Teachers Transfer: ರಾಜ್ಯದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಾಳೆಯಿಂದ, ವೇಳಾಪಟ್ಟಿಯಲ್ಲಿರುವ ಪ್ರಮುಖ 10 ಅಂಶಗಳ ಪಟ್ಟಿ ಇಲ್ಲಿದೆ

Teachers Transfer Process Start From Tomorrow

Teachers Transfer: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ತಡೆಹಿಡಿಯಲಾಗಿದ್ದ ರಾಜ್ಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಪುನರಾರಂಭಿಸಲು ಇದೀಗ ಸರ್ಕಾರ ಅನುಮತಿ ನೀಡಿದೆ. ಶಿಕ್ಷಣ ಇಲಾಖೆಯು ವರ್ಗಾವಣೆಗೆ ಪರಿಷ್ಕೃತ ವೇಳಾಪಟ್ಟಿಯನ್ನು ಸಿದ್ಧಗೊಳಿಸುತ್ತಿದ್ದು, ನಾಳೆಯಿಂದ ಶಿಕ್ಷಕರ ವರ್ಗಾವಣೆ (Teachers Transfer) ಪ್ರಕ್ರಿಯೆ ಆರಂಭವಾಗಲಿದೆ.

 

ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ-2020 ಜಾರಿಗೊಳಿಸಿ, ರಾಜ್ಯ ಸರ್ಕಾರ ಕಳೆದ ಡಿಸೆಂಬ‌ನಲ್ಲಿ ಅಧಿಸೂಚನೆ ಹೊರಡಿಸಿತ್ತು. ವರ್ಗಾವಣಾ ವೇಳಾ ಪಟ್ಟಿಯೂ ಬಿಡುಗಡೆಯಾಗಿತ್ತು. ಸುಮಾರು 80 ಸಾವಿರ ಶಿಕ್ಷಕರು ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ವಿಧಾನಸಭಾ ಚುನಾವಣೆಯಿಂದಾಗಿ ವರ್ಗಾವಣಾ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭಗೊಂಡಿದೆ.

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರು ಇಲಾಖೆಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಅದರಂತೆ ನಾಳೆಯಿಂದ ವರ್ಗಾವಣೆಯ ವೇಳಾಪಟ್ಟಿ ಬಿಡುಗಡೆ ಮಾಡಲು ಆಯುಕ್ತರ ಕಚೇರಿ ನಿರ್ಧರಿಸಿದೆ.

ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಸೇರಿದಂತೆ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪ್ರೌಢಶಾಲಾ ಶಿಕ್ಷಕರು, ತತ್ಸಮಾನ ವೃಂದದ ಶಿಕ್ಷಕರು, ಸರ್ಕಾರಿ ಪ್ರೌಢಶಾಲಾ ಶಿಕ್ಷಕರು/ತತ್ಸಮಾನ ವೃಂದದ ಶಿಕ್ಷಕರು/ಅಧಿಕಾರಿಗಳ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ನಾಳೆಯಿಂದ ಆರಂಭಗೊಳ್ಳಲಿದೆ. ಈ ಬಗ್ಗೆ ಸರಕಾರವು ಈಗಾಗಲೇ ಪರಿಷ್ಕೃತ ವರ್ಗಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಪರಿಷ್ಕೃತ ವೇಳಾಪಟ್ಟಿಯಲ್ಲಿರುವ ಮುಖ್ಯ ಹತ್ತು ಅಂಶಗಳು ಈ ಕೆಳಗಿನಂತಿದೆ.

ಪರಿಷ್ಕೃತ ವೇಳಾಪಟ್ಟಿಯಲ್ಲಿರುವ ಮುಖ್ಯಾಂಶಗಳು:-

ಜೂನ್‌ 6, 2023 ರಂದು ಹೆಚ್ಚುವರಿ ಶಿಕ್ಷಕರ ಪರಿಷ್ಕೃತ ಕರಡು ಪ್ರಕಟವಾಗಲಿದೆ. ಇದು ಪ್ರಾಥಮಿಕ ಮತ್ತು ಪ್ರೌಢಶಾಲ ಶಿಕ್ಷಕರ ವೃಂದಕ್ಕೆ ಅನ್ವಯವಾಗುತ್ತದೆ. ಜೂನ್‌ 6ರಿಂದ ಜೂನ್‌ 10ರವರೆಗೆ
ಹೆಚ್ಚುವರಿ ಪಟ್ಟಿಯಲ್ಲಿರುವ ಶಿಕ್ಷಕರು ಆನ್‌ಲೈನ್‌ನಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಇದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವೃಂದಕ್ಕೆ ಮಾತ್ರ. ಪ್ರೌಢಶಾಲಾ ಮುಖ್ಯಶಿಕ್ಷಕ ವೃಂದಕ್ಕೆ ಸಮರ್ಪಕ ಮರುಹಂಚಿಕೆ ಕ್ರಮಗಳು ಅನ್ವಯವಾಗುವುದಿಲ್ಲ.

ಜೂನ್‌ 6 ರಿಂದ ಜೂನ್‌ 13 ರವರೆಗೆ ಹೆಚ್ಚುವರಿ ಶಿಕ್ಷಕರು ಸಲ್ಲಿಸಿರುವ ಆಕ್ಷೇಪಣೆಯಲ್ಲಿನ ದಾಖಲೆಗಳ ಪರಿಶೀಲನೆ, ಅಂಗೀಕಾರ ಹಾಗೂ ತಿರಸ್ಕಾರದ ಪ್ರಕ್ರಿಯೆ ಇರಲಿದೆ. ಇದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವೃಂದಕ್ಕೆ ಮಾತ್ರ. ಪ್ರೌಢಶಾಲಾ ಮುಖ್ಯಶಿಕ್ಷಕ ವೃಂದಕ್ಕೆ ಸಮರ್ಪಕ ಮರುಹಂಚಿಕೆ ಕ್ರಮಗಳು ಅನ್ವಯವಾಗುವುದಿಲ್ಲ. ಜೂನ್‌ 14, 2023 ರಂದು ಅಂತಿಮ ತಾತ್ಕಾಲಿಕ ಆದ್ಯತಾ ಪಟ್ಟಿ ಪ್ರಕಟಣೆ ಆಗಿದೆ. ಇದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವೃಂದಕ್ಕೆ ಅನ್ವಯ. ಪ್ರೌಢಶಾಲಾ ಮುಖ್ಯಶಿಕ್ಷಕ ವೃಂದಕ್ಕೆ ಸಮರ್ಪಕ ಮರುಹಂಚಿಕೆ ಕ್ರಮಗಳು ಅನ್ವಯವಾಗುವುದಿಲ್ಲ.

ಆದೇಶದಿಂದ ಭಾದಿತರಾದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವೃಂದ ಕುಂದುಕೊರತೆ ನಿವಾರಣಾ ಅಧಿಕಾರಿಗಳನ್ನು ಸಂಪರ್ಕಿಸಲು ಜೂನ್‌ 15. ರಂದು ಅವಕಾಶ ಇರಲಿದೆ. ಆದರೆ, ಪ್ರೌಢಶಾಲಾ ಮುಖ್ಯಶಿಕ್ಷಕ ವೃಂದಕ್ಕೆ ಅವಕಾಶವಿಲ್ಲ. ಜೂನ್‌ 16ರಂದು ಸಂಬಂಧಪಟ್ಟ ಕ್ಷೇತ್ರಶಿಕ್ಷಣಾಧಿಕಾರಿಗಳು ಮತ್ತು ಆಯಾ ಕಚೇರಿ ಮುಖ್ಯಸ್ಥರು ಆಲಿಕೆ ವಿಭಾಗೀಯ ಸಹ ನಿರ್ದೇಶಕರು ವ್ಯಾಪ್ತಿಯ ಉಪನಿರ್ದೇಶಕರೊಂದಿಗೆ ಸಮಾಲೋಚಿಸಿ, ಲಿಖಿತ ಸಮಜಾಯಿಷಿಯನ್ನು ಸಂಬಂಧಪಟ್ಟವರಿಗೆ ನೀಡಬೇಕು.

ಜೂನ್‌ 17 ರಂದು ಹೆಚ್ಚುವರಿ ಶಿಕ್ಷಕರ ಮರುಹಂಚಿಕೆ ಕೌನ್ಸಿಲಿಂಗ್‌ಗೆ ಅರ್ಹರಿರುವ ಶಿಕ್ಷಕರ ಅಂತಿಮ ಆದ್ಯತಾ ಪಟ್ಟಿ ಹಾಗೂ
ಕೌನ್ಸಿಲಿಂಗ್‌ಗೆ ಲಭ್ಯವಿರುವ ವೃಂದವಾರು ವಿಷಯವಾರು ಖಾಲಿ ಹುದ್ದೆಗಳ ಪ್ರಕಟಣೆಯಾಗಲಿದೆ. ಜೂನ್‌ 20 ರಂದು ಪೂರ್ವಾಹ್ನ (ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ), ಅಪರಾಹ್ನ (ಪ್ರೌಢಶಾಲಾ ಶಿಕ್ಷಕರ ವೃಂದ) ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಹೊಂದಾಣಿಕೆ ಕೌನ್ಸಿಲಿಂಗ್‌ ನಡೆಯಲಿದೆ.

ಜೂನ್‌ 23 ರ ಪೂರ್ವಾಹ್ನ (ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ), ಅಪರಾಹ್ನ (ಪ್ರೌಢಶಾಲಾ ಶಿಕ್ಷಕರ ವೃಂದ) ತಾಲೂಕಿನಲ್ಲಿ ಖಾಲಿ ಹುದ್ದೆ ಲಭ್ಯವಿಲ್ಲದೆ ಉಳಿಕೆಯಾಗುವ ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ್‌ ಇರಲಿದೆ.ಜೂನ್‌ 22 ರಂದು ಪೂರ್ವಾಹ್ನ(ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ), ಅಪರಾಹ್ನ (ಪ್ರೌಢಶಾಲಾ ಶಿಕ್ಷಕರ ವೃಂದ) ಉಳಿಕೆಯಾಗುವ ಹೆಚ್ಚುವರಿ ಶಿಕ್ಷಕರನ್ನು ಜಿಲ್ಲೆಯೊಳಗೆ ಪಿಟಿಆರ್‌ ಪ್ರಕಾರ ಹೆಚ್ಚು ಮಕ್ಕಳಿರುವ ಶಾಲೆಗಳಲ್ಲಿ ಇಳಿಕೆ ಕ್ರಮಾಂಕದಲ್ಲಿ ಶಿಕ್ಷಕರ ಮರುಹೊಂದಾಣಿಕೆ ಮಾಡಲಾಗುವುದು.

 

ಇದನ್ನು ಓದಿ: EDII Recruitment 2023: ಪದವಿ ಮುಗಿಸಿದ್ದಲ್ಲಿ, ಭಾರತೀಯ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆಯಲ್ಲಿ ಉದ್ಯೋಗ ಅವಕಾಶ!

Leave A Reply

Your email address will not be published.