Crime News: ಅಬ್ಬಬ್ಬಾ. ಒಟ್ಟೊಟ್ಟಿಗೆ 16 ಕಂಪನಿಯಲ್ಲಿ ಕೆಲ್ಸ ಮಾಡ್ತಿದ್ದ ಮಹಿಳೆ! ಇವಳೇನು ಮನುಷ್ಯಳೋ ಇಲ್ಲ ಮಷಿನ್ನೋ?

World news Chinese woman was working in 16 companies at the same time finally she arrest

Chinese Woman Arrest: ಮೂನ್‌ಲೈಟಿಂಗ್‌ ಎಂಬುದು ಉದ್ಯೋಗ ಮಾರುಕಟ್ಟೆಯಲ್ಲಿ (Job Market) ಪ್ರಚಲಿತವಾಗಿರುವ ಕೆಲಸದ ಪದ್ಧತಿಯಾಗಿದ್ದು, ಈ ವಿಧಾನದಲ್ಲಿ ಉದ್ಯೋಗಿಯು ತಾನು ಕೆಲಸ ಮಾಡುವ ಕಂಪನಿಗೆ ವಂಚಿಸಿ ಬೇರೊಂದು ಕಂಪನಿಗಳಲ್ಲಿ ಕೂಡ ಕೆಲಸ ಮಾಡುತ್ತಿದ್ದಾರೆ.ಕೋವಿಡ್ ಬಳಿಕ ಮೂನ್ ಲೈಟಿಂಗ್‌ (Moonlighting) ಹೆಚ್ಚು ವರದಿಯಾಗುತ್ತಿದ್ದು, ಈ ವಿಚಾರ ದೊಡ್ದ ಮಟ್ಟದ ಚರ್ಚೆಗೆ ಕಾರಣವಾಗಿದೆ.

ಒಂದಕ್ಕಿಂತ ಹೆಚ್ಚು ಕಂಪನಿಗಳಲ್ಲಿ ಉದ್ಯೋಗ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದ್ದು, ಚೀನಾದಲ್ಲಿ ಖತರ್ನಾಕ್‌ ಮಹಿಳೆ (Chinese Woman Arrest)ವಂಚನೆ ಮಾಡಿದ್ದು ಒಂದಲ್ಲ ಎರಡಲ್ಲ ಬರೋಬ್ಬರಿ 16 ಕಂಪನಿಗಳಿಗೆ !! ಈ ರೀತಿ ವಂಚಿಸಿದ ಮಹಿಳೆಯ ಹೆಸರು ಗುವಾನ್ ಯುವೆ, 16 ಕಂಪನಿಯಲ್ಲಿ ಉದ್ಯೋಗಿಯಾಗಿ ವಂಚನೆ ಮಾಡಿದ ಆರೋಪದಲ್ಲಿ ಈಕೆಯನ್ನು ಬಂಧಿಸಲಾಗಿದೆ.

ಮೂರು ವರ್ಷಗಳಿಂದ ಸುಮಾರು 16 ಕಂಪನಿಯಲ್ಲಿ ಉದ್ಯೋಗಿಯಾಗಿ $7 ಮಿಲಿಯನ್ ಮೌಲ್ಯದ ಬೃಹತ್ ಕಾರ್ಮಿಕ-ವಂಚನೆ ಮಾಡಿದ್ದಾಳೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ಕ್ಸಿನ್ಮಿನ್ ವರದಿ ಮಾಡಿದೆ.ಬೇರೆ ಕೆಲಸದ ಆಫರ್‌ ಬಂದಾಗ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದಾಗ ಆ ಕೆಲಸವನ್ನು ಬೇರೆಯವರಿಗೆ ನೀಡಿ ದಂಪತಿಗಳಿಬ್ಬರು ಅದರ ಮೇಲೆ ಕಮಿಷನ್‌ ಕೂಡ ಪಡೆಯುತ್ತಿದ್ದರಂತೆ.ಆದರೆ, ಮೂರು ವರ್ಷದಲ್ಲಿ ಯಾವುದೇ ಸಮಸ್ಯೆಯಿಲ್ಲದೆ ವಂಚನೆ ಮಾಡುತ್ತಿದ್ದ ಗುವಾನ್ ಯು ಟೆಕ್ ಕಂಪನಿಯ ಮಾಲೀಕ ಲಿಯು ಜಿಯಾನ್ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾಳೆ. ಈಕೆ ನೀಡಿದ ದಾಖಲೆಗಳಲ್ಲಿ ವ್ಯತ್ಯಾಸಗಳನ್ನು ಗಮನಿಸಿದಾಗ ಕಂಪನಿಯ ಮಾಲೀಕ ಲಿಯು ಜಿಯಾನ್ ಅವರಿಗೆ ಅನುಮಾನ ಉಂಟಾಗಿದೆ.ಗುವಾನ್ ಯುವೆ ಅವರ ಪತಿ ಚೆನ್ ಕಿಯಾಂಗ್ ಕೂಡ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ. ಗುವಾನ್ ಯುವೆ ಈ ಹಣದಿಂದ ಶಾಂಘೈನಲ್ಲಿ ವಿಲ್ಲಾ ಕೂಡ ಖರೀದಿ ಮಾಡಿದ್ದಾರೆ.

ಜಿಯಾನ್ ಕಂಪನಿಯು ಗುವಾನ್ ಯು ಜೊತೆಗೆ ಇನ್ನೂ ಏಳು ಮಂದಿಯನ್ನು ಕೆಲ್ಸಕ್ಕೆ ನೇಮಕ ಮಾಡಿಕೊಂಡಿದ್ದಾರೆ.ಆದರೆ, ಕೆಲಸದಲ್ಲಿ ದೊಡ್ಡ ಮಟ್ಟದ ಫಲಿತಾಂಶ ಬಾರದೆ ಇದ್ದಾಗ ಕಂಪನಿ ಕೆಲಸಗಾರರನ್ನು ವಜಾ ಮಾಡಿದೆ. ಈ. ರಾಜೀನಾಮೆ ಪತ್ರವನ್ನು ವಂಚಕಿ ಮಹಿಳೆ ಬೇರೆ ಕಂಪನಿಯ ಗ್ರೂಪ್‌ಗೆ ಕಳುಹಿಸಿದ್ದು, ಅದರಲ್ಲಿ ಲಿಯು ಜಿಯಾನ್‌ ಕೂಡ ಇದ್ದ ಹಿನ್ನೆಲೆ ಆಗ ಲಿಯುಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಗುವಾನ್ ತನ್ನ ಎಲ್ಲಾ ನೇಮಕಾತಿಗಳನ್ನು ಪುಸ್ತಕದಲ್ಲಿ ಟ್ರ್ಯಾಕ್ ಮಾಡಿ ಹೊಸ ಉದ್ಯೋಗಕ್ಕಾಗಿ ಸಂದರ್ಶನ ಮಾಡುವ ಸಂದರ್ಭ. ತನ್ನ ಕಂಪನಿಗಳ ಕೆಲಸದ ಚಾನೆಲ್‌ಗಳಲ್ಲಿ ಸಂದರ್ಶನದ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದಳು. ಕ್ಲೈಂಟ್‌ಗಳನ್ನು ಭೇಟಿಯಾಗುತ್ತಿರುವ ಫೋಟೋಗಳನ್ನು ಪೋಸ್ಟ್‌ ಮಾಡುವ ಮೂಲಕ ತಾನು ಕಾರ್ಯ ನಿರ್ವಹಿಸುತ್ತಿದ್ದೇನೆ ಎಂಬುದನ್ನು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಳು. ಪುಸ್ತಕದಲ್ಲಿ ಯಾವ್ಯಾವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆನೆ. ಯಾವ ಕಂಪನಿಗೆ ಯಾವ ಬ್ಯಾಂಕ್ ಖಾತೆ ಬಳಕೆ ಮಾಡಿದ್ದೇನೆ. ಕಂಪನಿಯಲ್ಲಿ ಅವರ ಪಾತ್ರವೇನು ಎಂಬೆಲ್ಲ ವಿವರಗಳನ್ನು ಪುಸ್ತಕದಲ್ಲಿ ನಮೂದಿಸಿದ್ದಾಳೆ ಎನ್ನಲಾಗಿದೆ. ಹಲವು ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಹಿನ್ನೆಲೆ ಗೊಂದಲವಾಗಬಾರದು ಎಂಬ ನಿಟ್ಟಿನಲ್ಲಿ ಬಾರಿ ಮಾಸ್ಟರ್ ಪ್ಲಾನ್ ಕೂಡ ಮಾಡಿದ್ದಳು.

ಹ್ಯಾಂಗ್‌ಝೌನಲ್ಲಿನ ಪುಡಾಂಗ್ ಪೊಲೀಸರು ಮಾರ್ಚ್ 8 ರಂದು ಅಧಿಕಾರಿಗಳಿಗೆ ವರದಿ ಮಾಡಿದ ಉದ್ಯೋಗಿ ಲಿಯು ಒಳಗೊಂಡು 53 ಜನರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಸ್ಕ್ಯಾಮರ್‌ಗಳ ಈ ವಂಚನೆಯ ಪರಿಣಾಮ 50 ಮಿಲಿಯನ್ ಯುವಾನ್ (ಸುಮಾರು $6.8 ಮಿಲಿಯನ್) ನಷ್ಟ ಉಂಟಾಗಿದೆ. ಗುವಾನ್ ಅನೇಕ ಗುರುತಿನ ಚೀಟಿಗಳನ್ನು ಮತ್ತು ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಅಲ್ಲಿ ಅವಳು ವಿವಿಧ ಸಂಸ್ಥೆಗಳಿಂದ ಸಂಬಳವನ್ನು ಹೇಗೆ ಪಡೆದಿದ್ದಾಳೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Crime News: ಬಿಜೆಪಿ ಮುಖಂಡನಿಗೆ ನಡು ರಸ್ತೆಯಲ್ಲೇ ಕೆನ್ನೆಗೆ ಭಾರಿಸಿದ ಮಹಿಳೆ – ಅಷ್ಟಕ್ಕೂ ಆ ಶಾಸಕ ಮಹಾಶಯ ಮಾಡಿದ್ದೇನು ಗೊತ್ತಾ?

Leave A Reply

Your email address will not be published.