Home International Netherland: ದಯವಿಟ್ಟು ಬೀಚ್ ಗಳಲ್ಲಿ ಸಂಭೋಗಿಸಬೇಡಿ ಎಂದು ಪ್ರವಾಸಿಗರಿಗೆ ಮನವಿ ಮಾಡಿದ ನೆದರ್ಲ್ಯಾಂಡ್!! ಕಾರಣವೇನು?

Netherland: ದಯವಿಟ್ಟು ಬೀಚ್ ಗಳಲ್ಲಿ ಸಂಭೋಗಿಸಬೇಡಿ ಎಂದು ಪ್ರವಾಸಿಗರಿಗೆ ಮನವಿ ಮಾಡಿದ ನೆದರ್ಲ್ಯಾಂಡ್!! ಕಾರಣವೇನು?

No Romance on Netherlands beach
Image source- Bunny ears

Hindu neighbor gifts plot of land

Hindu neighbour gifts land to Muslim journalist

No Romance on Netherlands beach : ಪ್ರವಾಸಿ ತಾಣಗಳ(Turismo place)ಪೈಕಿ ಕಡಲ ಕಿನಾರೆಗಳಂದರೆ, ಪ್ರವಾಸಿಗರಿಗೆ(Tourist)ಬಲು ಪ್ರೀತಿ. ಅದರಲ್ಲೂ ವಿದೇಶಿಗರಿಗಂತೂ ತುಂಡು ಬಟ್ಟೆ ತೊಟ್ಟು, ಮೈ ಮಾಟ ಪ್ರದರ್ಶಿಸುತ್ತಾ, ಉರಿಯೋ ಬಿಸಿಲಿಗೆ ಮೈ ಒಡ್ಡಿ ಮಲಗಿದರಂತೂ ಅವರ ಆನಂದಕ್ಕೆ ಪಾರವೇ ಇರೋದಿಲ್ಲ. ಇದಿಷ್ಟೇ ಅಲ್ಲದೆ ಕೆಲವೆಡೆ ಈ ಸಮುದ್ರದ ತಟಗಳಲ್ಲಿ, ಅಂದರೆ ಬೀಚ್ ಗಳಲ್ಲಿ ಕೆಲವರು ರತಿಕ್ರೀಡೆಯೊಂದಿಗೆ, ಸಂಭೋಗಿಸುವುದು ಕಂಡುಬರುತ್ತದೆ. ವಿದೇಶಗಳಲ್ಲಿ ಇದು ಮಾಮೂಲಾಗಿ ಬಿಟ್ಟಿದೆ. ಆದರೀಗ ನೆದರ್ಲ್ಯಾಂಡ್(Netherland) ಈ ಕಡಲ ಸಂಭೋಗಕ್ಕೆ ಬ್ರೇಕ್ ಹಾಕಲು ಮುಂದಾಗಿದೆ.

ಇದೇ ಮೊದಲಬಾರಿಗೆ ನೆದರ್‌ ಲ್ಯಾಂಡ್‌ನ ನಗರವೊಂದು ಬೀಚ್‌ ಮತ್ತು ದಿಬ್ಬಗಳಲ್ಲಿ ಸಂಭೋಗ ನಡೆಸುವುದನ್ನು ನಿಷೇಧಿಸಿದೆ (No Romance on Netherlands beach) . ಹೌದು, ನೆದರ್ಲೆಂಡ್‌ನ (Netherland) ಆಂಸ್ಟರ್ಡ್ಯಾಮ್ ಪಟ್ಟಣವು ತನ್ನ ಪ್ರವಾಸಿಗರಿಗೆ ದಯವಿಟ್ಟು ಕಡಲತೀರದಲ್ಲಿ ಲೈಂಗಿಕ ಚಟುವಟಿಕೆಗಳನ್ನು ಮಾಡೋದು ಬೇಡ ಎಂದು ಮನವಿ ಮಾಡಿದೆ. ದಕ್ಷಿಣ ನೆದರ್‌ಲ್ಯಾಂಡ್‌ನ ವೀರೆ ಎಂಬ ಪಟ್ಟಣವು No Sex On The Beach (ಬೀಚ್‌ನಲ್ಲಿ ಸಂಭೋಗ ಬೇಡ) ಎಂಬ ಅಭಿಯಾನ ಕೈಗೊಂಡಿದೆ.

ಅಂದಹಾಗೆ ಗುರುವಾರ ವೀರೆ ಮುನ್ಸಿಪಾಲಿಟಿ (Netherland Veere Municipality) ಈ ನಿರ್ಣಯ ಕೈಗೊಂಡಿದ್ದು, ಕಡಲ ತೀರಗಳು, ನೈಸರ್ಗಿಕ ಪ್ರದೇಶಗಳು ಹಾಗೂ ಮರಳಿನ ದಿಬ್ಬಗಳಲ್ಲಿ ಸಾರ್ವಜನಿಕ ಲೈಂಗಿಕತೆಯನ್ನ ನಿಷೇಧಿಸಿದೆ. ವಿಶೇಷವಾಗಿ ಮರಳಿನ ದಿಬ್ಬಗಳಲ್ಲಿ ರತಿಕ್ರೀಡೆಗೆ ಅವಕಾಶವಿಲ್ಲ. ಅಲ್ಲದೆ ಮೀಸಲು ಅರಣ್ಯ ಮತ್ತು ಬೀಚ್‌ಗಳಲ್ಲಿ ಲೈಂಗಿಕ ಚಟುವಟಿಕೆಗಳನ್ನು ತಪ್ಪಿಸಲು ಮೇಲ್ವಿಚಾರಣೆ ಹೆಚ್ಚಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ವೀರೆ ಪಟ್ಟಣದ ಮೇಯರ್ ಫ್ರೆಡೆರಿಕ್ ಶೌವೆನಾರ್‌ ಅವರು “ಸ್ಥಳೀಯ ಸಮುದಾಯಕ್ಕೆ ಈ ಮರಳಿನ ದಿಬ್ಬಗಳು ತುಂಬ ಮಹತ್ವದ್ದಾಗಿವೆ. ಅಶ್ಲೀಲ ಘಟನೆಗಳಿಂದ ಇವುಗಳನ್ನು ರಕ್ಷಿಸಬೇಕಿದೆ. ಪ್ರವಾಸಿಗರ ಲೈಂಗಿಕ ಚಟುವಟಿಕೆಯು ರಜೆ ಆಸ್ವಾದಿಸಲು ಬರುವ ಇತರ ಪ್ರವಾಸಿಗರಿಗೂ ತೊಂದರೆಯಾಗಬಹುದು. ಈ ನಿರ್ಧಾರವು ಸಾರ್ವಜನಿಕ ಸುವ್ಯವಸ್ಥೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಒಂದು ಪ್ರಮುಖ ಹೆಜ್ಜೆಯಾಗಿ ಕಾರ್ಯನಿರ್ವಹಿಸುತ್ತದೆ. ಸರ್ಕಾರ ಇನ್ನುಮುಂದೆ ಎಚ್ಚರಿಕೆಗಳನ್ನು ನೀಡುವುದಿಲ್ಲ ಬದಲಿಗೆ, ಶಿಕ್ಷಿಸುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Shakthi yojane: ಮಹಿಳೆಯರಿಗೆ ಚೀಟಿ ಹರಿದ ಸಿಎಂ!!ರೈಯ ರೈಯ….ಕಂಡಕ್ಟರ್ ಸಿದ್ರಾಮಯ್ಯ