Karnataka government: ರಾಜ್ಯ ಸರ್ಕಾರಕ್ಕೆ ಮತ್ತೊಂದು ಬಿಗ್ ಶಾಕ್ – ಅನ್ನಭಾಗ್ಯದ ಅಕ್ಕಿಗೂ ಕೋಕ್ ?!
Latest news politics Another shock to the state government for Annabhagya scheme
Karnataka government: ರಾಜ್ಯದಲ್ಲಿ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆಯುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಇದೀಗ ಹೊಸ ಆತಂಕವೊಂದು ಶುರುವಾಗಿದೆ. ಇದರಿಂದ ಅನ್ನಭಾಗ್ಯಕ್ಕೂ(Anna bhagya) ಕೋಕ್ ಸಿಗುವ ಸಾಧ್ಯತೆ ಹೆಚ್ಚಿದೆ.
ಪಂಚ ಗ್ಯಾರಂಟಿಗಳಲ್ಲಿ(5 Guarantys)ಒಂದಾದ ಅನ್ನ ಭಾಗ್ಯ ಯೋಜನೆಯನ್ನು ರಾಜ್ಯ ಸರ್ಕಾರ ಯಶಸ್ವಿಯಾಗಿ ಜಾರಿಗೊಳಿಸಿದೆ. ಭರವಸೆ ನೀಡಿದಂತೆ 10 ಕೆ ಜಿ ಅಕ್ಕಿ ನೀಡಲು ಶತಾಯ ಗತಾಯ ಪ್ರಯತ್ನ ಪಟ್ಟರು ಬೇಡಿಕೆ ಇರುವಷ್ಟು ಅಕ್ಕಿ ಸಿಗಲಿಲ್ಲ. ಈ ಕಾರಣ 5 ಕೆಜಿ ಅಕ್ಕಿ ಉಳಿದ 5 ಕೆಜಿ ಅಕ್ಕಿ ಬದಲು ಫಲಾನುಭವಿಗಳ ಖಾತೆಗೆ ಹಣ ಹಾಕಿದೆ. ತಾತ್ಕಾಲಿಕವಾಗಿ ಸಮಸ್ಯೆಗೆ ಪರಿಹಾರ ಕಂಡುಹುಡುಕಿದೆ. ಆದರೀಗ ಈ ಬೆನ್ನಲ್ಲೇ ಮತ್ತೆ ರಾಜ್ಯ ಸರ್ಕಾರಕ್ಕೆ ಅಕ್ಕಿ ವಿಚಾರವಾಗಿ ತಲೆನೋವು ಶುರುವಾಗಿದೆ.
ಹೌದು, ಅನ್ನ ಭಾಗ್ಯದ(Anna bhagya) ಅಕ್ಕಿ ಹೊಂಚಲು ಸರ್ಕಾರ ವಿಭಿನ್ನ ಮೂಲಗಳನ್ನು ಹುಡುಕುವಾಗಲೇ ಸರ್ಕಾರಕ್ಕೆ ಮತ್ತೊಂದು ಆತಂಕ ಶುರುವಾಗಿದೆ. ಯಾಕೆಂದರೆ ಭಾರತದ ರಫ್ತು ನೀತಿಯಲ್ಲಿ ಬದಲಾವಣೆ ಮಾಡಿದ್ದು, ಬಾಸುಮತಿಯೇತರ ಬಿಳಿ ಅಕ್ಕಿಯ ರಫ್ತಿನ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ. ಭಾರತೀಯ ಮಾರುಕಟ್ಟೆಗಳಲ್ಲಿ(Indian market)ಸಾಕಷ್ಟು ಅಕ್ಕಿಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಬೆಲೆಗೆ ಕಡಿವಾಣ ಹಾಕಲು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯವು ಬಾಸ್ಮತಿಯೇತರ ಬಿಳಿ ಅಕ್ಕಿಯ ರಫ್ತನ್ನು ನಿಷೇಧಿಸಿ ಗುರುವಾರ ಆದೇಶವನ್ನು ಹೊರಡಿಸಿದೆ. ಇದರಿಂದ ಅಕ್ಕಿಯ ಬೆಲೆ ಜಾಗತಿಕವಾಗಿ ಏರಿಕೆಯಾಗುತ್ತಿದ್ದು, ಸರ್ಕಾರಕ್ಕೆ ಹೊಸ ಸಮಸ್ಯೆ ಎದುರಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಆಹಾರ ಸಚಿವ ಕೆ.ಎಚ್.ಮುನಿಯಪ್ಪ(K H muniyappa) ‘ಅಂತಾರಾಷ್ಟ್ರೀಯ ಬೆಳವಣಿಗೆಗಳಿಂದ ನಾವು ವಿಚಲಿತರಾಗಿಲ್ಲ. ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಸಲಾಗುತ್ತದೆ. ನಾನು ಎಲ್ಲ ಪಾಲುದಾರರೊಂದಿಗೆ ಮೂರು ಸಭೆಗಳನ್ನು ನಡೆಸಿದ್ದೇನೆ. ಸೆಪ್ಟೆಂಬರ್ ವೇಳೆಗೆ, ನಾವು ನಗದು ವಿತರಣೆಯನ್ನು ನಿಲ್ಲಿಸಿ , ಮೂಲತಃ ಯೋಜಿಸಿದಂತೆ ಅಕ್ಕಿ ವಿತರಿಸಲು ಸಾಧ್ಯವಾಗುತ್ತದೆ. ಅಕ್ಕಿಯ ಬದಲಿಗೆ, ನಾವು ರಾಜ್ಯದ ದಕ್ಷಿಣ ಭಾಗಗಳಲ್ಲಿ ರಾಗಿ ಮತ್ತು ಉತ್ತರ ಪ್ರದೇಶಗಳಲ್ಲಿ ಜೋಳ ನೀಡಲು ಪ್ರಯತ್ನಿಸುತ್ತಿದ್ದೇವೆ’ ಎಂದು ಹೇಳಿದರು.
ಇದನ್ನು ಓದಿ: Cross Border Love: ಗಡಿ ದಾಟಿದ ಮತ್ತೊಂದು ಪ್ರೇಮ ಪಯಣ ; 6 ರ ಮಗ, ಗಂಡನನ್ನು ಬಿಟ್ಟು ಪಾಕ್’ಗೆ ಹೋದ ವಿವಾಹಿತೆ !