Daily Horoscope 19/07/2023: ಹೊಸ ವಸ್ತ್ರ ಮತ್ತು ಆಭರಣದ ಖರೀದಿ ಜೋರು ಈ ರಾಶಿಯವರಿಗಿಂದು!

Daily Horoscope 19/07/2023

Daily Horoscope 19/07/2023

ಮೇಷ ರಾಶಿ.
ವ್ಯವಹಾರಗಳಲ್ಲಿ ಸ್ವಂತ ಆಲೋಚನೆಗಳು ಕೂಡಿ ಬರುವುದಿಲ್ಲ. ಹಣಕಾಸಿನ ವ್ಯವಹಾರಗಳು ನಿರಾಶಾದಾಯಕವಾಗಿರುತ್ತವೆ. ಆದಾಯಕ್ಕಿಂತ ಖರ್ಚುಗಳು ಹೆಚ್ಚಾಗುತ್ತವೆ. ಆತ್ಮೀಯರೊಂದಿಗೆ ಮಾತಿನ ಚಕಮಕಿ ನಡೆಯುತ್ತದೆ. ವೃತ್ತಿಪರ ಕೆಲಸಗಳಲ್ಲಿ ಅಧಿಕಾರಿಗಳೊಂದಿಗೆ ಸಮಸ್ಯೆಗಳಿರುತ್ತವೆ. ವಿದ್ಯಾರ್ಥಿಗಳು ಹೆಚ್ಚು ಶ್ರಮವಹಿಸಬೇಕು. ನಿರುದ್ಯೋಗಿಗಳ ಶ್ರಮ ವ್ಯರ್ಥವಾಗುತ್ತದೆ.

ವೃಷಭ ರಾಶಿ.
ಆದಾಯವು ತೃಪ್ತಿಕರವಾಗಿರುತ್ತದೆ.ವೃತ್ತಿ ವ್ಯವಹಾರದಲ್ಲಿ ಕಾರ್ಯಸಿದ್ಧಿ ಯಾಗುತ್ತದೆ. ಕೈಗೊಂಡ ಕಾರ್ಯಗಳು ಸುಗಮವಾಗಿ ಸಾಗುತ್ತವೆ. ಸಮಾಜದಲ್ಲಿ ನಿಮ್ಮ ಮಾತಿಗೆ ಬೆಲೆ ಹೆಚ್ಚಾಗುತ್ತದೆ. ಬಂಧುಗಳಿಂದಅಪರೂಪದ ಆಹ್ವಾನಗಳು ಬರುತ್ತವೆ.ಉದ್ಯೋಗಗಳಲ್ಲಿ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿ , ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುತ್ತೀರಿ.

ಮಿಥುನ ರಾಶಿ.
ಹಳೆ ಸಾಲದ ಒತ್ತಡದಿಂದ ಹೊರಬರಲು ಹೊಸ ಸಾಲಗಳನ್ನು ಮಾಡಬೇಕಾಗುತ್ತದೆ . ಬಾಲ್ಯದ ಗೆಳೆಯರೊಂದಿಗೆ ವಿವಾದಗಳಿರುತ್ತವೆ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಮನೆಯ ಹೊರಗೆ ಕಿರಿಕಿರಿಗಳು ಹೆಚ್ಚಾಗುತ್ತವೆ.ವೃತ್ತಿಪರ ವ್ಯವಹಾರದಲ್ಲಿ ಫಲಿತಾಂಶಗಳು ನಿರಾಶಾದಾಯಕವಾಗಿರುತ್ತವೆ.ಉದ್ಯೋಗದಲ್ಲಿ ಋಣಾತ್ಮಕ ವಾತಾವರಣವಿರುತ್ತದೆ.

ಕಟಕ ರಾಶಿ.
ಸಮಾಜದಲ್ಲಿ ಪ್ರಮುಖರೊಂದಿಗಿನ ಸಂಪರ್ಕಗಳು ಹೆಚ್ಚಾಗುತ್ತವೆ. ಆತ್ಮೀಯರಿಂದ ಶುಭಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಕೆಲವು ವ್ಯವಹಾರಗಳಲ್ಲಿ ಧೈರ್ಯದಿಂದ ಮುನ್ನಡೆಯುತ್ತೀರಿ. ಹಣಕಾಸಿನ ಪರಿಸ್ಥಿತಿ ಸ್ವಲ್ಪ ಉತ್ತಮವಾಗಿರುತ್ತದೆ. ವ್ಯಾಪಾರ ವಿಸ್ತರಣೆಯ ಪ್ರಯತ್ನಗಳು ಅನುಕೂಲಕರವಾಗಿರುತ್ತವೆ ಮತ್ತು ಉದ್ಯೋಗಿಗಳು ಯೋಜಿತ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತೀರಿ.

ಸಿಂಹ ರಾಶಿ.
ಆದಾಯಕ್ಕಿಂತ ಖರ್ಚು ಅಧಿಕವಾಗುತ್ತದೆ. ಸಾಲಗಾರರಿಂದ ಒತ್ತಡ ಹೆಚ್ಚಾಗುತ್ತದೆ. ಉದಾರ ಸಂಬಂಧ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬವಾಗುತ್ತದೆ. ವ್ಯಾಪಾರದಲ್ಲಿ ಹೊಸ ಸಮಸ್ಯೆಗಳು ಉದ್ಭವಿಸುತ್ತವೆ,ಆದ್ದರಿಂದ ಎಚ್ಚರಿಕೆ ಅಗತ್ಯ. ವೃತ್ತಿಪರ ಕೆಲಸಗಳಲ್ಲಿ ವಿವಾದಗಳಿಂದ ದೂರವಿರುವುದು ಉತ್ತಮ.

ಕನ್ಯಾ ರಾಶಿ.
ಸಮಾಜದ ಪ್ರಮುಖ ವ್ಯಕ್ತಿಗಳಿಂದ ಅಪರೂಪದ ಆಮಂತ್ರಣಗಳು ಸಿಗುತ್ತವೆ.ಆರ್ಥಿಕ ಲಾಭ ದೊರೆಯುತ್ತದೆ.ಮನೆಯಲ್ಲಿ ಶುಭ ಕಾರ್ಯಗಳನ್ನು ನಿರ್ವಹಿಸುತ್ತೀರಿ. ಮಕ್ಕಳ ವಿವಾಹ ಪ್ರಯತ್ನಗಳು ಉತ್ತಮ ಫಲಿತಾಂಶವನ್ನು ನೀಡುತ್ತವೆ.ಎಲ್ಲಾ ವಿಷಯಗಳಲ್ಲಿ ಸಂಬಂಧಿಕರು ಮತ್ತು ಸ್ನೇಹಿತರಿಂದ ಸಹಾಯ ದೊರೆಯುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಯೋಗವಿದೆ.

Daily Horoscope 19/07/2023

ತುಲಾ ರಾಶಿ.

ಉದ್ಯೋಗದಲ್ಲಿ ಅಧಿಕಾರಿಗಳೊಂದಿಗಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತೀರಿ. ವ್ಯಾಪಾರ ವ್ಯವಹಾರಗಳು ಆಶಾದಾಯಕವಾಗಿರುತ್ತವೆ. ಶ್ರಮಕ್ಕೆ ತಕ್ಕ ಫಲಿತಾಂಶವನ್ನು ಪಡೆಯುತ್ತೀರಿ. ವೃತ್ತಿಪರ ವ್ಯವಹಾರದಲ್ಲಿ ನಿಮ್ಮ ಸ್ವಂತ ಆಲೋಚನೆಗಳಿಂದ ಮುನ್ನಡೆಯುವುದು ಒಳ್ಳೆಯದು. ಮನೆಯ ಹೊರಗೆ ವಾತಾವರಣ ಅನುಕೂಲಕರವಾಗಿರುತ್ತದೆ. ಬಂಧುಮಿತ್ರರಲ್ಲಿ ಸಣ್ಣಪುಟ್ಟ ವಿವಾದಗಳು ಉಂಟಾಗುತ್ತವೆ.

ವೃಶ್ಚಿಕ ರಾಶಿ.
ಕೈಗೊಂಡ ಕೆಲಸಗಳು ಮಧ್ಯದಲ್ಲಿ ನಿಲ್ಲುತ್ತವೆ.ಇತರರ ವರ್ತನೆಯಿಂದ ಮಾನಸಿಕ ಅಶಾಂತಿ ಉಂಟಾಗುತ್ತದೆ.ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ವಾದ ವಿವಾದಗಳು ಉಂಟಾಗುತ್ತವೆ.ವೃತ್ತಿಪರ ವ್ಯವಹಾರಗಳು ಮಂದಗತಿಯಲ್ಲಿ ಸಾಗುತ್ತವೆ.ಉದ್ಯೋಗ ಪ್ರಯತ್ನಗಳು ನಿಧಾನವಾಗುತ್ತವೆ.ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಬೇಕು.

ಧನುಸ್ಸು ರಾಶಿ.
ಮಕ್ಕಳ ಶೈಕ್ಷಣಿಕ ವಿಷಯಗಳು ಸಮಸ್ಯಾತ್ಮಕವಾಗಿರುತ್ತವೆ.ವೃತ್ತಿಪರ ವ್ಯವಹಾರದಲ್ಲಿ ಗೊಂದಲಮಯ ಸನ್ನಿವೇಶಗಳಿರುತ್ತವೆ.ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ವೃತ್ತಿಪರ ಉದ್ಯೋಗಗಳಲ್ಲಿ ಜವಾಬ್ದಾರಿಗಳು ಮತ್ತಷ್ಟು ಹೆಚ್ಚಾಗುತ್ತವೆ. ಖರ್ಚುಗಳನ್ನು ನಿಯಂತ್ರಿಸಲು ಕಷ್ಟಕರವಾಗುತ್ತದೆ. ದೈವಿಕ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.

ಮಕರ ರಾಶಿ.
ಸಂಗಾತಿಯೊಂದಿಗೆ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುತ್ತೀರಿ. ಸರ್ಕಾರದ ವ್ಯವಹಾರಗಳಲ್ಲಿ ಜಾಗ್ರತೆಯಿಂದ ವ್ಯವಹರಿಸಬೇಕು.ಅಗತ್ಯಕ್ಕೆ ಆಪ್ತ ಸ್ನೇಹಿತರಿಂದ ಸಹಾಯ ಸಹಕಾರಗಳು ದೊರೆಯುತ್ತವೆ.ಮಕ್ಕಳು ಶೈಕ್ಷಣಿಕ ವಿಷಯಗಳು ತೃಪ್ತಿಕರವಾಗಿರುತ್ತವೆ. ಉದ್ಯೋಗದಲ್ಲಿ ಉನ್ನತ ಹುದ್ದೆಗಳನ್ನು ಪಡೆಯುತ್ತೀರಿ.

ಕುಂಭ ರಾಶಿ.
ವೃತ್ತಿ ಪರ ಉದ್ಯೋಗಗಳಲ್ಲಿ ಹೊಸ ಪ್ರೋತ್ಸಾಹ ಸಿಗುತ್ತದೆ, ಕುಟುಂಬಸ್ಥರು ಮತ್ತು ಸ್ನೇಹಿತರೊಂದಿಗೆ ಭೋಜನ ಮತ್ತು ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ಆದಾಯದ ವಿಷಯದಲ್ಲಿ ತೊಂದರೆಗಳನ್ನು ನೀಗಿಸುತ್ತೀರಿ. ವ್ಯಾಪಾರದಲ್ಲಿನ ಶತ್ರು ಸಮಸ್ಯೆಗಳಿಂದ ಮುಕ್ತಿ ಹೊಂದುತ್ತೀರಿ . ಮನೆಯ ಹೊರಗೆ ವಾತವರಣ ಅನುಕೂಲಕರವಾಗಿರುತ್ತದೆ. ಆರ್ಥಿಕ ವಿಷಯದಲ್ಲಿ ಪ್ರಗತಿ ಸಾಧಿಸುತ್ತೀರಿ.

ಮೀನ ರಾಶಿ.
ಹೊಸ ವಸ್ತ್ರ ಮತ್ತು ಆಭರಣಗಳನ್ನು ಖರೀದಿಸುತ್ತೀರಿ.ಕುಟುಂಬ ಸದಸ್ಯರೊಂದಿಗೆ ಸಮಾಜ ಸೇವಾ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತೀರಿ. ಎಲ್ಲಾ ವ್ಯವಹಾರಗಳು ಅನುಕೂಲಕರವಾಗಿರುತ್ತವೆ. ಉದ್ಯೋಗದಲ್ಲಿ ಅಧಿಕಾರಿಗಳಿಂದ ಪ್ರಶಂಸೆಯನ್ನು ಪಡೆಯುತ್ತೀರಿ. ಮತ್ತು ವ್ಯವಹಾರಗಳು ಲಾಭದಾಯಕವಾಗಿರುತ್ತವೆ. ಮಕ್ಕಳ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.

ಇದನ್ನೂ ಓದಿ: Interesting Facts : ಸ್ಟೂಲ್ ಮಧ್ಯೆ ರಂಧ್ರ ಯಾಕೆ ಇದೆ, ಗೊತ್ತೇ? ಇಂಟೆರೆಸ್ಟಿಂಗ್ ಕಾರಣ ಇಲ್ಲಿದೆ!

Leave A Reply

Your email address will not be published.