Vizag Zoo: ಮೃಗಾಲಯದಲ್ಲಿ 18 ವರ್ಷದ ಸಿಂಹಿಣಿ ಹೃದಯಾಘಾತದಿಂದ ಸಾವು!

Lioness Maheswari Passes away: ವಿಶಾಖಪಟ್ಟಣಂ (ವೈಜಾಗ್ ಮೃಗಾಲಯ) ಇಂದಿರಾಗಾಂಧಿ ಝೂಲಾಜಿಕಲ್ ಪಾರ್ಕ್‌ನಲ್ಲಿ 18 ವರ್ಷದ ಸಿಂಹಿಣಿ ವಯೋಸಹಜ ಕಾರಣದಿಂದ ಹೃದಯಾಘಾತದಿಂದ ಸಾವನ್ನಪ್ಪಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಮಹೇಶ್ವರಿ ಎಂಬ ಸಿಂಹಿಣಿಯೇ ಶನಿವಾರ ತಡರಾತ್ರಿ ನಿಧನ ಹೊಂದಿದೆ.

ಪಶುವೈದ್ಯಕೀಯ ಸಹಾಯಕ ಶಸ್ತ್ರಚಿಕಿತ್ಸಕರು ಸಲ್ಲಿಸಿದ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ಸಾವಿಗೆ ವಯಸ್ಸಾದ ಕಾರಣ ತೀವ್ರ ಹೃದಯಾಘಾತದಿಂದ ಸಾವಿಗೀಡಾಗಿದೆ ಎಂದು ವೈಜಾಗ್ ಮೃಗಾಲಯದ ಕ್ಯೂರೇಟರ್ ನಂದಾನಿ ಸಲಾರಿಯಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹೇಶ್ವರಿ 2006 ರಲ್ಲಿ ಜನಿಸಿದ್ದಾಗಿಯೂ ಮತ್ತು 2019 ರಲ್ಲಿ ಗುಜರಾತ್‌ನ ಸಕ್ಕರ್‌ಬಾಗ್ ಮೃಗಾಲಯದಿಂದ ವೈಜಾಗ್ ಮೃಗಾಲಯಕ್ಕೆ ತಂದಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವರದಿಯ ಪ್ರಕಾರ, ಸಿಂಹಗಳು ಕಾಡಿನಲ್ಲಿ ಸುಮಾರು 16 ರಿಂದ 18 ವರ್ಷಗಳವರೆಗೆ ವಾಸಿಸುತ್ತವೆ,  ಸಿಂಹಿಣಿ ಮಹೇಶ್ವರಿ ತನ್ನ 19 ನೇ ವರ್ಷ ಪೂರೈಸುವ ವರ್ಷದಲ್ಲಿದ್ದಳು ಮತ್ತು ಸಿಂಹಗಳ ಸಂರಕ್ಷಣೆಗೆ ಕೊಡುಗೆ ನೀಡಿದ್ದಾಳೆ. ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave A Reply

Your email address will not be published.