A Juvenile Love Affair : ತುಮಕೂರಿನ 4 ಮಕ್ಕಳ ನಾಪತ್ತೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್! ಇದು ಅಪ್ರಾಪ್ತ ಮಕ್ಕಳ ಪ್ರೇಮ್ ಕಹಾನಿ!
Four children missing from Tumkur found in hassan city bus stand
Tumakur Four children missing : ಕೆಲವು ದಿನಗಳ ಹಿಂದಷ್ಟೇ ತುಮಕೂರು (Tumkur) ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕಬಾಣಗೆರೆ (Chikkabanagere) ಗ್ರಾಮದಲ್ಲಿ ಒಂದೇ ಗ್ರಾಮದ 4 ಮಕ್ಕಳು ನಾಪತ್ತೆಯಾದ ( Tumakur Four children missing ) ದುರಂತ ಘಟನೆಯೊಂದು ಬೆಳಕಿಗೆ ಬಂದಿದ್ದು ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಆದರೀಗ ಈ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದ್ದು ನಿಜಕ್ಕೂ ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ತುಮಕೂರು ಜಿಲ್ಲೆಯ ಶಿರಾ (Sira) ತಾಲೂಕಿನ ನಾಲ್ವರು ಮಕ್ಕಳು ಪೋಷಕರಿಗೆ ಹೇಳದೆ ಕೇಳದೆ ಮನೆಬಿಟ್ಟು ಬೆಂಗಳೂರಿಗೆ ಆಗಮಿಸಿದ್ದಾರೆ. ಇಲ್ಲಿಂದ ಹಾಸನಕ್ಕೆ (Hassan) ಹೋಗಿದ್ದ ಅಪ್ರಾಪ್ತ ಮಕ್ಕಳು ಬಸ್ ನಿಲ್ದಾಣದಲ್ಲಿ ಪೊಲೀಸರ ಕಣ್ಣಿಗೆ ಬಿದ್ದಿದ್ದಾರೆ. ವಿಚಾರಣೆ ನಡೆಸಿದಾಗ ಶಾಕಿಂಗ್ ವಿಚಾರವೊಂದು ಹೊರಬಿದ್ದಿದ್ದು, ಇದು ಅಪ್ರಾಪ್ತ ವಯಸ್ಸಿನ ಪ್ರೇಮ್ ಕಹಾನಿ ಎಂದು ತಿಳಿದುಬಂದಿದೆ.
ಹೌದು, ಮಂಜುಳಾ(Manjula), ಮಧು ಕುಮಾರ್(Madhu kumar), ಮಹಾಲಕ್ಷ್ಮಿ(Mahalakhmi) ಹಾಗೂ ಭಾನು(Bhanu) ಎಂಬ 15-16 ವರ್ಷದ ಮಕ್ಕಳು ಮೊನ್ನೆ ದಿನ ಆಟವಾಡೋದಕ್ಕಾಗಿ ಮನೆಯಿಂದ ತೆರಳಿದ ಬಳಿಕ ವಾಪಸ್ ಬರಲಿಲ್ಲ ಎಂಬ ಕಾರಣಕ್ಕೆ ಹುಡುಕಾಟ ನಡೆಸಿದ್ರು ಪತ್ತೆಯಾಗಿರಲಿಲ್ಲ. ಬಳಿಕ ಕುಟುಂಬಸ್ಥರಲ್ಲಿ ಆತಂಕ ಶುರುವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರ ತನಿಖೆ ಆರಂಭಿಸಿದ್ದರು. ಸದ್ಯ ಇದೀಗ ಈ ಕೇಸ್ ಪ್ರೇಮ ಪಾಶದಲ್ಲಿ ಸಿಲುಕಿಕೊಂಡಿದೆ.
ಈ ಪ್ರೇಮ ಪ್ರಕರಣದ ಹಿನ್ನಲೆ ಹಾಗೂ ಇತ್ತೀಚಿನ ಎರಡು ದಿನಗಳಲ್ಲಿ ಆದ ಬೆಳವಣಿಗೆಗಳನ್ನು ನೀವೇನಾದರೂ ಕೇಳಿದ್ರೆ ಹೌಹಾರೋದಂತೂ ಗ್ಯಾರಂಟಿ. ಮುಖದ ಮೇಲೆ ಮೀಸೆಯೇ ಬರದ ಮಕ್ಕಳು ಇಷ್ಟೆಲ್ಲಾ ಮಾಡಿದ್ದಾರಾ ಎಂದು ನಿಮಗೇ ಶಾಕ್ ಆಗುತ್ತೆ.
ಅಂದಹಾಗೆ ಬೆಂಗಳೂರಿನಲ್ಲಿ(Bangalore)ಪ್ರಥಮ ವರ್ಷದ ಪಿಯುಸಿ(1st pu) ವ್ಯಾಸಾಂಗ ಮಾಡುತ್ತಿರುವ ಅಪ್ರಾಪ್ತ ಹಾಗೂ ಹೈಸ್ಕೂಲ್ ವ್ಯಾಸಾಂಗ ಮಾಡುತ್ತಿರುವ ಬಾಲಕಿ ನಡುವೆ ಪ್ರೇಮಾಂಕುರವಾಗಿದೆ. ಹುಟ್ಟುಹಬ್ಬ ಆಚರಣೆ ಹಿನ್ನೆಲೆ ತನ್ನ ಪ್ರಿಯತಮೆ ಮತ್ತು ಅವರ ಮೂವರು ಸ್ನೇಹಿತರಿಗೆ ಬೆಂಗಳೂರಿಗೆ ಆಗಮಿಸುವಂತೆ ಪ್ರಿಯತಮ ಆಹ್ವಾನ ನೀಡಿದ್ದಾನೆ. ಅದರಂತೆ ಮೇ 20ರಂದು ಹೇಳದೆ ಕೇಳದೆ ಮನೆಬಿಟ್ಟು ಬೆಂಗಳೂರಿಗೆ ಆಗಮಿಸಿದ್ದಾರೆ. ಶಿರಾದ ಚಿಕ್ಕಬಾಣಾಗೆರೆಯಿಂದ ತನ್ನ ಸ್ನೇಹಿತರೊಂದಿಗೆ ಬೆಂಗಳೂರಿಗೆ ಮೊನ್ನೆ ಬೆಳಗ್ಗೆ ಆಗಮಿಸಿದ ಬಾಲಕಿ ಪ್ರಿಯಕರನೊಂದಿಗೆ ಇರುತ್ತಾಳೆ.
ನಂತರ ಐವರು ಸೇರಿಕೊಂಡು ಮಾಡಿದ್ದ ಧರ್ಮಸ್ಥಳಕ್ಕೆ(Dharmastala) ಹೋಗುವ ಪ್ಲಾನ್ ಮಾಡುತ್ತಾರೆ. ಆದರೆ ಆ ಪ್ಲಾನ್ ಫ್ಲಾಪ್ ಆಗುತ್ತದೆ. ಹೀಗಾಗಿ ರಾತ್ರಿಯೇ ಹಾಸನಕ್ಕೆ ಹೋಗುತ್ತಾರೆ. ಅಲ್ಲಿ ಬಸ್ ನಿಲ್ದಾಣದಲ್ಲಿ ರಾತ್ರಿ ಕಳೆದು ಬೆಳಗ್ಗೆ ಆಶ್ರಯ ಪಡೆಯಲು ಗೌರಿಕೊಪ್ಪಲು(Gowri koppalu) ಬಡಾವಣೆಯಲ್ಲಿ ರೂಮ್ ಹುಡುಕಾಡಲು ಆರಂಭಿಸಿದ್ದಾರೆ. ಅಪ್ರಾಪ್ತ ಮಕ್ಕಳು ರೂಮ್ಗಾಗಿ ಯಾಕೆ ಹುಡುಕಾಡುತ್ತಿದ್ದಾರೆ ಎಂದು ಅನುಮಾನಗೊಂಡ ಸ್ಥಳೀಯರು ವಿಚಾರಿಸಲು ಮುಂದಾಗಿದ್ದಾರೆ. ಅಷ್ಟರಲ್ಲಾಗಲೇ ಮಕ್ಕಳು ಆಟೋ ಹತ್ತಿ ಹೋಗುತ್ತಾರೆ.
ಈ ವಿಚಾರವನ್ನು ಕೂಡಲೇ ಪೊಲೀಸರಿಗೆ ತಿಳಿಸುತ್ತಾರೆ. ಎಚ್ಚೆತ್ತ ಪೊಲೀಸರು ಕಂಟ್ರೋಲ್ ರೂಮ್ಗೆ ಮಾಹಿತಿ ನೀಡಿ ಹುಡುಕಾಟ ಆರಂಭಿಸುತ್ತಾರೆ. ಈ ವೇಳೆ ಹಾಸನ ನಗರದ ಹೊಸ ಬಸ್ ನಿಲ್ದಾಣದಲ್ಲಿ ಮಕ್ಕಳು ಪತ್ತೆಯಾಗಿದ್ದಾರೆ. ಬಳಿಕ ಪೊಲೀಸರು ವಿಚಾರಣೆ ನಡೆಸಿದಾಗ ಮಕ್ಕಳು ಶಿರಾದಿಂದ ತಪ್ಪಿಸಿ ಬಂದಿರುವುದಾಗಿ ಬಾಯಿಬಿಟ್ಟಿದ್ದಾರೆ. ಕೂಡಲೇ ಹಾಸನ ಪೊಲೀಸರು ಪಟ್ನಾಯಕನಹಳ್ಳಿ (Patnayakanahalli) ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಹಾಸನಕ್ಕೆ ಆಗಮಿಸಿದ ಪೊಲೀಸರು ಮಕ್ಕಳನ್ನು ವಶಕ್ಕೆ ಪಡೆದು ಶಿರಾಕ್ಕೆ ಕರೆದುಕೊಂಡು ಹೋಗಿದ್ದಾರೆ. ಪ್ರೀತಿಸುತ್ತಿರುವ ಮಕ್ಕಳು ಅಪ್ರಾಪ್ತರಾಗಿರುವುದರಿಂದ ಪೋಕ್ಸೋ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.