಆಗಾಗ ಸುದ್ಧಿಯಲ್ಲಿರುತ್ತಾರೆ. ಅಂತೆಯೇ ಇದೀಗ ಮತ್ತೊಂದು ವಿಚಾರಕ್ಕೆ ಈ ಜೋಡಿ ಸಖತ್ ವೈರಲ್ ಆಗಿದೆ.

ನಿವೇದಿತಾ ಗೌಡ (niveditha gowda) ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಬಳಿಕ ಅವರ ಹವಾ ಹೆಚ್ಚಿ ಫೇಮಸ್ ಕೂಡ ಆಗಿದ್ದರು. ಈ ಬಳಿಕ ಚಂದನ್ ಶೆಟ್ಟಿ (Chandan-Niveditha) ಅವರ ಜೊತೆಗೆ ಹಸೆಮಣೆ ಏರಿ ಸುಖಿ ಜೀವನ ನಡೆಸುತ್ತಿರುವ ಈ ಜೋಡಿ, ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದಾರೆ. ಒಂದಿಲ್ಲೊಂದು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅದಕ್ಕೆ ಪಾಸಿಟಿವ್-ನೆಗೆಟಿವ್ ಕಾಮೆಂಟ್ಸ್ ಇದ್ದೇ ಇರುತ್ತದೆ.

ನಿವೇದಿತಾ ಇನ್​ಸ್ಟಾಗ್ರಾಮ್​ನಲ್ಲಿ ಹಾಕುವ ಎಲ್ಲಾ ವಿಡಿಯೋಗಳು ಸಕತ್​ ಸುದ್ದಿ ಮಾಡುತ್ತೆ. ಅಂತೆಯೇ ಇದೀಗ ವಿಡಿಯೋವೊಂದು ಅಪ್ಲೋಡ್ ಮಾಡಿದ್ದು, ನಿವೇದಿತ, ಚಂದನ್ ಡ್ಯಾನ್ಸ್ ನೋಡಿ ಥೂ.. ಅದೇನ್ ಬಾಳ್ ಬಾಳ್ತೀರೋ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ‌. ಹಾಗಿದ್ರೆ ಆ ವಿಡಿಯೋದಲ್ಲಿ ಇರೋದೇನು? ಇಲ್ಲಿದೆ ನೋಡಿ ಡಿಟೇಲ್ಸ್ ಜೊತೆಗೆ ವಿಡಿಯೋ!!!.

ಇದೀಗ ನಟಿ, ಹಿಂದಿ ಹಾಡೊಂದಕ್ಕೆ ಭರ್ಜರಿ ಸೊಂಟ ಬಳುಕಿಸಿದ್ದಾರೆ.
ಬ್ಲೂ ಟೀಶರ್ಟ್ ಧರಿಸಿ, ಚಡ್ಡಿ ತೊಟ್ಟು, ಫ್ರೀ ಹೇರ್ ಬಿಟ್ಟು ಸಖತ್ ಸ್ಟೆಪ್ ಹಾಕಿದ್ದಾರೆ. ಸಾಂಗ್ ನ ಕೊನೆಗೆ ಚಂದನ್ ಶೆಟ್ಟಿ ಕೂಡ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ಈ ಡ್ಯಾನ್ಸ್​ ಅಭಿಮಾನಿಗಳನ್ನು ಸಿಟ್ಟಿಗೆ ಏರಿಸಿದೆ. ಕೆಲವರು ಗೊಂಬೆ ಅಂತೆಲ್ಲಾ ಹೇಳಿ, ಹಾರ್ಟ್​ ಇಮೋಜಿ ಹಾಕಿದ್ರೆ ಹಲವರು ನೆಗೆಟಿವ್​ ಕಮೆಂಟ್​ ಕೊಡುತ್ತಿದ್ದಾರೆ. ಚಂದನ್​ ಶೆಟ್ಟಿಯನ್ನೂ ಸೇರಿಸಿ ಬೈಯುತ್ತಿದ್ದಾರೆ. ಮದುವೆಯಾದ ಹುಡುಗಿ ಹಣೆಗಿಲ್ಲ, ತಾಳಿಯಿಲ್ಲ, ಕಾಲುಂಗುರ ಇಲ್ಲ, ಥೂ ನಮ್ಮ ಸಂಸ್ಕೃತಿಗೇ ನೀವು ಮಾರಕ ಎಂದು ಫ್ಯಾನ್​ ಒಬ್ಬ ಹೇಳಿದ್ರೆ, ಇನ್ನೋರ್ವರು ಥೂ ಅದೇನ್ ಬಾಳಂತ ಬಾಳ್ತೀರಾ ಅಂದಿದ್ದಾರೆ.

https://www.instagram.com/reel/CxcuT8toisW/?igshid=MzRlODBiNWFlZA==

ಇದನ್ನು ಓದಿ: Cauvery struggle: ಕಾವೇರಿ ವಿಚಾರದಲ್ಲಿ ಕರ್ನಾಟಕ ಪರ ನಿಂತ ತಮಿಳು ನಟ – ವೈರಲ್ ಆಯ್ತು ವಿಡಿಯೋ !

Leave A Reply

Your email address will not be published.