Sanitary napkins- tampons usage: ಮಹಿಳೆಯರ ಮುಟ್ಟಿನ ಅವಧಿಯಲ್ಲಿ ಬಳಸುವ ಪ್ಯಾಡ್, ಟ್ಯಾಂಫೂನ್‌ ಎಷ್ಟು ಗಂಟೆ ಬಳಸಬಹುದು ? ನಿಮಗೆ ತಿಳಿದಿದೆಯೇ ?

Health tips women's using sanitary napkins and tampons usage detail

Sanitary napkins-tampons usage: ಮಹಿಳೆಯರಲ್ಲಿ ಸಂಭವಿಸುವ ನೈಸರ್ಗಿಕ ಪ್ರಕ್ರಿಯೆಯಾದ ಮುಟ್ಟಿನ ಸಮಯದಲ್ಲಿ ಕೆಲವರಿಗಂತೂ ಅತಿ ತ್ರಾಸದಾಯಕ ನೋವು ಉಂಟಾಗುತ್ತದೆ. ಈ ಸಮಯದಲ್ಲಿ ನೈರ್ಮಲ್ಯವನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯವಾಗಿದ್ದು, ಇಲ್ಲದಿದ್ದರೆ ತುರಿಕೆ, ಸೋಂಕಿನ ಸಮಸ್ಯೆ ಉಂಟಾಗುವುದು.

ಮುಟ್ಟಿನ ನೋವಿಗಿಂತಲೂ ಆ ಸಮಯವನ್ನು ನಿಭಾಯಿಸುವುದು ಬಹುತೇಕ ಮಹಿಳೆಯರಿಗೆ ಸವಾಲಿನ ಸಂಗತಿಯಾಗಿದೆ. ರಕ್ತಸ್ರಾವದ ಜೊತೆಗೆ ಕಿರಿಕಿರಿಯ ಅನುಭವದಿಂದ ಬಹುತೇಕ ಮಹಿಳೆಯರು ಗುಂಪಿನಲ್ಲಿ ಗುರುತಿಸಿಕೊಳ್ಳಲು ಹಿಂದೇಟು ಹಾಕುವಂತಾಗುತ್ತದೆ.

ಶುಚಿತ್ವದ ದೃಷ್ಠಿಯಿಂದ ಬಟ್ಟೆಗಳಲ್ಲಿ ಕಲೆಗಳಾಗದಂತೆ ಮಹಿಳೆಯರು ಸ್ಯಾನಿಟರಿ ಪ್ಯಾಡ್ಗಳನ್ನು ಬಳಸುವುದು ಸಾಮಾನ್ಯ. ಕೆಲವರಲ್ಲಿ ಋತುಚಕ್ರದ ಸಮಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯೂ ಕಂಡು ಬರುತ್ತದೆ. ಹೀಗಿದ್ದಾಗ ಮುಟ್ಟಿನ ದಿನಗಳಲ್ಲಿ ಸಂಪೂರ್ಣ ಸ್ವಚ್ಚವಾಗಿರಲು ಸರಿಯಾದ ಕ್ರಮ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇದೆ.

ಹೆಚ್ಚಿನ ಹೆಣ್ಣುಮಕ್ಕಳು ಋತುಚಕ್ರದ ಅವಧಿಯಲ್ಲಿ ಸ್ಯಾನಿಟರಿ ಪ್ಯಾಡ್‌, ಟ್ಯಾಂಫೂನ್‌ ಬಳಸುವುದು( Sanitary napkins-tampons usage) ಸಾಮಾನ್ಯ. ಹೆಚ್ಚು ರಕ್ತಸ್ರಾವವಾದಾಗ ಆಗಾಗ ಪ್ಯಾಡ್‌ ಬದಲಾವಣೆ ಮಾಡಬೇಕಾಗುತ್ತದೆ. ಆದರೆ ಹೆಚ್ಚಿನವರು ಕಡಿಮೆ ರಕ್ತಸ್ರಾವವಿದ್ದಾಗ ಬೆಳಗ್ಗೆಯಿಂದ ಸಂಜೆಯವರೆಗೂ ಒಂದೇ ಸ್ಯಾನಿಟರಿ ಪ್ಯಾಡ್‌ ಬಳಸುತ್ತಾರೆ.

ಈ ರೀತಿ ಹೆಚ್ಚು ಅವಧಿಯವರೆಗೆ ಒಂದೇ ಪ್ಯಾಡ್‌ ಅಥವಾ ಟ್ಯಾಂಫೂನ್‌ ಬಳಸಬಹುದೇ..? ಎಷ್ಟು ಗಂಟೆಗಳಿಗೊಮ್ಮೆ ಬದಲಾವಣೆ ಮಾಡಬೇಕು..? ಇದರ ಬಳಕೆ ಎಷ್ಟು ಸುರಕ್ಷಿತ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ

ಮಹಿಳೆಯರು ಮುಟ್ಟಿನ ಅವಧಿಯಲ್ಲಿ ಟ್ಯಾಂಫೂನ್‌ ಬಳಸುತ್ತಿದ್ದಲ್ಲಿ ಪ್ರತಿ 3ರಿಂದ 5ಗಂಟೆಗಳಿಗೊಮ್ಮೆ ಬದಲಾಯಿಸಬೇಕು. ಈ ರೀತಿಯಲ್ಲಿ ಮರೆಯದೇ ಟ್ಯಾಂಫೂನ್‌ ಬದಲಾಯಿಸುತ್ತಿದ್ದರೆ ವಿಷಕಾರಿ ಆಘಾತ ಸಿಂಡ್ರೋಮ್‌ ಅಂದರೆ ಟಾಕ್ಸಿಕ್‌ ಶಾಕ್‌ ಸಿಂಡ್ರೋಮ್‌ ಎನ್ನುವ ಸಂಭಾವ್ಯ ಮಾರಣಾಂತಿಕ ರೋಗವನ್ನು ತಡೆಗಟ್ಟಬಹುದಾಗಿದೆ. ಅದು ಸಾಧ್ಯವಾಗದಿದ್ದಲ್ಲಿ ನಾಲ್ಕರಿಂದ ಎಂಟು ಗಂಟೆಗಳಿಗೊಮ್ಮೆಯಾದರೂ ಟ್ಯಾಂಫೂನ್‌ ಬದಲಾಯಿಸಲೇಬೇಕು.

ಮಹಿಳೆಯರು ಟ್ಯಾಂಪೂನ್ ಅನ್ನು ಬೆಳಿಗ್ಗೆ ಬದಲಾಯಿಸಿದರೆ ನಂತರ ಮತ್ತೊಮ್ಮೆ ಮಧ್ಯಾಹ್ನ ಅವಧಿಯಲ್ಲಿ, ಮತ್ತೊಮ್ಮೆ ಸಂಜೆಯ ಸಮಯದಲ್ಲಿ ಮತ್ತು ನಂತರ ಮಲಗುವ ಮುನ್ನ ಬದಲಾಯಿಸುವುದು ಆರೋಗ್ಯಕರ ಅಭ್ಯಾಸ. ಶಾಲೆಗೆ ಅಥವಾ ಕೆಲಸಕ್ಕೆ ಹೋಗುವ ಮೊದಲು, ಹೆಚ್ಚುವರಿ ಎರಡು ಅಥವಾ ಮೂರು ಟ್ಯಾಂಪೂನ್ಗಳನ್ನು ತೆಗೆದುಕೊಂಡು ಹೋಗುವುದರಿಂದ ಅಗತ್ಯತೆಯ ಅನುಸಾರ ಅವುಗಳನ್ನು ಬಳಸಬಹುದಾಗಿದ್ದು ಟ್ಯಾಂಫೂನ್‌ ಬಳಸಿಯೂ ಸೋರಿಕೆಯಾಗುತ್ತಿದ್ದಲ್ಲಿ, ಹೆಚ್ಚು ರಕ್ತಸ್ರಾವವಾಗುತ್ತಿದ್ದಲ್ಲಿ ಕಪ್‌ ಅಥವಾ ಡಿಸ್ಕ್‌ ಕೂಡಾ ಬಳಸಬಹುದಾಗಿದೆ.

ಮಹಿಳೆಯರು ಮುಟ್ಟಿನ ಅವಧಿಯಲ್ಲಿ ಪ್ರತಿ ದಿನವೂ ಅನುಭವಿಸುತ್ತಿರುವ ಮುಟ್ಟಿನ ಹರಿವಿನ ಪ್ರಮಾಣಕ್ಕೆ ತಕ್ಕಂತೆ ಕಡಿಮೆ ಹೀರಿಕೊಳ್ಳುವ ಟ್ಯಾಂಪೂನ್ ಅನ್ನು ಬಳಸಬಹುದು. ಕಡಿಮೆ ರಕ್ತಸ್ರಾವವಾಗುವ ದಿನದಂದು ಸೂಪರ್-ಅಬ್ಸಾರ್ಬೆನ್ಸಿ ಟ್ಯಾಂಪೂನ್‌ಗಳನ್ನು ಬಳಸುವುದರಿಂದ ಟಾಕ್ಸಿಕ್‌ ಶಾಕ್‌ ಸಿಂಡ್ರೋಮ್‌ ನಿಂದ ಆಗುವ ಅಪಾಯ ಕೊಂಚ ಹೆಚ್ಚೆಂದರೆ ತಪ್ಪಾಗದು.

ಕೆಲವೊಂದು ಟ್ಯಾಂಫೂನ್‌ಗಳಿಂದ ಮಾತ್ರ ಅಪಾಯವಿದೆ ಎನ್ನುವುದನ್ನು ನೀವು ಕೇಳಿಸಿಕೊಂಡರೂ, ಮಹಿಳೆಯರು ಟ್ಯಾಂಫೂನ್‌ ಬದಲಾಯಿಸುತ್ತಿರುವುದು ಉತ್ತಮ. ಯಾಕೆಂದರೆ ಟ್ಯಾಂಪೂನ್ ಅನ್ನು ಶುದ್ಧವಾದ ಹತ್ತಿ ಅಥವಾ ರೇಯಾನ್‌ನಿಂದ ಮಾಡಿದ್ದರೂ, ಎಲ್ಲಾ ಟ್ಯಾಂಪೂನ್‌ಗಳು ಸರಿಯಾಗಿ ಬಳಸದಿದ್ದಲ್ಲಿ ವಿಷಕಾರಿ ಆಘಾತ ಸಿಂಡ್ರೋಮ್‌ನ ಅಪಾಯವನ್ನುಂಟು ಮಾಡುತ್ತವೆ.

ಟಾಕ್ಸಿಕ್ ಶಾಕ್ ಸಿಂಡ್ರೋಮ್ ಲಕ್ಷಣಗಳು

ಮುಟ್ಟಿಗೆ ಸಂಬಂಧಿಸಿದ ಟಾಕ್ಸಿಕ್ ಶಾಕ್ ಸಿಂಡ್ರೋಮ್ ಅಪರೂಪದ ಆದರೆ ಸಂಭಾವ್ಯ ಮಾರಣಾಂತಿಕ ಕಾಯಿಲೆಯಾಗಿದ್ದು, ಸ್ಟ್ಯಾಫಿಲೋಕೊಕಸ್ ಔರೆಸ್ ಅಥವಾ ಗ್ರೂಪ್ ಎ ಸ್ಟ್ರೆಪ್ಟೋಕೊಕಸ್ ಎರಡು ವಿಭಿನ್ನ ರೀತಿಯ ಬ್ಯಾಕ್ಟೀರಿಯಾಗಳಿಂದ ಉಂಟಾಗುತ್ತದೆ. ಈ ಬ್ಯಾಕ್ಟೀರಿಯಾಗಳು ಸಾಮಾನ್ಯವಾಗಿ ಯೋನಿಯಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಟ್ಯಾಂಪೂನ್ ಹೆಚ್ಚು ಸಮಯದವರೆಗೆ ಇರುವಾಗ ಅವು ನಿಯಂತ್ರಣದಿಂದ ಹೊರಬರಬಹುದಾಗಿದ್ದು, ಈ ರೋಗ ಕಾಣಿಸಿಕೊಂಡರೆ ವಿಶೇಷವಾಗಿ ಮುಟ್ಟಿನ ಪ್ರಾರಂಭದ ಮೂರು ದಿನಗಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆ ಲಕ್ಷಣಗಳು ಯಾವುವೆಂದರೆ, ಶೀತದೊಂದಿಗೆ ಅಥವಾ ಶೀತವಿಲ್ಲದೆ ಜ್ವರ, ವೇಗದ ಹೃದಯ ಬಡಿತ, ಕಡಿಮೆ ರಕ್ತದೊತ್ತಡ, ಇದು ಕೆಲವೊಮ್ಮೆ ಕುಳಿತಾಗ, ನಿಂತಿರುವಾಗ ತಲೆತಿರುಗುವಿಕೆ ಅಥವಾ ತಲೆತಿರುಗಿದಂತೆ ಭಾವನೆ ಕಾಣಿಸಬಹುದು.

ಇದರ ಜೊತೆಗೆ ಸನ್ ಬರ್ನ್, ಅಥವಾ ಬಾಯಿ, ಕಣ್ಣುಗಳು ಅಥವಾ ಯೋನಿಯೊಳಗಿನ ಅಂಗಾಂಶದಲ್ಲಿ ಕೆಂಪು ಬಣ್ಣದಂತೆ ಕಾಣುವ ಚರ್ಮದ ಬದಲಾವಣೆಗಳು ಅಲ್ಲದೆ,ಇತರ ಕಡಿಮೆ ಸಾಮಾನ್ಯ ಲಕ್ಷಣಗಳೆಂದರೆ ವಾಂತಿ, ಅತಿಸಾರ ಮತ್ತು ಸ್ನಾಯು ನೋವು ಮುಂತಾದ ರೋಗಲಕ್ಷಣಗಳು ಕಾಣಿಸಿಕೊಂಡರೆ ವೈದ್ಯರನ್ನು ಭೇಟಿಯಾಗುವುದು ಉತ್ತಮ.

ಹಾಗಾದ್ರೆ, ಟಾಕ್ಸಿಕ್ ಶಾಕ್ ಸಿಂಡ್ರೋಮ್ ಬರದಂತೆ ತಡೆಯುವುದು ಹೇಗೆ?? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ .

ಮುಟ್ಟಿನ ಅವಧಿಯಲ್ಲಿ ಟ್ಯಾಂಪೂನ್‌ಗಳು ಮತ್ತು ಪ್ಯಾಡ್‌ಗಳನ್ನು ಪರ್ಯಾಯವಾಗಿ ಬದಲಾಯಿಸುವ ಮೂಲಕ TSS ಪಡೆಯುವ ಅಪಾಯವನ್ನು ಕಡಿಮೆ ಮಾಡಬಹುದು. ಅಧಿಕ ಹೀರಿಕೊಳ್ಳುವ ಟ್ಯಾಂಪೂನ್‌ಗಳನ್ನು ಮುಟ್ಟಿನ ಅತಿ ಹೆಚ್ಚು ರಕ್ತಸ್ರಾವದ ದಿನಗಳಲ್ಲಿ ಮಾತ್ರ ಬಳಸುವುದು ಕ್ಷೇಮ.

ಕಡಿಮೆ ರಕ್ತಸ್ರಾವದ ದಿನಗಳಲ್ಲಿ, ಕಡಿಮೆ ಹೀರಿಕೊಳ್ಳುವಿಕೆಯ ಟ್ಯಾಂಪೂನ್ಗಳನ್ನು ಬಳಸಬೇಕು. ಮುಟ್ಟಿನ ಸಮಯದಲ್ಲಿ ಮಾತ್ರ ಟ್ಯಾಂಪೂನ್ಗಳನ್ನು ಬಳಸುವುದು ಉತ್ತಮ. ಮುಟ್ಟಾಗುವ ಮುನ್ನ ಸುರಕ್ಷತೆಗಾಗಿ ಅಥವಾ ಬಿಳಿಸೆರಗಿನ ಸಮಸ್ಯೆಯಿದ್ದಲ್ಲಿ ಮಿನಿ ಪ್ಯಾಡ್‌ಗಳ ಬಳಕೆ ಅತ್ಯುತ್ತಮ.

ಮಹಿಳೆಯರು ಮುಟ್ಟಿನ ಸಮಯದಲ್ಲಿ ಪ್ರತಿ ನಾಲ್ಕರಿಂದ ಎಂಟು ಗಂಟೆಗಳಿಗೊಮ್ಮೆ ಟ್ಯಾಂಪೂನ್‌ಗಳನ್ನು ಮರೆಯದೇ ಬದಲಾಯಿಸಬೇಕು. ಹಗಲಿನಲ್ಲಿ ಮಾತ್ರ ಟ್ಯಾಂಪೂನ್ಗಳನ್ನು ಮತ್ತು ರಾತ್ರಿಯಲ್ಲಿ ಪ್ಯಾಡ್‌ಗಳನ್ನು ಬಳಸುವುದು ಒಳ್ಳೆಯದು.

ಪ್ಯಾಡ್‌ಗಳನ್ನು ಎಷ್ಟು ಬಾರಿ ಬದಲಾಯಿಸಬೇಕು..?

ಮಹಿಳೆಯರ ಮುಟ್ಟಿನ ಅವಧಿಯಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಿದ್ದರೆ, ಹೆಚ್ಚು ರಕ್ತಸ್ರಾವವಾಗಿ ಪ್ಯಾಡ್‌ ಫುಲ್‌ ಆಗಿದೆ ಎಂದೆನಿಸಿದಾಗ ಪ್ಯಾಡ್ ಚೇಂಜ್‌ ಮಾಡಬಹುದಾಗಿದೆ. ಪ್ಯಾಡ್‌ ಹೆಚ್ಚು ಅವಧಿಯವರೆಗೂ ಬಳಸಿದರೆ ಅದರಿಂದ ಒಂದು ರೀತಿಯ ವಾಸನೆ ಹೊರಹೊಮ್ಮುತ್ತದೆ ಜೊತೆಗೆ ಹೆಚ್ಚು ಅವಧಿಯವರೆಗೂ ಒಂದೇ ಪ್ಯಾಡ್‌ ಬಳಸಿದಲ್ಲಿ ಚರ್ಮದ ಕಿರಿಕಿರಿ ಅಥವಾ ತುರಿಕೆಗೆ ಕಾರಣವಾಗುತ್ತದೆ. ಪ್ಯಾಡ್‌ಗಳನ್ನು ಬಳಸುವುದಾದರೆ ವಿಷಕಾರಿ ಆಘಾತ ಸಿಂಡ್ರೋಮ್‌ನ ಅಪಾಯವಿರದು. ನೀವು ರಾತ್ರಿಯಿಡೀ ಅಥವಾ ದಿನವಿಡೀ ಕೂಡಾ ಬಳಸಬಹುದಾಗಿದೆ.

ಪ್ಯಾಡ್‌ ಬದಲಾಯಿಸುವುದು ಮುಟ್ಟಿನ ಅವಧಿಯಲ್ಲಿ ಎಷ್ಟು ರಕ್ತಸ್ರಾವವಾಗುತ್ತಿದೆ ಎಂಬುದನ್ನು ಅವಲಂಬಿಸಿರುತ್ತದೆ. ಹೆಚ್ಚು ರಕ್ತಸ್ರಾವ ಹೊಂದಿದ್ದರೆ, ಅನೇಕ ಬಾರಿ ಬದಲಾಯಿಸಬೇಕಾದ ಅವಶ್ಯಕತೆ ಇದೆ. ಮೇಲೆ ತಿಳಿಸಿದ ಸರಳ ವಿಧಾನ ಅನುಸರಿಸಿ ಮುಟ್ಟಿನ ಸಮಯದಲ್ಲಿ ನೈರ್ಮಲ್ಯ ಕಾಪಾಡುವ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಇದನ್ನೂ ಓದಿ : ಜೀವನದಲ್ಲಿ ಸಾಧಿಸಿ ತೋರಿಸಬೇಕೆಂಬ ಛಲ ಇರುವವರಿಗೆ ಇಲ್ಲಿದೆ ಚಾಣಕ್ಯನ ಪವರ್ ಫುಲ್ ನೀತಿ!

Leave A Reply

Your email address will not be published.