IRCTC Ooty Package: ಊಟಿ ಪ್ರವಾಸ ಕೈಗೊಳ್ಳಲು ಸುವರ್ಣ ಅವಕಾಶ! ಇಲ್ಲಿದೆ IRCTCಯಿಂದ ಫುಲ್‌ ಪ್ಯಾಕೇಜ್‌ ಡಿಟೇಲ್ಸ್‌!

Full Ooty Tour Package Details from IRCTC

IRCTC Ooty Package: ಊಟಿ ಪ್ರವಾಸ ಕೈಗೊಳ್ಳುವವರಿಗೆ IRCTC ಕಡೆಯಿಂದ ಗುಡ್ ನ್ಯೂಸ್ ಇದೆ. ಅದರಲ್ಲೂ ಕುಟುಂಬ ಸಮೇತ ಕೈಗೆಟುಕುವ ಬೆಲೆಯ ಪ್ಯಾಕೇಜ್ (IRCTC Ooty Package) ಮೂಲಕ ಅದ್ಭುತವಾದ ಊಟಿ ಪ್ರವಾಸ ಮಾಡಬಹುದು.

 

ಈ ಪ್ಯಾಕೇಜ್‌ ಮೂಲಕ ಊಟಿ, ಮುದುಮಲೈ ಮತ್ತು ಕೂನೂರ್‌ನಂತಹ ಸ್ಥಳಗಳಿಗೆ ಕರೆದೊಯ್ಯುತ್ತದೆ. ಈ ಪ್ಯಾಕೇಜ್‌ ಡಿಟೇಲ್ಸ್ ಇಲ್ಲಿದೆ ನೋಡಿ.

ಇದು ನಾಲ್ಕು ರಾತ್ರಿ ಮತ್ತು ಐದು ದಿನಗಳ ಊಟಿ ಪ್ಯಾಕೇಜ್‌ ಆಗಿದೆ.
ಈ ಪ್ಯಾಕೇಜ್‌ನ ಪ್ರಕಾರ, ನಿಮ್ಮ ಪ್ರಯಾಣವು ಚೆನ್ನೈನಿಂದ ಆರಂಭವಾಗುತ್ತದೆ. ರೈಲಿನಲ್ಲಿ ಪ್ರಯಾಣಿಸುವ ಮೂಲಕ ಊಟಿಯ ಪ್ರವಾಸ ಮಾಡಬಹುದು. ಪ್ರತಿ ಗುರುವಾರದಂದು ಈ ಪ್ಯಾಕೇಜ್‌ ಚಾಲ್ತಿಯಲ್ಲಿರುತ್ತದೆ.

ನೀವು ಜೂನ್ 1 ರಂದು ರಾತ್ರಿ 9.05 ಕ್ಕೆ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ ರೈಲು ಸಂಖ್ಯೆ 12671 ನೀಲಗಿರಿ ಎಕ್ಸ್‌ಪ್ರೆಸ್ನಲ್ಲಿ ಪ್ರಯಾಣಿಸಿ ಮರುದಿನ ಬೆಳಿಗ್ಗೆ ಮೆಟ್ಟುಪಾಳ್ಯಂ ತಲುಪುತ್ತೀರಿ.

ಪ್ಯಾಕೇಜ್‌ನ ಪ್ರಕಾರ, ಊಟಿ ಗಿರಿಧಾಮಕ್ಕೆ ತಲುಪಿದ ನಂತರ ನೀವು ಹೋಟೆಲ್‌ನಲ್ಲಿ ಚೆಕ್ ಇನ್ ಮಾಡುತ್ತೀರಿ. ನಂತರ ನಿಮ್ಮ ಪ್ರಕೃತಿ ವೀಕ್ಷಣೆ ಪ್ರಾರಂಭವಾಗುತ್ತದೆ. ಊಟಿಯ ದೊಡ್ಡಬೆಟ್ಟದ ಶಿಖರ ಮತ್ತು ಟೀ ಮ್ಯೂಸಿಯಂ ಅನ್ನು ನೀವು ನೋಡುತ್ತೀರಿ. ನೀವು ಇಡೀ ದಿನ ಸುತ್ತಾಡಿದ ನಂತರ ಊಟಿಯಲ್ಲಿರುವ ಹೋಟೆಲ್‌ಗೆ ಹಿಂತಿರುಗಬಹುದು. ವಿಶ್ರಾಂತಿಯ ನಂತರ ಊಟಿ ಲೇಕ್ ಮತ್ತು ಬೊಟಾನಿಕಲ್ಗೆ ಕರೆದೊಯ್ಯಲಾಗುತ್ತದೆ. ರಾತ್ರಿ ಊಟಿಯ ಹೋಟೆಲ್‌ನಲ್ಲಿಯೇ ತಂಗುತ್ತೀರಿ.

ಮೂರನೇ ದಿನ ಮುಂಜಾನೆ ಚಲನಚಿತ್ರಗಳ ಚಿತ್ರೀಕರಣ ನಡೆಯುವ ಸ್ಥಳಗಳಿಗೆ ಕರೆದೊಯ್ಯಲಾಗುತ್ತದೆ. ನಂತರ ಮುದುಮಲೈ ವೈಲ್ಡ್ ಲೈಫ್ ಸೆಂಚುರಿ, ಎಲಿಫೆಂಟ್ ಕ್ಯಾಂಪ್, ಜಂಗಲ್ ರೈಡ್ ಅನ್ನು ಮುದುಮಲೈನಲ್ಲಿ ಆನಂದಿಸಬಹುದು. ವಿಶ್ರಾಂತಿಯ ಸಮಯದಲ್ಲಿ ನಿಮ್ಮ ಸ್ವಂತ ಖರ್ಚಿನಲ್ಲಿ ಊಟಿಯ ವಿವಿಧ ಸ್ಥಳಗಳನ್ನು ಸುತ್ತಬಹುದು.

ಕೊನೆಯದಾಗಿ ಕೂನೂರಿನ ಪ್ರೇಕ್ಷಣೀಯ ಸ್ಥಳಗಳಿಗೆ ಪ್ಯಾಕೇಜ್‌ನ ಮೂಲಕ ಕರೆದೊಯ್ಯಲಾಗುತ್ತದೆ. ಮೆಟ್ಟುಪಾಳ್ಯಂ ರೈಲು ನಿಲ್ದಾಣದಲ್ಲಿ ರಾತ್ರಿ ಪ್ರಯಾಣಿಸಿ ಚೆನ್ನೈಗೆ ತಲುಪುತ್ತೀರಿ.

ಈ ಊಟಿ ಪ್ಯಾಕೇಜ್‌ ನೀವು ಆಯ್ಕೆ ಮಾಡಿಕೊಳ್ಳುವ ಅಕ್ಯೂಪೆನ್ಸಿಯ ಮೇಲೆ ಅವಲಂಬಿತವಾಗಿದೆ. ಒಂದು ವೇಳೆ ನೀವು ಸಿಂಗಲ್‌ ಅಕ್ಯೂಪೆನ್ಸಿ ಆಯ್ಕೆ ಮಾಡಿಕೊಂಡರೆ ವ್ಯಕ್ತಿಗೆ 20750 ರೂ, ಡಬಲ್‌ ಅಕ್ಯೂಪೆನ್ಸಿಯನ್ನು ಆಯ್ಕೆ ಮಾಡಿಕೊಂಡರೆ ವ್ಯಕ್ತಿಗೆ 10860 ರೂ, ತ್ರಿಬಲ್‌ ಅಕ್ಯೂಪೆನ್ಸಿಯನ್ನು ಆಯ್ಕೆ ಮಾಡಿಕೊಂಡರೆ ವ್ಯಕ್ತಿಗೆ 8300 ರೂ, ನಿಮ್ಮೊಂದಿಗೆ ಮಗು ಇದ್ದರೆ 4550 ರೂ (ಬೆಡ್ ಸಹಿತ), ಬೆಡ್ ಇಲ್ಲದೆ 3700 ರೂ ನಿರ್ಧರಿಸಲಾಗಿದೆ.

ನೀವು ಕಾರಿನಲ್ಲಿ ಪ್ರಯಾಣಿಸಲು ಬಯಸಿದರೆ ದರವು ವಿಭಿನ್ನವಾಗಿರುತ್ತದೆ. ವ್ಯಕ್ತಿಗೆ 8700 ರೂಪಾಯಿಗಳು, ಮೂರು ಜನರಿಗೆ ಬುಕಿಂಗ್ (ವ್ಯಕ್ತಿಗೆ) 7900 ರೂ ಆಗಿರುತ್ತದೆ.

ರಾತ್ರಿ ವಸತಿ, ಬ್ರೇಕ್‌ ಫಾಸ್ಟ್‌ ಮತ್ತು ರಾತ್ರಿಯ ಊಟ, ಪ್ರೇಕ್ಷಣೀಯ ಸ್ಥಳಗಳು, ಎಲ್ಲಾ ಪ್ರವೇಶ ಟಿಕೆಟ್‌ಗಳು, ಪ್ರವಾಸ ವಿಮೆ, ಪ್ಯಾಕೇಜ್‌ ವಿನಾಯಿತಿ ಎಲ್ಲಾ ಸೇರ್ಪಡೆಗೊಂಡಿರುತ್ತದೆ. ಇನ್ನು, ಪ್ರವಾಸಿ ಸ್ಥಳಗಳಿಗೆ ಕ್ಯಾಮೆರಾದ ಶುಲ್ಕವನ್ನು ಸ್ವಂತ ಖರ್ಚಿನಲ್ಲಿ ಪಾವತಿಸಬೇಕು. ಸಾಹಸ ಕ್ರೀಡೆಗಳು ಹಾಗು ಶಾಪಿಂಗ್‌ ಸೇರಿದಂತೆ ವ್ಯಕ್ತಿಗತ ಖರ್ಚುಗಳು ಪ್ರಯಾಣಿಕರದ್ದಾಗಿರುತ್ತೆ.

 

ಇದನ್ನು ಓದಿ: Condom: ಮಾದಕ ವ್ಯಸನಕ್ಕೆ ಕಾಂಡೋಮ್ ಬಳಕೆ! ಸ್ಪೋಟಕ ಮಾಹಿತಿ ಬಹಿರಂಗ- ಅಪಾಯ ತಪ್ಪಿದ್ದಲ್ಲ 

Leave A Reply

Your email address will not be published.