R Ashok- Satish jarki holi: ಆ ಮಂತ್ರಿಗೆ ಅಮವಾಸ್ಯೆಗೆ ಸ್ಮಶಾಣದಲ್ಲಿ ಕೂತು ಊಟಮಾಡೋದು ಮಾತ್ರ ಗೊತ್ತು..! ಸಚಿವ ಜಾರಕಿಹೊಳಿ ವಿರುದ್ಧ ಆರ್. ಅಶೋಕ್ ಕಿಡಿ

Latest Karnataka political news R Ashok salms Satish jarkiholi at chikkamagaluru

R Ashok- Satish jarkiholi: ಉಚಿತ ವಿದ್ಯುತ್ಗೆ(Free current) ಅರ್ಜಿಹಾಕುವುದಕ್ಕೆ ಕೇಂದ್ರ ಸರ್ಕಾರ ಸರ್ವರ್ ಹ್ಯಾಕ್(Server hack) ಮಾಡಿದೆ ಎಂದು ಇತ್ತೀಚೆಗೆ ಸಚಿವ ಸತೀಶ್ ಜಾರಕಿಹೊಳಿ(Satish jarkiholi) ನೀಡಿದ ಹೇಳಿಕೆಗೆ ಮಾಜಿ ಸಚಿವ, ಬಿಜೆಪಿ ಶಾಸಕ ಆರ್ ಅಶೋಕ್(R Ashok- Satish jarkiholi) ಅವರು ಬಹಳ ಮಾರ್ಮಿಕವಾಗಿ ಕೌಂಟರ್ ನೀಡಿದ್ದಾರೆ.

ಹೌದು, ಉಚಿತ ವಿದ್ಯುತ್ಗೆ ಅರ್ಜಿಹಾಕುವುದಕ್ಕೆ ಕೇಂದ್ರ ಸರ್ಕಾರ(central Government) ಸರ್ವರ್ ಹ್ಯಾಕ್ ಮಾಡಿದೆ ಎಂದು ಸಚಿವರೊಬ್ಬರು ಹೇಳಿಕೆ ನೀಡಿದ್ದಾರೆ. ಸರ್ವರ್ ಎಂದರೇನು ? ಹ್ಯಾಕ್ ಎಂದರೇನು ಎಂಬುದು ಅವರಿಗೆ ಗೊತ್ತಿಲ್ಲ, ಗೊತ್ತಿರುವುದೊಂದೆ ಅಮವಾಸ್ಯೆಯಲ್ಲಿ ಮಸಣದಲ್ಲಿ ಕುಳಿತು ಊಟಮಾಡೋದು ಎಂದು ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಪರೋಕ್ಷವಾಗಿ ಟೀಕಿಸಿದರು.

ಕೇಂದ್ರಸರ್ಕಾರಕ್ಕೆ 9 ವರ್ಷ ತುಂಬಿದ ಹಿನ್ನಲೆಯಲ್ಲಿ ಚಿಕ್ಕಮಗಳೂರು(Chikkamagalure) ನಗರದ ಗಾಯತ್ರಿಕಲ್ಯಾಣ ಮಂಟಪದಲ್ಲಿ ಬಿಜೆಪಿ(BJP) ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮೋಸ, ವಂಚನೆಯಿಂದ ಆಮಿಷ ಒಡ್ಡುವ ಮೂಲಕ ವಿಧಾನಸಭಾ ಚುನಾವಣೆಯಲ್ಲಿ (Assembly election) ಕಾಂಗ್ರೆಸ್ ಗೆಲುವು ಸಾಧಿಸಿದೆ. ಇದನ್ನು ಜನರಿಗೆ ತಿಳಿಸಲು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹಳ್ಳಿಗಳಿಗೆ ಮತ್ತು ನಗರಕ್ಕೆ ಹೋಗೋಣವೆಂದರು.

ಅಲ್ಲದೆ ‘ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್​ ಇಬ್ಬರೂ ಸೇರಿ ಸಮ್ಮಿಶ್ರ ಸರ್ಕಾರವನ್ನು ರಚಿಸಿದ್ದಾರೆ. ಇತ್ತೀಚಿಗೆ ಇದೇನು ಸಮ್ಮಿಶ್ರ ಸರ್ಕಾರವೇ ಎಂದು ಪ್ರಶ್ನಿಸುವ ಮೂಲಕ ಸಿದ್ದರಾಮಯ್ಯನವರೇ ಈ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಮುಖ್ಯಮಂತ್ರಿಗಳಾದವರು ಮಾಜಿ ಸಿಎಂಗಳನ್ನು ಭೇಟಿ ಮಾಡುವುದು ವಾಡಿಕೆ. ಆದರೆ, ಡಿಸಿಎಂ ಡಿಕೆ. ಶಿವಕುಮಾರ್​ ಎಸ್​.ಎಂ.ಕೃಷ್ಣ, ಎಚ್​.ಡಿ.ದೇವೇಗೌಡ, ಬಸವರಾಜ್​ ಬೊಮ್ಮಾಯಿ ಅವರನ್ನು ಭೇಟಿ ಮಾಡುವ ಮೂಲಕ ತಾವೇ ಮುಖ್ಯಮಂತ್ರಿ ಎಂಬಂತೆ ವರ್ತಿಸುತ್ತಿದ್ಧಾರೆ. ಈ ಇಬ್ಬರು ನಾಯಕರ ಜಗಳ ಬೀದಿಗೆ ಬಂದರೆ ಸರ್ಕಾರ ಪತನವಾಗುವುದು ನಿಶ್ಚಿತ’ ಎಂದು ಹೇಳಿದ್ಧಾರೆ.

ಬಳಿಕ ಮಾತನಾಡಿದ ಅವರು ಸಿದ್ಧರಾಮಯ್ಯ(Siddaramaiah) ಟಿಪ್ಪುವಿನ ರಾಯಭಾರಿಯಾಗಿದ್ದಾರೆ. ಮತಾಂತರ ನಿಷೇಧಕಾಯ್ದೆ,ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆದುಕೊಳ್ಳುತ್ತಾರಂತೆ ಹಾಗೆನಾದರೂ ಆದರೆ ಲವ್ ಜಿಹಾದ್‌ ಹೆಚ್ಚಳವಾಗುತ್ತದೆ. ನಿಮ್ಮ ಮನೆಯಲ್ಲಿರುವ ಗೋವುಗಳು ಕಾಣೆಯಾಗುತ್ತವೆ ಎಂದು ಎಚ್ಚರಿಸಿದರು. ಉಚಿತಕೊಡುಗೆಗಳನ್ನು ಷರತ್ತು ಇಲ್ಲದೆ ಕೊಡುವತನಕ ನಾವ್ಯಾರು ಮನೆಗಳಿಗೆ ಹೋಗದೆ ಪ್ರತಿಭಟನೆಯಲ್ಲಿ ತೊಡಗಿಸಿ ಕೊಳ್ಳೋಣ ವೆಂದು ತಿಳಿಸಿದರು.

ಇದನ್ನೂ ಓದಿ: ಕೆ ಆರ್‌ ಎಸ್‌ ಜಲಾಶಯ ಅಭಾವ ಹೆಚ್ಚಳ : ಕುಡಿಯುವ ನೀರಿಗೂ ಪರದಾಡುವಂತಾಗುತ್ತಾ?

Leave A Reply

Your email address will not be published.