Ashwath narayan: ಕೇಂದ್ರದ 5 ಕೆ.ಜಿ ಜೊತೆಗೆ ರಾಜ್ಯದ 10 ಕೆಜಿ ಅಕ್ಕಿ ಕೊಡಬೇಕು; ಹಾಗಿದ್ರೆ ಒಟ್ಟು 15 ಕೆಜಿ ಅಕ್ಕಿ ಕೊಡ್ತೀರಾ? ಅಶ್ವಥ್ ನಾರಾಯಣ್

A total of 15 kg of rice should be given in addition to the central 5 kg Ashwath Narayan

Ashwath Narayan: ಈಗಾಗಲೇ ಕೇಂದ್ರ ಸರ್ಕಾರದಿಂದ(Central Government) 5 ಕೆ.ಜಿ ಅಕ್ಕಿ (Rice) ಕೊಡಲಾಗುತ್ತಿದೆ. ಇದರ ಜೊತೆ 10 ಕೆ.ಜಿ ಸೇರಿಸಿ ಒಟ್ಟು 15 ಕೆ.ಜಿ ಅಕ್ಕಿ ಕೊಡಬೇಕು. ಇದನ್ನು ಕಾಂಗ್ರೆಸ್‍ನವರು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ (Ashwath Narayan) ಹೇಳಿದ್ದಾರೆ.

ಹೌದು, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಅನ್ನಭಾಗ್ಯ ಯೋಜನೆ(Free rice Scheme) ಅಡಿ 10 ಕೆಜಿ ಅಕ್ಕಿ ಕೊಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ 5 ಕೆಜಿ ಅಕ್ಕಿ ಕೊಡುತ್ತಿದ್ದು, ಬಸವರಾಜ ಬೊಮ್ಮಾಯಿ(Basavaraj bommai) ಒಂದು ಕೆಜಿ ಅಕ್ಕಿ ಸೇರಿಸಿ ಆರು ಕೆಜಿ ನೀಡುತ್ತಿದ್ದರು. ಈ 6 ಕೆಜಿ ಅಕ್ಕಿ ಜೊತೆಗೆ ಕಾಂಗ್ರೆಸ್ ಸರ್ಕಾರ 10 ಕೆಜಿ ಸೇರಿಸಿ 16 ಕೆಜಿ ಅಕ್ಕಿ ಕೊಡುತ್ತದೆಯೇ? ಅಥವಾ ಮೋದಿ ಸರ್ಕಾರ ನೀಡುತ್ತಿರುವ 5 ಕೆಜಿಗೆ 5 ಕೆಜಿ ಸೇರಿಸಿ 10 ಕೆಜಿ ಅಕ್ಕಿ ಕೊಡುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರದ 5 ಕೆಜಿಗೆ 5 ಕೆಜಿ ಅಕ್ಕಿ ಸೇರಿಸಿದರೆ ಅವರದು ಕೇವಲ 5 ಕೆಜಿ ಆಗಲಿದೆ. 10 ಕೆಜಿ ಆಗುವುದಿಲ್ಲ. ಕಾಂಗ್ರೆಸ್ ನವರು ಕೊಟ್ಟ ಮಾತಿನಂತೆ ನಡೆಯುವುದಾದರೆ 15 ಕೆಜಿ ಅಕ್ಕಿ ಕೊಡಬೇಕು. ಈ ಕುರಿತು ಬಿಜೆಪಿ ಸ್ಪಷ್ಟನೆ ಕೇಳುತ್ತದೆ. ರಾಜ್ಯದ ಜನರ ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ಹೇಳಿದ್ದಾರೆ.

ಅಲ್ಲದೆ ಗ್ಯಾರೆಂಟಿ (Congress Gurantee) ಗಳನ್ನ ಜಾರಿ ಮಾಡದೇ ಮುಂದಿನ ಕ್ಯಾಬಿನೆಟ್ ಅಂತಿದ್ದಾರೆ. ಈಗ ತಾತ್ವಿಕ ಒಪ್ಪಿಗೆ ಅಂತಿದ್ದೀರಾ?. ಹಾಗಿದ್ದರೆ ರಾಹುಲ್ ಗಾಂಧಿ ಕೈಯಲ್ಲಿ ಯಾಕೆ ಮೊದಲ ಕ್ಯಾಬಿನೆಟ್ ಜಾರಿ ಮಾಡ್ತೀವಿ ಅಂತ ಹೇಳಿಸಿದ್ರಿ. ಒಂದು ತಿಂಗಳು ಸಮಯ ತಗೊಂಡು ಕೊಡಬಹುದಿತ್ತು ಅಲ್ಲವಾ ಎಂದು ಕಾಂಗ್ರೆಸ್ ವಿರುದ್ದ ಅಶ್ವಥ್ ನಾರಾಯಣ್ ಕಿಡಿಕಾರಿದ್ದಾರೆ.

ಬಳಿಕ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ(Congress Government) ಅಧಿಕಾರಕ್ಕೆ ಬಂದಿದೆ. ಬಂದ ಕೂಡಲೇ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ. ಹಿಂದೆ ಕರೆಂಟ್ ಇಲ್ಲ ಅಂತ ಯುವಕ ಹೇಳಿದ್ದ. ಆಗ ಡಿಕೆಶಿ ಅವನನ್ನ ಒಳಗೆ ಹಾಕಿಸಿದ್ರು. ಈಗ ಹೊಸದುರ್ಗದ ಶಿಕ್ಷಕ ಫೇಸ್‍ಬುಕ್ ನಲ್ಲಿ ಹಾಕಿದ್ದಾರೆ. ಈಗ ಇವರ ವಿರುದ್ಧ ಮಾತಾಡಿದ ಅಂತ ಶಾಂತಪ್ಪ ಎಂಬ ಶಿಕ್ಷಕನನ್ನ ಸಸ್ಪೆಂಡ್ ಮಾಡಿಸಿದ್ದಾರೆ. ಈ ಹಿಂದೆ ಇಂದಿರಾ ಗಾಂಧಿ ಕಾಲದಲ್ಲೂ ಇದೇ ಇತ್ತು. ಈಗ ಮತ್ತೆ ಆದೇ ರೀತಿ ಆಗ್ತಿದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:Uttar pradesh: ಚುನಾವಣೆಯಲ್ಲಿ ಸೋತ ಸೊಸೆ; ಥಳಿಸಿ, ಮನೆಯಿಂದ ಹೊರ ಹಾಕಿದ ಪಾಪಿಗಳು!

Leave A Reply

Your email address will not be published.