Georgia: 5.5 ಉದ್ದ ಇದ್ದುದನ್ನು 6ಕ್ಕೇರಿಸಲು ಈತ ಸುರಿದದ್ದು ಬರೋಬ್ಬರಿ 66ಲಕ್ಷ..!! ಏನನ್ನು… ಯಾಕೆ…??

International news Georgia Man tired of rejection by women spends 66 lakhs on leg lengthening surgery

Georgia: ಹುಡುಗಿಯರಿಗೆ ಹುಡುಗರ ಹೈಟೇ(Height) ವಿಕ್ನೆಸ್. ಅಂದರೆ ಸಾಮಾನ್ಯವಾಗಿ ಎತ್ತರದ ಹುಡುಗರನ್ನೆ ಹುಡುಗಿಯರು ಹೆಚ್ಚು ಇಷ್ಟ ಪಡೋದು. ಕುಳ್ಳಗಿದ್ರೆ ಜೀವನದಲ್ಲಿ ನಿರಂತರ ನಿರಾಕರಣೆಗಳನ್ನು ಎದುರಿಸಬೇಕೆಂಬುದು, ಯಾರೂ ನಮ್ಮನ್ನು ಮೆಚ್ಟುವುದಿಲ್ಲ ಎಂಬುದು ಕೆಲವರ ಬಂಬಿಕೆ. ಹೀಗಾಗಿ ಎತ್ತರ ಆಗಬೇಕೆಂಬುದು ಎಲ್ಲರ ಆಸೆ. ಆದ್ರೆ ಇಲ್ಲೊಬ್ಬ ಭೂಪ ತನ್ನ ಹೈಟ್ ಹೆಚ್ಚಿಸಿಕೊಳ್ಳೋಕೆ ಏನೆಲ್ಲಾ ಕಸರತ್ತು ಮಾಡಿದ್ದಾನೆ, ಎಷ್ಟೆಲ್ಲಾ ದುಡ್ಡು ಸುರಿದಿದ್ದಾನೆ ಗೊತ್ತಾ..?

ಇಲ್ಲೊಬ್ಬ 27ರ ಯುವಕ ತಾನು ಕುಳ್ಳಗಿದ್ದೇನೆ ಎಂದು ಮನನೊಂದು ಎತ್ತರವಾಗಲು ಭಾರೀ ಕಸರತ್ತು ಮಾಡಿದ್ದಾನೆ. ಹೌದು, ಜಾರ್ಜಿಯಾದ(Georgia) ನೌಕಾಪಡೆಯಲ್ಲಿರುವ ಡಿನ್ಝೆಲ್​ ಸೈಗರ್ಸ್​ಗೆ(Diesel Sagar) 27 ವರ್ಷ. ತಾನು ಕುಳ್ಳನೆಂಬ ಕಾರಣಕ್ಕೆ ಅನೇಕ ಹುಡುಗಿಯರಿಂದ ತಿರಸ್ಕರಿಸಲ್ಪಟ್ಟ ನಂತರ ಬೇಸತ್ತ ಜಾರ್ಜಿಯಾದ ವ್ಯಕ್ತಿ ತನ್ನ ಎತ್ತರವನ್ನು ಹೆಚ್ಚಿಸುವ ಶಸ್ತ್ರಚಿಕಿತ್ಸೆಗೆ 66 ಲಕ್ಷ ರೂ. ಖರ್ಚು ಮಾಡುವ ಮೂಲಕವಾಗಿ ಸುದ್ದಿಯಾಗಿದ್ದಾನೆ.

ಅಂದಹಾಗೆ 27ರ ಹರೆಯದ ಡಿನ್ಜೆಲ್ ಸಿಗರ್ಸ್ ಈ ಹಿಂದೆ 5 ಅಡಿ 5 ಇಂಚು ಎತ್ತರವಿದ್ದರು. ಹೀಗಾಗಿ ಯಾವೊಬ್ಬ ಹುಡುಗಿಯೂ (Girl) ಅವರನ್ನು ಇಷ್ಟಪಡುತ್ತಿರಲ್ಲಿಲ್ಲ. ಡಿನ್ಜೆಲ್ ಅಪ್ರೋಚ್ ಮಾಡಿದ್ದ ಹಲವು ಹುಡುಗಿಯರು ಅವರನ್ನು ತಿರಸ್ಕರಿಸಿದ್ದರು. ಹಲವು ಪ್ರಪೋಸಲ್ ರಿಜೆಕ್ಟ್ ಆದ ನಂತರ ಡಿನ್ಜೆಲ್ ತುಂಬಾ ದುಃಖವನ್ನು (Sad) ಅನುಭವಿಸಿದ್ದರು. ಹೀಗಾಗಿ ಹೇಗಾದರೂ ಸರಿ ಹೈಟ್ ಹೆಚ್ಚಿಸಿಕೊಳ್ಳಬೇಕು ಎಂದು ನಿರ್ಧರಿಸಿದರು. ಆ ನಂತರ ಲೆಗ್‌ ಸರ್ಜರಿ ಮಾಡಿ ಹೈಟ್ ಹೆಚ್ಚಿಸಿಕೊಂಡಿದ್ದಾರೆ. ಈ ಹಿಂದೆ 5 ಅಡಿ 5 ಇಂಚು ಎತ್ತರವಿದ್ದ ಡಿನ್ಜೆಲ್ ಸಿಗರ್ಸ್ ಈಗ ಶಸ್ತ್ರಚಿಕಿತ್ಸೆಯ ನಂತರ 6 ಅಡಿ ಎತ್ತರ (Height)ವಿದ್ದಾರೆ.

ವಿಚಿತ್ರ ಅಂದ್ರೆ ಎರಡೂ ಕಾಲುಗಳ ಮೂಳೆಯನ್ನು(Leg bon) ಅರ್ಧದಷ್ಟು ಕತ್ತರಿಸಿ ರಾಡ್​ ಸೇರಿಸಲಾಗಿದೆ.. 90 ದಿನಗಳಲ್ಲಿ ಹೊಸ ಮೂಳೆಯು ಬೆಳೆದ ನಂತರ ರಾಡ್​ ಅನ್ನು ತೆಗೆಯಲಾಗುತ್ತದೆ. ಒಟ್ಟಾರೆ ಈ ಚಿಕಿತ್ಸೆಯ ಅವಧಿ ಒಂದು ವರ್ಷ. ಆದರೂ ಮೊದಲಿನಂತೆ ಚಟುವಟಿಕೆಯಿಂದ ಇರಲು ಪೂರಕವಾದ ವ್ಯಾಯಾಮ ಮಾಡಬೇಕು. ಈ ಸಂಬಧಿಸಿದ ವಿಡಿಯೋ ಸೋಶಿಯಲ್​​​ ಮೀಡಿಯಾದಲ್ಲಿ ವೈರಲ್​​​ ಆಗಿದೆ.

ಈ ಬಗ್ಗೆ ಮಾತನಾಡಿದ ಆತ ‘ನನ್ನ ಜೀವನದುದ್ದಕ್ಕೂ, ನಾನು ಜನರು ನನ್ನನ್ನು ಚಿಕ್ಕ ವ್ಯಕ್ತಿಯಂತೆ ನೋಡುವುದರಲ್ಲಿ ಹೆಣಗಾಡಿದ್ದೇನೆ ಮತ್ತು ಅದನ್ನು ಬದಲಾಯಿಸಲು ನಾನು ನಿರ್ಧರಿಸಿದೆ. ಅದು ಸರಿಯಾಗಿದೆ ಎಂದು ನಾನು ಭಾವಿಸುತ್ತೇನೆ’ ಎಂದು 27 ವರ್ಷದ ಸೈಗರ್ಸ್ ನ್ಯೂಯಾರ್ಕ್ ಪೋಸ್ಟ್‌ಗೆ(Newark post)ಇಮೇಲ್‌ನಲ್ಲಿ ತಿಳಿಸಿದ್ದಾರೆ. ‘ಅಂಗಗಳ ಉದ್ದವು ನನ್ನ ಜೀವನ (Life)ವನ್ನು ಬದಲಾಯಿಸಲು ನನಗೆ ಅವಕಾಶವನ್ನು ನೀಡಿತು ಮತ್ತು ನಾನು ಜೀವನವನ್ನು ಖುಷಿಯಿಂದ ಕಳೆಯುತ್ತಿದ್ದೇನೆ’ ಎಂದಿದ್ದಾನೆ.

ಇದನ್ನೂ ಓದಿ: R Ashok- Satish jarki holi: ಆ ಮಂತ್ರಿಗೆ ಅಮವಾಸ್ಯೆಗೆ ಸ್ಮಶಾಣದಲ್ಲಿ ಕೂತು ಊಟಮಾಡೋದು ಮಾತ್ರ ಗೊತ್ತು..! ಸಚಿವ ಜಾರಕಿಹೊಳಿ ವಿರುದ್ಧ ಆರ್. ಅಶೋಕ್ ಕಿಡಿ

Leave A Reply

Your email address will not be published.