Most Expensive Wedding In the World:ಅಬ್ಬಬ್ಬಾ.. ಈ ಮದ್ವೆಗೆ ಖರ್ಚಾಗಿದ್ದು ಬರೋಬ್ಬರಿ 914 ಕೋಟಿ !! ಹಾಗಂತ ಇದು ಅಂಬಾನಿ ಮಕ್ಕಳ ಮದ್ವೆಯಲ್ಲ- ಹಾಗಿದ್ರೆ ಈ ಮದುವೆ ಯಾರದ್ದು ?!

Latest news Most Expensive Wedding in the world cost rs 914crores details here

Most Expensive Wedding In the World: ಮದುವೆ (Marraige)ಪ್ರತಿಯೊಬ್ಬರ ಜೀವನದಲ್ಲಿಯೂ ಮುಖ್ಯ ಘಟ್ಟವಾಗಿದ್ದು,ವಧು ವರರ ಪಾಲಿಗೆ ಪ್ರತಿ ಕ್ಷಣಗಳು ಕೂಡ ಅವಿಸ್ಮರಣೀಯ ದಿನ ಎಂದರೆ ತಪ್ಪಾಗದು. ಮದುವೆ ಎಂದರೆ ಸಹಜವಾಗಿ ವಧು ವರರ ಪಾಲಿಗೆ ವಿಶೇಷವಾದ ಅನುಭವ, ಖುಷಿ ಸಂಭ್ರಮ ದುಪ್ಪಟ್ಟು ಮಾಡುವ ಅಮೋಘ ಗಳಿಗೆ. ಅದರಲ್ಲಿ ಕೆಲವರು ಮದುವೆಯನ್ನು ತುಂಬಾ ಸರಳವಾಗಿ ಮಾಡಲು ಬಯಸಿದರೆ ಮತ್ತೆ ಕೆಲವರು ಅದ್ದೂರಿಯಾಗಿ ವೈಭವೋಪೇತವಾಗಿ ಮಾಡಲು ಇಚ್ಛಿಸುತ್ತಾರೆ.ಆದ್ರೆ, ವಿಶ್ವದ ಅತ್ಯಂತ ದುಬಾರಿ ಮದುವೆ (Most Expensive Wedding In the World)ಯಾರದ್ದು ಗೊತ್ತಾ?

ಎಲ್ಲರಿಗೂ ಗೊತ್ತಿರುವ ಹಾಗೆ, ಭಾರತದಲ್ಲಿ ನಡೆದ ಅತ್ಯಂತ ದುಬಾರಿ ವಿವಾಹ ಅಂದ ತಕ್ಷಣ ನೆನಪಿಗೆ ಬರುವುದು, ಮುಕೇಶ್ ಅಂಬಾನಿ ಅವರ ಮಗಳು ಇಶಾ ಅಂಬಾನಿ ಮತ್ತು ಅವರ ಪತಿ ಆನಂದ್ ಪಿರಮಾಲ್ ಮದುವೆ. ಇವರ ಮದುವೆಗೆ ಸರಿ ಸುಮಾರು 400 ಕೋಟಿ ರೂಪಾಯಿ ವೆಚ್ಚವಾಗಿತ್ತು. ಆದರೆ ವಿಶ್ವದ ಅತ್ಯಂತ ದುಬಾರಿ ಮದುವೆ ಯಾವುದು ಎಂಬುದು ನಿಮಗೆ ತಿಳಿದಿದೆಯೇ?

ಬ್ರಿಟಿಷ್ ರಾಜಮನೆತನದಲ್ಲಿ ಹೆಚ್ಚು ಅದ್ಧೂರಿಯಾಗಿ ನಡೆದ ವಿವಾಹಗಳಲ್ಲಿ ಪ್ರಿನ್ಸೆಸ್ ಡಯಾನಾ ಮತ್ತು ಪ್ರಿನ್ಸ್ ಚಾರ್ಲ್ಸ್ ಅವರ ವಿವಾಹ ಕೂಡ ಒಂದು ಎನ್ನಲಾಗಿದೆ. ಇದರಲ್ಲಿ 28.4 ಮಿಲಿಯನ್ ಜನರು ಭಾಗಿಯಗಿದ್ದರಂತೆ. ರಾಜಕುಮಾರಿ ಡಯಾನಾ ಮತ್ತು ಪ್ರಿನ್ಸ್ ಚಾರ್ಲ್ಸ್ ಅವರ ಅದ್ದೂರಿ ಮತ್ತು ರಾಜಮನೆತನದ ವಿವಾಹಕ್ಕೆ USD 110 ಮಿಲಿಯನ್ ಅಂದರೆ ಬರೋಬ್ಬರಿ 914 ಕೋಟಿ ರೂ. ವೆಚ್ಚವಾಗಿದೆ ಎಂದು ಅಂದಾಜು ಮಾಡಲಾಗಿದೆ.

ವಿವಾಹ ಸಮಾರಂಭಕ್ಕೆ ಜಗತ್ತಿನಲ್ಲಿ ವಧುವೊಬ್ಬಳು ಧರಿಸಿದ್ದ ಕಾಸ್ಟ್ಲಿ ದಿರಿಸಾಗಿದ್ದು, ರಾಜಕುಮಾರಿ ಡಯಾನಾ ಸುಮಾರು 4.1 ಕೋಟಿ ರೂ.ಯ ಬಟ್ಟೆ ಧರಿಸಿದ್ದರಂತೆ. ಅಷ್ಟೇ ಅಲ್ಲದೆ, ರಾಜಕುಮಾರಿ ಡಯಾನಾ ಅವರ ಮದುವೆಯ ಡ್ರೆಸ್ ಅನ್ನು ಸಾರ್ವಕಾಲಿಕ ಅತ್ಯಂತ ಸಾಂಪ್ರದಾಯಿಕ ಮದುವೆಯ ದಿರಿಸುಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಪ್ರಿನ್ಸೆಸ್ ಡಯಾನಾದು ವಿಶ್ವದ ಅತ್ಯಂತ ದುಬಾರಿ ಮದುವೆಯಾಗಿದ್ದು, ಮತ್ತೊಂದೆಡೆ, ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ. ವಿಶ್ವದ ಅತ್ಯಂತ ದುಬಾರಿ ಮದುವೆಯ ದಿರಿಸು ಹೊಂದಿರುವ ದಾಖಲೆಯನ್ನು ಬರೆದಿದ್ದಾರೆ.ಇವರು 90 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಮತ್ತು ಕೆಂಪು ಲೆಹೆಂಗಾವನ್ನು ಧರಿಸಿದ್ದರು.

 

ಇದನ್ನು ಓದಿ: Kolara: ಕೋಲಾರ ಜನತಾದರ್ಶನದಲ್ಲಿ ಗೂಂಡಾವರ್ತನೆ – ಬೋ.. ಮಗನೆ ಎನ್ನುತ್ತಾ ವೇದಿಕೆಯಲ್ಲೇ ಕೈ-ಕೈ ಮಿಲಾಯಿಸಿದ ಸಂಸದ-ಶಾಸಕ !

Leave A Reply

Your email address will not be published.