Home Interesting Currency : ಅಮೆರಿಕದ ಡಾಲರ್, ಇಂಗ್ಲೆಂಡ್ ಪೌಂಡ್ ಯಾವುದೂ ಅಲ್ಲ !! ಹಾಗಿದ್ರೆ ಮತ್ಯಾವುದು ವಿಶ್ವದ...

Currency : ಅಮೆರಿಕದ ಡಾಲರ್, ಇಂಗ್ಲೆಂಡ್ ಪೌಂಡ್ ಯಾವುದೂ ಅಲ್ಲ !! ಹಾಗಿದ್ರೆ ಮತ್ಯಾವುದು ವಿಶ್ವದ ಶಕ್ತಿ ಶಾಲಿ ಕರೆನ್ಸಿ ?!

Currency

Hindu neighbor gifts plot of land

Hindu neighbour gifts land to Muslim journalist

World’s Most Powerful Currency: ಕುರುಡು ಕಾಂಚಾಣದ ವ್ಯಾಮೋಹ ಯಾರಿಗಿಲ್ಲ ಹೇಳಿ!! ಪ್ರತಿಯೊಬ್ಬರಿಗೂ ಜೀವನ ನಿರ್ವಹಣೆಗೆ ಹಣ ಅತ್ಯಗತ್ಯ. ಭಾರತದಲ್ಲಿ ರೂಪಾಯಿ(Rupees)ಮೂಲಕ ನಾವು ಹಣದ ಮೌಲ್ಯವನ್ನು ಅಳೆಯುತ್ತೇವೆ. ಆದರೆ, ಬೇರೆ ದೇಶಗಳಲ್ಲಿ ವಹಿವಾಟು ನಡೆಸುವಾಗ ಬೇರೆ ಕರೆನ್ಸಿ ಬಳಕೆ ಮಾಡಬೇಕಾಗುತ್ತದೆ. ನಮಗೆ ಬಲಿಷ್ಠ ಕರೆನ್ಸಿ ಎಂದಾಗ ಮೊದಲು ನೆನಪಾಗುವುದು ಡಾಲರ್!! ಆದರೆ, ವಿಶ್ವದ ಅತ್ಯಂತ ಶಕ್ತಿಯುತ ಕರೆನ್ಸಿ (World’s Most Powerful Currency)
ಯಾವುದು ಗೊತ್ತಾ?

ಡಾಲರ್ (Dollar):
ವಿಶ್ವದಾದ್ಯಂತ ಬಹುತೇಕ ವ್ಯಾಪಾರವನ್ನು ಡಾಲರ್ಗಳಲ್ಲಿ ಮಾಡುವ ಹಿನ್ನೆಲೆ ಇದು ಶಕ್ತಿಯುತ ಕರೆನ್ಸಿ ಎಂದು ಪರಿಗಣಿಸಲಾಗುತ್ತದೆ. ಒಂದು ಡಾಲರ್ ಎಂದರೆ 83.09 ಭಾರತೀಯ ರೂಪಾಯಿಯಾಗಿದೆ. ಡಾಲರ್ ವಿಶ್ವದ ಅತ್ಯಂತ ದುಬಾರಿ ಕರೆನ್ಸಿಗಳ ಪಟ್ಟಿಯಲ್ಲಿ 10ನೇ ಸ್ಥಾನವನ್ನು ಅಲಂಕರಿಸಿದೆ ಎಂಬ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ. ಹಾಗಿದ್ರೆ, ವಿಶ್ವದ ದುಬಾರಿ ಕರೆನ್ಸಿ ಯಾವುದು?

ಕುವೈತ್ ದಿನಾರ್:
ಪಶ್ಚಿಮ ಏಷ್ಯಾದಲ್ಲಿ ಸಮೃದ್ಧ ದೇಶ ಎಂದೇ ಖ್ಯಾತಿ ಪಡೆದಿರುವ ಕುವೈತ್ ದಿನಾರ್ ವಿಶ್ವದ ಅತ್ಯಂತ ದುಬಾರಿ ಕರೆನ್ಸಿಯಾಗಿದೆ. ಇಲ್ಲಿ 1 ದಿನಾರ್ ಮೌಲ್ಯದ ವಸ್ತುಗಳನ್ನು ಖರೀದಿ ಮಾಡಲು ನೀವು 267 ಭಾರತೀಯ ರೂಪಾಯಿಗಳನ್ನು ವ್ಯಯಿಸಬೇಕಾಗುತ್ತದೆ.

ಬಹ್ರೇನ್ ದಿನಾರ್ :
ಬಹ್ರೇನ್ ದಿನಾರ್ ವಿಶ್ವದ ಎರಡನೇ ಅತ್ಯಂತ ದುಬಾರಿ ಕರೆನ್ಸಿಯಾಗಿದೆ. ನೀವು ಬಹ್ರೇನ್ನಲ್ಲಿ 1 BHD ಗೆ ವಸ್ತುವನ್ನು ಅನ್ನು ಖರೀದಿಸಿದರೆ ಅದಕ್ಕಾಗಿ  218 ಭಾರತೀಯ ರೂಪಾಯಿಗಳನ್ನು ಖರ್ಚು ಮಾಡಬೇಕು.

ಒಮಾನಿ ರಿಯಾಲ್:
ಒಮಾನ್ ಒಂದು ಮುಸ್ಲಿಂ ರಾಷ್ಟ್ರವಾಗಿದ್ದು, ಒಮಾನಿ ರಿಯಾಲ್ ಒಮಾನಿನ ಅಧಿಕೃತ ಕರೆನ್ಸಿಯಾಗಿದ್ದು, ಇದು ವಿಶ್ವದ ಮೂರನೇ ಅತ್ಯಂತ ದುಬಾರಿ ಕರೆನ್ಸಿಯಾಗಿದೆ. ಅರೇಬಿಯನ್ ಪರ್ಯಾಯ ದ್ವೀಪದ ಆಗ್ನೇಯ ಭಾಗದಲ್ಲಿ ಒಂದು ಒಮಾನಿ ರಿಯಾಲಿನ ಮೌಲ್ಯವು 214 ಭಾರತೀಯ ರೂಪಾಯಿಗಳಿಗೆ ಸಮಾನವಾಗಿರುತ್ತದೆ.

ಜೋರ್ಡಾನ್ ದಿನಾರ್ :
ಜೋರ್ಡಾನ್ ಅರಬ್ ದೇಶವಾಗಿದ್ದು, ಜೋರ್ಡಾನ್ ದಿನಾರ್ ವಿಶ್ವದ ನಾಲ್ಕನೇ ಅತ್ಯಂತ ಶಕ್ತಿಶಾಲಿ ಮತ್ತು ದುಬಾರಿ ಕರೆನ್ಸಿಯಾಗಿದೆ . ಜೋರ್ಡಾನ್ ದಿನಾರ್ ನ ಮೌಲ್ಯವು 117 ಭಾರತೀಯ ರೂಪಾಯಿಗಳಿಗೆ ಸಮಾನವಾಗಿದೆ.

ಬ್ರಿಟಿಷ್ ಪೌಂಡ್:
ಪ್ರಪಂಚದ ಐದನೇ ಅತ್ಯಂತ ದುಬಾರಿ ಕರೆನ್ಸಿಯಾಗಿರುವ ಬ್ರಿಟಿಷ್ ಪೌಂಡ್ ಯುನೈಟೆಡ್ ಕಿಂಗ್ಡಮ್ನ ಅಧಿಕೃತ ಕರೆನ್ಸಿಯಾಗಿದೆ.ಒಂದು ಬ್ರಿಟಿಷ್ ಪೌಂಡ್ 102 ಭಾರತೀಯ ರೂಪಾಯಿಗಳಿಗೆ ಸಮಾನವಾಗಿದೆ.

ಸ್ವಿಸ್ ಫ್ರಾಂಕ್ :
ಸ್ವಿಟ್ಜರ್ಲೆಂಡ್ನ ಅಧಿಕೃತ ಕರೆನ್ಸಿಯಾಗಿರುವ ಸ್ವಿಸ್ ಫ್ರಾಂಕ್ ಲಿಚ್ಟೆನ್ಸ್ಟೈನ್ ಇದರ ಕೋಡ್ CHF ಆಗಿದ್ದು, ಒಂದು ಸ್ವಿಸ್ ಫ್ರಾಂಕ್ನ ಮೌಲ್ಯವು 91 ಭಾರತೀಯ ರೂಪಾಯಿಗಳಿಗೆ ಸಮವಾಗಿರುತ್ತದೆ.

ಯುರೋ (Euro)
ಯುರೋ ಕರೆನ್ಸಿಯನ್ನು ವಿಶ್ವ ಆರ್ಥಿಕತೆಯ ಸ್ಥಿರ ಕರೆನ್ಸಿಗಳಲ್ಲಿ ಒಂದು ಎಂದು ಬಣ್ಣಿಸಲಾಗುತ್ತದೆ. ವಿಶ್ವದ ಒಂಬತ್ತನೇ ಅತ್ಯಂತ ದುಬಾರಿ ಕರೆನ್ಸಿ ಆಗಿರುವ ಯುರೋ ಕರೆನ್ಸಿಯ ಕೋಡ್ EUR ಆಗಿದೆ. ಒಂದು ಯುರೋ ಕರೆನ್ಸಿ  88 ಭಾರತೀಯ ರೂಪಾಯಿಗಳಿಗೆ ಸಮವಾಗಿರುತ್ತದೆ.

ಇದನ್ನೂ ಓದಿ:PM Kisan Yojana : ಇನ್ನು ಈ ರೈತರಿಗಿಲ್ಲ PM ಕಿಸಾನ್ ಹಣ- ಕೇಂದ್ರದಿಂದ ಮಹತ್ವದ ನಿರ್ಧಾರ !!