Condom: ಮಾದಕ ವ್ಯಸನಕ್ಕೆ ಕಾಂಡೋಮ್ ಬಳಕೆ! ಸ್ಪೋಟಕ ಮಾಹಿತಿ ಬಹಿರಂಗ- ಅಪಾಯ ತಪ್ಪಿದ್ದಲ್ಲ

Condom use for drug addiction

Condom: ಲೈಂಗಿಕ ಸಂಭೋಗದ ಸಮಯದಲ್ಲಿ ಲೈಂಗಿಕವಾಗಿ ಹರಡುವ ಸೋಂಕನ್ನು ( STI ) ಕಡಿಮೆ ಮಾಡಲು ಮತ್ತು ಮಕ್ಕಳನ್ನು ಪಡೆಯಲು ಇಚ್ಛೆ ಇಲ್ಲದ ದಂಪತಿ ಬಳಸುವ ಪೊರೆ-ಆಕಾರದ ತಡೆಗೋಡೆಯೇ ಕಾಂಡೋಮ್ (Condom ) ಸಾಧನವಾಗಿದೆ.

ಆದರೆ ಪಶ್ಚಿಮ ಬಂಗಾಳದ ದರ್ಗಾಪುರ್​ ಏರಿಯಾದಿಂದ ಆತಂಕಕಾರಿ ವರದಿಯೊಂದು ಈಗಾಗಲೇ ಪ್ರಕಟ ಆಗಿದ್ದು, ಆ ಏರಿಯಾದಲ್ಲಿ ಫ್ಲೇವರ್ಡ್​ ಕಾಂಡೋಮ್​ಗಳು ರಾಕೆಟ್​ ವೇಗದಲ್ಲಿ ಮಾರಾಟವಾಗುತ್ತಿದ್ದು, ಆ ಕಾಂಡೋಮ್​ಗಳನ್ನು ಲೈಂಗಿಕ ಕ್ರಿಯೆಗಾಗಿ ಬಳಸುವ ಬದಲಾಗಿ ಮಾದಕ ವ್ಯಸನಕ್ಕೆ ಬಳಸಲಾಗುತ್ತಿತ್ತು. ಈ ಸುದ್ದಿ ಭಾರೀ ಚರ್ಚೆಯ ಜೊತೆಗೆ ಆತಂಕವನ್ನು ಹುಟ್ಟುಹಾಕಿತ್ತು. ಇದೀಗ ಕಾಂಡೋಮ್​ (Condom) ಕೆಮಿಕಲ್ಸ್​ನಿಂದ ದೇಹಕ್ಕೆ ತುಂಬಾ ಅಪಾಯಕಾರಿ ಎಂಬ ಸಂಗತಿ ಬಯಲಾಗಿದೆ.

ಕಾಂಡೋಮ್​ಗಳ ಮಾರಾಟದ ಬಗ್ಗೆ ಈ ಹಿಂದೆ ಮೆಡಿಕಲ್​ ಸ್ಟೋರ್ ಸಿಬ್ಬಂದಿಯೊಬ್ಬರು ಮಾತನಾಡಿ, ಆ್ಯಪಲ್​, ಸ್ಟ್ರಾಬೆರೀಸ್​ ಮತ್ತು ಚಾಕೊಲೇಟ್​ ಫ್ಲೇವರ್​ ಇರುವ ಕಾಂಡೋಮ್​ಗಳು ಹೆಚ್ಚು ಮಾರಾಟವಾಗುತ್ತಿವೆ. ಅದರಲ್ಲಿಯು ಕೆಮಿಕಲ್​ನಿಂದ ಅಮಲೇರಿಸಿಕೊಳ್ಳಲು ಯುವಕರು ಹೆಚ್ಚಾಗಿ ಇದನ್ನು ಖರೀದಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇನ್ನೂ ದುರ್ಗಾಪುರ ವಿಭಾಗೀಯ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಧೀಮನ್ ಮಂಡಲ್ ಎಂಬುವರು ಮಾತನಾಡಿ, ಕಾಂಡೋಮ್​ನಲ್ಲಿ ಆರೊಮ್ಯಾಟಿಕ್ ಸಂಯುಕ್ತಗಳು ಇರುತ್ತವೆ. ಅದನ್ನು ಮದ್ಯವನ್ನು ತಯಾರಿಸಲು ಬಳಸಲಾಗುತ್ತದೆ. ಇದು ತಂಬಾ ವ್ಯಸನಕಾರಿಯಾಗಿದೆ. ಈ ಆರೊಮ್ಯಾಟಿಕ್ ಸಂಯುಕ್ತವು ಡೆಂಡ್ರೈಟ್ ಅಂಟುಗಳಲ್ಲಿಯೂ ಕಂಡುಬರುತ್ತದೆ. ಅನೇಕ ಜನರು ವ್ಯಸನಕ್ಕಾಗಿ ಡೆಂಡ್ರೈಟ್ ಅನ್ನು ಸಹ ಬಳಸುತ್ತಾರೆ ಎಂದು ತಿಳಿಸಿದ್ದರು.

ರಸಾಯನಶಾಸ್ತ್ರ ಶಿಕ್ಷಕರ ಪ್ರಕಾರ ಫ್ಲೇವರ್ಡ್​ ಕಾಂಡೋಮ್​ ಅನ್ನು ತುಂಬಾ ಸಮಯದವರೆಗೆ ಬಿಸಿ ನೀರಿನಲ್ಲಿ ನೆನೆಸಿದರೆ, ಅದರಲ್ಲಿರುವ ದೊಡ್ಡ ರಾಸಾಯನಿಕ ಅಣುಗಳು ಒಡೆಯುತ್ತವೆ ಮತ್ತು ಆಲ್ಕೋಹಾಲ್ ಯುಕ್ತ​​ ಸಂಯುಕ್ತಗಳನ್ನು ರೂಪಿಸುತ್ತವೆ. ಈ ಕಾರಣದಿಂದಾಗಿ ಕಾಂಡೋಮ್​ ಮಾದಕತೆಯನ್ನು ಉಂಟುಮಾಡುತ್ತವೆ.

ಫ್ಲೇವರ್ಡ್​ ಕಾಂಡೋಮ್​ ಅನ್ನು ಬಿಸಿನೀರಿನಲ್ಲಿ ಕುದಿಸಿದಾಗ ಹೊರಸೂಸುವ ಹೊಗೆ ತುಂಬಾ ಅಪಾಯಕಾರಿಯಾಗಿದ್ದು, ಇದು ಶಾಶ್ವತ ಮೆದುಳಿನ ಹಾನಿ ಉಂಟುಮಾಡುತ್ತದೆ ಮತ್ತು ವರ್ತನೆಯಲ್ಲಿನ ಬದಲಾವಣೆಗೆ ಕಾರಣವಾಗಲಿದೆ. ಅದೇ ರೀತಿ ಭಾವನಾತ್ಮಕ ಪ್ರಕ್ಷುಬ್ಧತೆ ಮತ್ತು ಕಲಿಕೆಯಲ್ಲಿ ಅಸಮರ್ಥತೆಗೆ ಕಾರಣವಾಗುತ್ತದೆ. ಇದಲ್ಲದೆ, ಕಾಂಡೋಮ್​ನಲ್ಲಿರುವ ರಾಸಾಯನಿಕವು ಮೆದುಳಿನ ಮೇಲೆ ಪರಿಣಾಮ ಬೀರುವ ಅನೇಕ ಮಾನಸಿಕ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ತಿಳಿದು ಬಂದಿದೆ.

 

ಇದನ್ನು ಓದಿ: Uttarakhand: ಉತ್ತರಾಖಂಡದ ಪಿಥೋರಗಡ್ನಲ್ಲಿ ಭಾರೀ ಭೂಕುಸಿತ : ಕೊಚ್ಚಿಹೋದ ರಸ್ತೆಯಲ್ಲಿ ಸಿಲುಕಿದ 300 ಜನರು

Leave A Reply

Your email address will not be published.