PM Kisan Yojana : ಇನ್ನು ಈ ರೈತರಿಗಿಲ್ಲ PM ಕಿಸಾನ್ ಹಣ- ಕೇಂದ್ರದಿಂದ ಮಹತ್ವದ ನಿರ್ಧಾರ !!

Agriculture news government scheme pm Kisan Nidhi Yojana update these farmers will not get PM Kisan scheme money

PM Kisan Yojana: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ(PM Kisan Scheme Latest News) ಸರ್ಕಾರವು ರೈತರಿಗೆ ವಾರ್ಷಿಕ 6000 ರೂ. ಒದಗಿಸುತ್ತಿದ್ದು, ಯೋಜನೆಯ ಭಾಗವಾಗಿ ವಾರ್ಷಿಕ 6 ಸಾವಿರ ರೂಪಾಯಿ ರೈತರ ಖಾತೆಗೆ ರವಾನೆ ಮಾಡಲಾಗಿದ್ದು, ಇದೀಗ ಪಿಎಂ ಕಿಸಾನ್ (PM Kisan )ಯೋಜನೆಯ ಕುರಿತ ಮುಖ್ಯ ಮಾಹಿತಿ ಇಲ್ಲಿದೆ.

ಇದೀಗ, ದೇಶದ ರೈತರು ಈಗ 15 ನೇ ಕಂತಿಗಾಗಿ(PM Kisan Yojana) ಎದುರು ನೋಡುತ್ತಿದ್ದಾರೆ. ನವೆಂಬರ್ ತಿಂಗಳಲ್ಲಿ ಸರ್ಕಾರವು 15 ನೇ ಕಂತನ್ನು ರೈತರ ಖಾತೆಗೆ ರವಾನಿಸಲಿದೆ ಎನ್ನಲಾಗುತ್ತಿದೆ. ಇಲ್ಲಿಯವರೆಗೆ, ಈ ಯೋಜನೆಗೆ ಅರ್ಜಿ ಸಲ್ಲಿಸದ ರೈತರು, ಈ ಯೋಜನೆಯ ಲಾಭವನ್ನು ಪಡೆಯಲು ಬೇಗ ಅರ್ಜಿ ಸಲ್ಲಿಸುವುದು ಉತ್ತಮ. ಪಿಎಂ ಕಿಸಾನ್ ಯೋಜನೆಯ ಪ್ರಯೋಜನ ಪಡೆಯಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ನೀವು ಅರ್ಜಿ ಸಲ್ಲಿಸಬಹುದು.

ಎಲ್ಲರಿಗೂ ಗೊತ್ತಿರುವ ಹಾಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಸೇರುವ ರೈತರು KYC ಅನ್ನು ಪೂರ್ಣಗೊಳಿಸಬೇಕಾಗುತ್ತದೆ. ಇದೀಗ, ಪಿಎಂ ಕಿಸಾನ್ ಯೋಜನೆಯಲ್ಲಿ ಅಪ್ಲಿಕೇಶನ್‌ನಲ್ಲಿ ಮುಖ ಗುರುತಿಸುವಿಕೆ ಆಯ್ಕೆಯನ್ನು ಪರಿಚಯಿಸಲಾಗಿದ್ದು, ರೈತರು ಈ ಕಾರ್ಯಗಳನ್ನು ಸುಲಭವಾಗಿ ಪೂರ್ಣಗೊಳಿಸಬಹುದಾಗಿದೆ. ಇ- ಕೆವೈಸಿ ಪೂರ್ಣಗೊಳಿಸಿದವರಿಗೆ ಮಾತ್ರ ರೂ. 2 ಸಾವಿರ ಲಭ್ಯವಾಗಲಿದ್ದು, ಪ್ರಸ್ತುತ 14ನೇ ಕಂತಿನಡಿ ರೈತರಿಗೆ ರೂ. 2 ಸಾವಿರ ಪಡೆದಿದ್ದಾರೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಮುಂದಿನ ಕಂತುಗಳ ಲಾಭವನ್ನು ಪಡೆಯಲು ನೀವು ಬಯಸಿದರೆ, ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಅವಶ್ಯಕವಾಗಿದ್ದು E- KYC ಮಾಡಲು ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಹೋಗಿ KYC ಅನ್ನು ಪೂರ್ಣಗೊಳಿಸಲು ಅವಕಾಶವಿದೆ. ಇದಲ್ಲದೆ, ಪಿಎಂ ಕಿಸಾನ್ ಪೋರ್ಟಲ್ pmkisan.gov.in ನಲ್ಲಿ ನೀವು ಇ-ಕೆ ವೈಸಿ ಮಾಡಬಹುದು. ನೀವು ಈ ಪ್ರಕ್ರಿಯೆಗೆ ಮುಗಿಸದೆ ಇದ್ದರೆ ನಿಮ್ಮ ಖಾತೆಗೆ ಹಣ ಜಮೆ ಆಗದು.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಮೊತ್ತವನ್ನು ಸರ್ಕಾರ ಏಕೆ ಹಿಂತೆಗೆದುಕೊಳ್ಳುತ್ತಿದೆ ಎಂಬ ಗೊಂದಲ ಹೆಚ್ಚಿನವರಿಗೆ ಕಾಡುವುದು ಸಹಜ. ಮಾಧ್ಯಮ ವರದಿಗಳ ಪ್ರಕಾರ, ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಲಾಭವನ್ನು ಪಡೆಯಲು ಸುಳ್ಳು ಮಾಹಿತಿ ನೀಡಿದ ರೈತರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಭೂ ದಾಖಲೆಗಳ ಪರಿಶೀಲನೆಯ ವೇಳೆ ಅನರ್ಹರೆಂದು ಕಂಡುಬಂದ ರೈತರಿಂದ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಮೊತ್ತವನ್ನು ಹಿಂಪಡೆಯಲಾಗುತ್ತಿದ್ದು, ಅಷ್ಟೆ ಅಲ್ಲದೇ, ಹಣವನ್ನು ಹಿಂದಿರುಗಿಸದವರ ವಿರುದ್ಧ ಕೂಡ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ ಎನ್ನಲಾಗಿದೆ.

ಇದನ್ನೂ ಓದಿ: Important information: ಫೋನ್ ಪೇ, ಗೂಗಲ್ ಪೇ ಮತ್ತು ಪೇಟಿಎಂ ಬಳಕೆದಾರರೇ ಇತ್ತ ಗಮನಿಸಿ- ಇಲ್ಲಿದೆ ನೋಡಿ ನಿಮಗೊಂದು ಮಹತ್ವದ ಮಾಹಿತಿ

Leave A Reply

Your email address will not be published.