Chamarajanagara: ಶಾಲಾ ಶಿಕ್ಷಕಿಗೆ ಧಮ್ಕಿ ಹಾಕಿದ ಸ್ನೇಹಿತ! ಖಾಸಗಿ ವೀಡಿಯೋ ಲೀಕ್‌, ಪತಿಯನ್ನು ಬಿಟ್ಟು ಬಾ ಎಂದು ಬೆದರಿಕೆ!!!

Chamarajnagar news school teacher files complaint against the friend for blackmailing reveal private photos

Chamarajanagara: ಶಾಲಾ ಶಿಕ್ಷಕಿಯೋರ್ವರೊಂದಿಗೆ ಸ್ನೇಹದಿಂದ ಇದ್ದ ಓರ್ವ ವ್ಯಕ್ತಿ ಇದೀಗ ಶಿಕ್ಷಕಿ ಮದುವೆಯಾಗುತ್ತಿದ್ದಂತೆಯೇ ಧಮ್ಕಿ ಹಾಕಿರುವ ಘಟನೆಯೊಂದು ನಡೆದಿದ್ದು, ಇದೀಗ ಆತ ಪತಿಯನ್ನು ಬಿಟ್ಟು ಬರುವಂತೆ ಹೇಳಿದ್ದು, ಇದರಿಂದ ಬೇಸತ್ತ ಶಿಕ್ಷಕಿ ಪೊಲೀಸರಿಗೆ ದೂರು ನೀಡಿರುವ ಘಟನೆ ನಡೆದಿದೆ.

ಅಬ್ದುಲ್‌ ಅಸೀಮ್‌ ಎಂಬಾತ ಏಳು ವರ್ಷಗಳಿಂದ ಶಾಲಾ ಶಿಕ್ಷಕಿ ಜೊತೆ ಸ್ನೇಹದಿದ್ದ ಇದ್ದ ವ್ಯಕ್ತಿ. ಈತನೇ ಧಮ್ಕಿ ಆರೋಪ ಹೊತ್ತಿದ್ದಾನೆ. ಈ ಘಟನೆ ಚಾಮರಾಜನಗರ( Chamarajanagara) ಜಿಲ್ಲೆ ಕೊಳ್ಳೆಗಾಲದಲ್ಲಿ ನಡೆದಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅಬ್ದುಲ್‌ ಅಸೀಮ್‌ ಹಾಗೂ ಮಯೂರ್‌ ಎನ್ನುವವರು ಶಿಕ್ಷಕಿ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದು ಮಾತ್ರವಲ್ಲದೇ, ಗಂಡನನ್ನು ಬಿಟ್ಟು ಬಾ, ಇಲ್ಲದಿದ್ದರೆ ಖಾಸಗಿ ವೀಡಿಯೋ ವೈರಲ್‌ ಮಾಡುವುದಾಗಿಯೂ, ಹತ್ತು ಲಕ್ಷ ರೂಪಾಯಿ ಹಣ ನೀಡದೆ ಇದ್ದರೆ ಏರಿಯಾದಲ್ಲಿ ದೊಡ್ಡದಾಗಿ ಫ್ಲೆಕ್ಸ್‌ ಹಾಕುವುದಾಗಿ ಬ್ಲ್ಯಾಕ್‌ ಮೇಲ್‌ ಮಾಡಿರುವ ಘಟನೆ ನಡೆದಿದೆ ಎಂದು ಟಿವಿ9 ಮಾಧ್ಯಮವೊಂದು ವರದಿ ಮಾಡಿದೆ. ಇದರ ಜೊತೆ ಪತಿಯನ್ನು ಬಿಟ್ಟು ಬರದಿದ್ದರೆ ಹಿಂದೂ-ಮುಸ್ಲಿಂ ಗಲಾಟೆ ಮಾಡಿಸುವುದಾಗಿ ಕಿರುಕುಳ ಕೂಡಾ ನೀಡಿರುವಾಗಿ ವರದಿಯಾಗಿದೆ.

ಶಿಕ್ಷಕಿಯ ಅಶ್ಲೀಲ ವೀಡಿಯೋಗಳನ್ನು ಆಕೆಯ ಪತಿ ಹಾಗೂ ಕುಟುಂಬದವರಿಗೆ ಇವರಿಬ್ಬರು ಕಳುಹಿಸಿದ್ದಾರೆ. ಕಿರುಕುಳದಿಂದ ನೊಂದ ಶಿಕ್ಷಕಿ ಈಗ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ: ದಲಿತ ಸಚಿವರಿಗೆನೇ ದೇವಸ್ಥಾನದಲ್ಲಿ ತಾರತಮ್ಯ!!! ದೀಪ ಬೆಳಗಿಸಲು ಅರ್ಚಕರ ನಿರಾಕರಣೆ!!!

Leave A Reply

Your email address will not be published.