Flipkart Big Billion Days 2023:ಮತ್ತೆ ಬರ್ತಿದೆ ಮೆಗಾ ಡಿಸ್ಕೌಂಟ್ ಸೇಲ್ – ಈ ಎಲ್ಲಾ ಬೆಲೆಬಾಳೋ ವಸ್ತುಗಳಿಗೆ ಸಿಗ್ತಿದೆ ಬರೋಬ್ಬರಿ 80% ಡಿಸ್ಕೌಂಟ್ !!

technology news big discount on iphone and others flipkart big billion days starts

Flipkart Big Billion Days 2023: ಗ್ರಾಹಕರಿಗೆ ಬಂಪರ್ ಧಮಾಕಾ ಆಫರ್!!ನಿಮ್ಮ ನೆಚ್ಚಿನ ಗ್ಯಾಜೆಟ್ ಗಳನ್ನು ಅಗ್ಗದ ಬೆಲೆಯಲ್ಲಿ ಜೊತೆಗೆ ಭಾರಿ ಕೊಡುಗೆಗಳ ಮೂಲಕ ಪಡೆಯಲು ಸುವರ್ಣ ಅವಕಾಶ!! ನಿಮಗಾಗಿ ವಾಲ್‌ಮಾರ್ಟ್ ಮಾಲೀಕತ್ವದ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್ ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2023 ಮತ್ತೆ ಬರಲಿದ್ದು, ಈ ಸೇಲ್ ನಲ್ಲಿ ಕೈಗೆಟಕುವ ದರದಲ್ಲಿ ಭರ್ಜರಿ ರಿಯಾಯಿತಿ ದರದಲ್ಲಿ ಅತ್ಯಾಕರ್ಷಕ ಕೊಡುಗೆಗಳನ್ನು ಪಡೆಯಬಹುದು.

ಫ್ಲಿಪ್‌ಕಾರ್ಟ್ ತನ್ನ ಬಿಗ್ ಬಿಲಿಯನ್ ಡೇಸ್ ಸೇಲ್ 2023(Flipkart Big Billion Days 2023) ಹಿನ್ನೆಲೆ ಭರದ ತಯಾರಿ ನಡೆಸುತ್ತಿದ್ದು, ಈ ಮೂಲಕ ಎಲ್ಲಾ ಬ್ರಾಂಡ್‌ಗಳ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ದೊರೆಯಲಿದೆ.ಮುಂಬರುವ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟದ ವೇಳೆ, Apple, Samsung, Google, Realme, Oppo, Xiaomi, ನಥಿಂಗ್, ಮತ್ತು Vivo ನಂತಹ ಜನಪ್ರಿಯ ಬ್ರಾಂಡ್‌ಗಳ ವಿವಿಧ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿ ಆಫರ್ ಗಳು ಸಿಗಲಿದೆ. ಫ್ಲಿಪ್‌ಕಾರ್ಟ್ ಈಗಾಗಲೇ 80 ಪ್ರತಿಶತದಷ್ಟು ರಿಯಾಯಿತಿಯನ್ನು ಹೊಂದಿರುವ ಕೆಲವು ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮಾಹಿತಿ ನೀಡಿದೆ. ಇವುಗಳಲ್ಲಿ Moto G54 5G, Samsung Galaxy F34 5G, Realme C51, Realme 115G, Realme 11x 5G, Infinix Zero 30 5G, Moto G84 5G, Vivo V29e ಮತ್ತು Poco M6 Pro 5G ಸೇರಿದೆ. ಇದರ ಜೊತೆಗೆ, Paytm ಸೇಲ್ ಸಂದರ್ಭ Paytm, UPI ಮತ್ತು Wallet ಮೂಲಕ ಕೂಡ ಗ್ಯಾರಂಟಿ ಉಳಿತಾಯ ಪಡೆಯಬಹುದು.

ಮುಂಬರುವ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್(Flipkart Big Billion Days) ನ ಮಾಹಿತಿ ನೀಡಲು ಫ್ಲಿಪ್‌ಕಾರ್ಟ್ ವಿಶೇಷ ಲ್ಯಾಂಡಿಂಗ್ ವೆಬ್‌ ಪೇಜ್ ಅನ್ನು ರಚಿಸಿದೆ. ಈ ಪೇಜ್ ಮೂಲಕ ನೀಡಲಾದ ಮಾಹಿತಿಯ ಅನುಸಾರ, ಗ್ರಾಹಕರು, ICICI ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಕೋಟಕ್ ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಉತ್ಪನ್ನಗಳನ್ನು ಖರೀದಿ ಮಾಡಬಹುದು. ಈ ಕಾರ್ಡ್ ಗಳ ಮೂಲಕ ಖರೀದಿ ಮಾಡಿದರೆ ನಿಮಗೆ ಖರೀದಿ ಮೇಲೆ. 10 ಪ್ರತಿಶತದವರೆಗೆ ತ್ವರಿತ ರಿಯಾಯಿತಿ ಸಿಗಲಿದೆ.

ಸೇಲ್ ಗೂ ಮೊದಲೇ ಕೆಲವು ದೊಡ್ಡ ರಿಯಾಯಿತಿ ಕೊಡುಗೆಗಳನ್ನು ಗೌಪ್ಯವಾಗಿಡಲೂ ಫ್ಲಿಪ್‌ಕಾರ್ಟ್ ಯೋಜನೆ ಹಾಕಿಕೊಂಡಿದೆ. ಅಕ್ಟೋಬರ್ 1 ರಂದು ಐಫೋನ್‌ಗಳ ಡೀಲ್‌ ಇರಲಿದ್ದು, ಅಕ್ಟೋಬರ್ 3 ರಂದು Samsung ಸ್ಮಾರ್ಟ್‌ಫೋನ್ ಡೀಲ್‌ಗಳನ್ನು ರೀವೀಲ್ ಮಾಡಲಾಗುತ್ತದೆ.ಅದೇ ರೀತಿ,ಅಕ್ಟೋಬರ್ 5 ರಂದು Pixel ಹ್ಯಾಂಡ್‌ಸೆಟ್ ಡೀಲ್‌ಗಳನ್ನು, ಅಕ್ಟೋಬರ್ 7 ರಂದು Xiaomi ಸ್ಮಾರ್ಟ್‌ಫೋನ್ ಡೀಲ್‌ಗಳನ್ನು ಫ್ಲಿಪ್‌ಕಾರ್ಟ್ ಬಹಿರಂಗಪಡಿಸಲಿದೆ.

ಹೀಗಾಗಿ, ಗ್ರಾಹಕರು ಅತ್ಯಾಕರ್ಷಕ ರಿಯಾಯಿತಿಗಳ ಬಗ್ಗೆ ತಿಳಿಯಲು ಈ ಡೇಟ್ ವರೆಗೆ ಕಾಯಲೇಬೇಕು! ಈ ಸೇಲ್ ನಲ್ಲಿ ಖರೀದಿಸಿ ಆಮೇಲೆ ಪಾವತಿ ಮಾಡುವುದಕ್ಕೂ ಕೂಡ ಅವಕಾಶವಿದೆ. ಈ ಸಲುವಾಗಿ, ಫ್ಲಿಪ್‌ಕಾರ್ಟ್ ಪೇ ಲೇಟರ್ ಸೌಲಭ್ಯವನ್ನು ಬಳಕೆ ಮಾಡಬಹುದು. ಇದರ ಜೊತೆಗೆ ಉಚಿತ ಮಾಸಿಕ ಕಂತುಗಳು ಮತ್ತು ಹಳೆಯ ವಸ್ತುಗಳ ವಿನಿಮಯ ಹೀಗೆ ನಾನಾ ರೀತಿಯ ರಿಯಾಯಿತಿಯ ಆಫರ್ ಕೂಡ ಇರಲಿದೆ. ಮತ್ತೇಕೆ ತಡ!! ನೀವು ಕೂಡ ಈ ಆಫರ್ ನ ಪ್ರಯೋಜನ ನಿಮ್ಮದಾಗಿಸಿಕೊಳ್ಳಿ!

Leave A Reply

Your email address will not be published.