Crime News: ಬಿಜೆಪಿ ಮುಖಂಡನಿಗೆ ನಡು ರಸ್ತೆಯಲ್ಲೇ ಕೆನ್ನೆಗೆ ಭಾರಿಸಿದ ಮಹಿಳೆ – ಅಷ್ಟಕ್ಕೂ ಆ ಶಾಸಕ ಮಹಾಶಯ ಮಾಡಿದ್ದೇನು ಗೊತ್ತಾ?
Political news woman slaps drunk BJP leader in the middle of the road

BJP leader : ದಿನಂಪ್ರತಿ ಅದೆಷ್ಟೋ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಸಂಚಲನ ಸೃಷ್ಟಿ ಮಾಡುತ್ತಲೇ ಇರುತ್ತದೆ. ಇದೀಗ, ಬಿಜೆಪಿ (BJP)ಮುಖಂಡನೊಬ್ಬ ನಡುರಸ್ತೆಯಲ್ಲಿ ದಂಪತಿಯನ್ನು ನಿಂದಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ(Social Media)ಹರಿದಾಡುತ್ತಿದ್ದು, ಈ ವಿಡಿಯೋ ಠಾಕೂರ್ಗಂಜ್ನ ಸತ್ಖಂಂಡ ಪ್ರದೇಶಕ್ಕೆ ಸೇರಲಾಗಿದ್ದು ಎಂದು ಹೇಳಲಾಗುತ್ತಿದೆ.
ವಾಹನ ನಿಲುಗಡೆ ವಿಚಾರವಾಗಿ ಮಹಿಳೆಯೊಬ್ಬರು ಬಿಜೆಪಿ ಮುಖಂಡ(BJP leader )ಅತುಲ್ ದೀಕ್ಷಿತ್ರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ. ಇವರಿಬ್ಬರ ನಡುವೆ ವಾಹನ ನಿಲುಗಡೆ ವಿಚಾರವಾಗಿ ಮಾತಿನ ಚಕಮಕಿ ಆರಂಭವಾಗಿದೆ. ವಾಹನದ ವಿಚಾರವಾಗಿ ಬಿಜೆಪಿ ಧ್ವಜವನ್ನು ತೋರಿಸಿ ಬಿಜೆಪಿ ಮುಖಂಡ ಹಾಗೂ ಮಾಜಿ ಕೌನ್ಸಿಲರ್ ಆಗಿರುವ ಅತುಲ್ ದೀಕ್ಷಿತ್ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅತುಲ್ ದೀಕ್ಷಿತ್ ಕುಡಿದ ಮತ್ತಿನಲ್ಲಿ ಅಮಲಿನಲ್ಲಿದ್ದರು ಎನ್ನಲಾಗಿದ್ದು, ಈ ಸಂದರ್ಭ ಉದ್ಧಟತನದಿಂದ ವರ್ತಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬಿಜೆಪಿ ಮುಖಂಡನಿಗೆ ಕಪಾಳ ಮೋಕ್ಷ ಮಾಡಿದ ಮಹಿಳೆಯು ಈ ಸಂಪೂರ್ಣ ವಿಡಿಯೋ ಚಿತ್ರೀಕರಿಸಿದ ವ್ಯಕ್ತಿಯ ಪತ್ನಿ ಎನ್ನಲಾಗಿದೆ. ಕಾರಿನಲ್ಲಿ ತೆರಳುತ್ತಿದ್ದ ಬಿಜೆಪಿ ಮುಖಂಡ ಮಹಿಳೆಯ ಜೊತೆಗೆ ಅನುಚಿತವಾಗಿ ವರ್ತಿಸಿದ್ದು, ವಿಡಿಯೋ ಮಾಡುತ್ತಿರುವ ವ್ಯಕ್ತಿಯು ಹೆಸರು ಕೇಳಿದ ಸಂದರ್ಭ ಬಿಜೆಪಿ ನಾಯಕ ಆತ ನಾನು ನಿಮ್ಮಪ್ಪ ಎಂದು ಉತ್ತರ ನೀಡಿದ್ದು, ಈ ವಾದ ವಿವಾದದ ಮದ್ಯೆ ಮಹಿಳೆಯು ಬಿಜೆಪಿ ಮುಖಂಡನ ಕೆನ್ನೆಗೆ ಬಾರಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಶಾಸಕರ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ – ವೈರಲ್ ಆಯ್ತು ಅಚ್ಚರಿಯ ವಿಡಿಯೋ