Mangaluru: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ

Mangaluru: ಬಂಟ್ವಾಳ ತಾಲೂಕು ಸಜಿಪ ಮೂಡ ಗ್ರಾಮದ ಕೊಳಕೆ ಕಂದೂರು ಎನ್ನುವಲ್ಲಿ ಮೊಹಮ್ಮದ್‌ ಮುಸ್ತಾಫ ಮತ್ತು ಮಹಮ್ಮದ್‌ ನಾಸೀರ್‌ ಅವರ ಮೇಲೆ ತಲವಾರ್‌ನಿಂದ ಹಲ್ಲೆ ನಡೆಸಿ, ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನಾಲ್ವರು ಅಪರಾಧಿಗಳಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ತಲಾ ರೂ.30 ಸಾವಿರ ದಂಡ ವಿಧಿಸಿದೆ.

ಇದನ್ನೂ ಓದಿ:  Bihar: ಅತ್ತೆಯನ್ನೇ ಪ್ರೀತಿಸಿದ ಅಳೀಮಯ್ಯ, ಅವರ ಪ್ರೀತಿ ಕಂಡು ಸ್ವತಃ ಮದುವೆ ಮಾಡಿಕೊಟ್ಟ ಮಾವ !

ಕೋಮುದ್ವೇಷದಿಂದ ನಡೆದ ಹತ್ಯೆ ಪ್ರಕರಣ ಎಂದು ಕೋರ್ಟ್‌ ಹೇಳಿದೆ. ಬಂಟ್ವಾಳ ತಾಲೂಕು ಮಂಚಿ ಗ್ರಾಮದ ವಿಜೇತ್‌ ಕುಮಾರ್‌ (31), ಅಭಿ ಯಾನೆ ಅಭಿಜಿತ್‌ (33) ಮಂಗಳೂರು ತಾಲೂಕು ಬಡಗ ಉಳಿಪ್ಪಾಡಿ ಗ್ರಾಮದ ಮಳಲಿ ಮಟ್ಟಿಮನೆ ಕಿರಣ್‌ ಪೂಜಾರಿ (33), ತಿರುವೈಲು ಗ್ರಾಮ ಅನೀಶ್‌ ಯಾನೆ ಧನು (32) ಶಿಕ್ಷೆಗೊಳಗಾದವರು.

ಇದನ್ನೂ ಓದಿ:  Uppinangady: ಉಪ್ಪಿನಂಗಡಿ ತಾಯಿ ಮಗು ನಾಪತ್ತೆ; ಕೇಸು ದಾಖಲು

ಎ.8 ರಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ವಾದ – ಪ್ರತಿವಾದ ಆಲಿಸಿ, ದೋಷಿಗಳೆಂದು ತೀರ್ಪು ನೀಡಿತ್ತು. ಎ.30ರಂದು ಶಿಕ್ಷೆ ಪ್ರಮಾಣ ಪ್ರಕಟ ಮಾಡಲಾಗಿದೆ.

ಒಟ್ಟು ದಂಡದ ಮೊತ್ತ 1.20 ಲಕ್ಷ ರೂ. ಅನ್ನು ಮೃತ ನಾಸೀರ್‌ ಅವರ ಪತ್ನಿ ರಹಮತ್‌ ಯಾನೆ ರಮ್ಲತ್‌ಗೆ ನೀಡಬೇಕು ಹಾಗೂ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸಂತ್ರಸ್ತ ಪರಿಹಾರ ಯೋಜನೆಯಡಿ ಮೃತರ ಪತ್ನಿ ಹಾಗೂ ಗಾಯಾಳು ಮುಸ್ತಾಫ ಅವರಿಗೆ ಪರಿಹಾರ ನೀಡಲು ತೀರ್ಪಿನಲ್ಲಿ ಹೇಳಲಾಗಿದೆ.

ಘಟನೆಯ ವಿವರ;

ಮೊಹಮ್ಮದ್‌ ಮುಸ್ತಾಫ ಅವರು ಆ.6, 2015 ರಂದು ಮಾವನ ಪತ್ನಿಯನ್ನು ಆಟೋ ರಿಕ್ಷಾದಲ್ಲಿ ಬಿಟ್ಟು ಬರುತ್ತಿರುವಾಗ ಮೆಲ್ಕಾರ್‌ ಬಳಿ ನಾಸೀರ್‌ ಯಾನೆ ಮಹಮ್ಮದ್‌ ನಾಸೀರ್‌ ಅವರು ಪತ್ನಿ ಮನೆಗೆ ಹೋಗುವ ಉದ್ದೇಶದಿಂದ ಆಟೋ ಹತ್ತಿದ್ದು, ಮೆಲ್ಕಾರ್‌ ಕಡೆಯಿಂದ ಮುಡಿಪು ಕಡೆಗೆ ಆಟೋ ಹೋಗುತ್ತಿರುವ ಸಂದರ್ಭದಲ್ಲಿ ಶಿಕ್ಷೆಗೊಳಗಾದ ನಾಲ್ವರು ಆಟೋದಲ್ಲಿದ್ದವರು ಮುಸ್ಲಿಂರು ಎಂದು ತಿಳಿದುಕೊಳ್ಳಲು ಬೊಳ್ಳಾಯಿಗೆ ಹೋಗುವ ರಸ್ತೆ ಕುರಿತು ವಿಚಾರಣೆ ಮಾಡಿದ್ದಾರೆ.

ಆಟೋ ಚಾಲಕ ರಸ್ತೆ ತೋರಿಸಿದ್ದು, ನಂತರ ಮುಂದೆ ಹೋಗಿದ್ದಾರೆ. ಆದರೆ ಇವರನ್ನು ಬೈಕ್‌ನಲ್ಲಿ ಹಿಂಬಾಲಿಸಿದ ಇವರು ರಾತ್ರಿ 10.45 ಕ್ಕೆ ಬಂಟ್ವಾಳ ತಾಲೂಕು ಸಜಿಪ ಮೂಡ ಗ್ರಾಮದ ಕೊಳಕೆ ಕಂದೂರು ಎಂಬಲ್ಲಿ ಗಾಡಿ ಬರುತ್ತಿದ್ದಂತೆ ಓವರ್‌ಟೇಕ್‌ ಮಾಡಿ ರಿಕ್ಷಾವನ್ನು ತಡೆದು ತಲವಾರಿನಿಂದ ಕಡಿದು ಕೊಲೆಗೆ ಯತ್ನ ಮಾಡಿದ್ದರು. ಇಬ್ಬರನ್ನೂ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲು ಮಾಡಿದರೂ, ನಾಸೀರ್‌ ಅಹಮ್ಮದ್‌ ಅವರು ಆ.7 ರಂದು ಮೃತ ಹೊಂದಿದ್ದರು.

ಆ.5 ರಂದು ರಾತ್ರಿ 10.45 ಕ್ಕೆ ಮುಸ್ಲಿಂ ಸಮುದಾಯದ ನಾಲ್ಕೈದು ಮಂದಿ ವಿಜೇತ್‌ ಕುಮಾರ್‌ ಮತ್ತು ಅಭಿ ಯಾನೆ ಅಭಿಜಿತ್‌ ಮೇಲೆ ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯ ಕೊಳ್ನಾಡ್‌ ಗ್ರಾಮದ ಆಲಬೆ ಎಂಬಲ್ಲಿ ಹಲ್ಲೆ ಮಾಡಿದ್ದು, ಇದರಿಂದ ಮರುದಿನವೇ ಮುಸ್ಲಿಂ ಸಮುದಾಯದ ಯುವಕರನ್ನು ಕೊಲೆ ಮಾಡಬೇಕು ಎನ್ನುವ ಪ್ರತೀಕಾರವೇ ಈ ಕೊಲೆಯಾಗಿದ್ದು, ಸಂಚು ರೂಪಿಸಲಾಗಿತ್ತು.

Leave A Reply

Your email address will not be published.