Congress MLA: ಕಾಂಗ್ರೆಸ್ ಶಾಸಕರ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ – ವೈರಲ್ ಆಯ್ತು ಅಚ್ಚರಿಯ ವಿಡಿಯೋ

Political news Chhattisgarh Congress MLA Seen With Huge Cash In Viral Video

Congress MLA : ರಾಜಕೀಯದಲ್ಲಿ ಪಕ್ಷ ಪಕ್ಷಗಳ ನಾಯಕರು ಒಬ್ಬರಿಗೊಬ್ಬರು ಅಪವಾದ ಹೊರಿಸುತ್ತಲೇ ತನ್ನ ಕಾರ್ಯವನ್ನು ಸಫಲಗೊಳಿಸುತ್ತಾರೆ. ಇದೀಗ ಛತ್ತೀಸ್‌ಗಢದ ಕಾಂಗ್ರೆಸ್ ಶಾಸಕರೊಬ್ಬರು( Congress MLA) ಹಣದ ರಾಶಿಯ ಮುಂದೆ ಕುಳಿತಿರುವ ವೀಡಿಯೊವನ್ನು ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ರಿವೀಲ್ ಮಾಡಿದ್ದು, ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಹೌದು, ಛತ್ತೀಸ್‌ಗಢ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಒಪಿ ಚೌಧರಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಕಾಂಗ್ರೆಸ್ (Congress) ಛತ್ತೀಸ್‌ಗಢವನ್ನು ಭ್ರಷ್ಟಾಚಾರದ ಕೇಂದ್ರವನ್ನಾಗಿ ಮಾಡಿದೆ ಎಂದು ಆರೋಪಿಸಿದ್ದಾರೆ.

ಸದ್ಯ ವಿಡಿಯೋದಲ್ಲಿ, ಶಾಸಕ ರಾಮ್‌ ಕುಮಾರ್ ಯಾದವ್ ಹಾಸಿಗೆಯ ಪಕ್ಕದಲ್ಲಿ ಸೋಫಾದಲ್ಲಿ ಕುಳಿತಿರುವುದನ್ನು ಕಾಣಬಹುದು, ಅಲ್ಲಿ ನಗದು ಕಟ್ಟುಗಳನ್ನು ರಾಶಿ ಹಾಕಲಾಗಿದೆ. ಮತ್ತೊಬ್ಬ ವ್ಯಕ್ತಿ ಯಾದವ್ ಜೊತೆಗಿದ್ದು, ನಗದು ಪಕ್ಕದಲ್ಲಿ ಕುಳಿತಿರುವ ಮೂರನೇ ವ್ಯಕ್ತಿ ಗುರುತು ಪತ್ತೆಯಾಗಿಲ್ಲ.

ಈ ವಿಡಿಯೋ ಚೌಧರಿ ಅವರು ಎಕ್ಸ್‌ ನಲ್ಲಿ ಪೋಸ್ಟ್ ಮಾಡಿದ್ದು, ಕಾಂಗ್ರೆಸ್ ತನ್ನ ಶಾಸಕರ ಮುಂದೆ ನೋಟುಗಳ ಬಂಡಲ್‌ ಗಳನ್ನು ಇರಿಸಿರುವ ಈ ವೀಡಿಯೊವನ್ನು ಒಪ್ಪಿಕೊಳ್ಳುತ್ತದೆಯೇ ಅಥವಾ ವೀಡಿಯೊದ ಬಗ್ಗೆ ಏನಾದರೂ ಅನುಮಾನವಿದ್ದರೆ, ಈ ವಿಷಯವನ್ನು ಸಿಬಿಐ ತನಿಖೆಗೆ ಒಪ್ಪಿಸುವ ಧೈರ್ಯವನ್ನು ತೋರಿಸುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.

ಈ ವಿಡಿಯೋ ಗೆ ಯಾದವ್ ಪ್ರತಿಕ್ರಿಯಿಸಿ, ನಾನು ಬಡ ಕುಟುಂಬದಿಂದ ಬಂದಿರುವ ಕಾರಣ ನನ್ನ ಸ್ಥಾನ ಕ್ಕೆ ಧಕ್ಕೆ ತರಲು ಹೀಗೆ ಮಾಡಿದ್ದಾರೆ. ನಾನು ಶಾಸಕನಾಗಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಾಗದೇ ಈ ರೀತಿ ಮಾಡಿದ್ದಾರೆ. ನಾನು ಅಲ್ಲಿದ್ದರೂ ಹಣದತ್ತ ನೋಡುತ್ತಿಲ್ಲ. ನನ್ನ ಗಮನವೂ ಅತ್ತ ಇಲ್ಲ. ಇದರ ಹಿಂದೆ ಪಿತೂರಿ ಇದೆ. ನಾನು ವಿಮಾನದೊಂದಿಗೆ, ದೊಡ್ಡ ಅರಮನೆಯೊಂದಿಗೆ ಫೋಟೋ ತೆಗೆಸಿಕೊಂಡರೆ ನಾನು ಅದರ ಮಾಲೀಕನಾಗುತ್ತೇನೆಯೇ? ಎಂದು ಪ್ರಶ್ನಿಸಿದ್ದಾರೆ.

https://twitter.com/OPChoudhary_Ind/status/1703265607100305742?ref_src=twsrc%5Etfw%7Ctwcamp%5Etweetembed%7Ctwterm%5E1703265607100305742%7Ctwgr%5E2b39990064eae61106e870ebcbc1ff0dc55253b3%7Ctwcon%5Es1_c10&ref_url=https%3A%2F%2Fapi-news.dailyhunt.in%2F

ಇದನ್ನೂ ಓದಿ: ಅಮೆರಿಕಾ ಮೂಲದ ಇಬ್ಬರು ಸೂಪರ್‌ ಮಾಡೆಲ್‌ಗಳ ಶವ ಐಷರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆ!!! ಕಾರಣ ಏನು ಗೊತ್ತೇ?

Leave A Reply