Pavan Wadeyar: ಬೊಮ್ಮಾಯಿ ಮಾಮ, ತೆಲುಗಿಗೆ ಕೊಡೋ ಟೈಮ್ ಕನ್ನಡಕ್ಕೆ ಕೊಡಲ್ಲ; ಮಾಮ ತೋರಿದ ದುರಹಂಕಾರ ಇನ್ನೂ ನನ್ನ ಕಣ್ಣಿನಲ್ಲಿದೆ ! ಮಾಜಿ ಸಿಎಂ ವಿರುದ್ಧ ಪವನ್ ಒಡೆಯರ್ ಕಿಡಿ

Director Pavan Wadeyar shocking comments on Karnataka CM Basavaraj Bommai

Pavan Wadeyar: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ(karnataka Assembly election) ಕರ್ನಾಟಕದ ಜನತೆ ಆಡಳಿತ ರೂಡ ಬಿಜೆಪಿ(BJP)ಯನ್ನು ಹೀನಾಯವಾಗಿ ಸೋಲಿಸಿ, ಕಾಂಗ್ರೆಸ್(Congress) ಕೈಗೆ ಅಧಿಕಾರದ ಗದ್ದುಗೆಯನ್ನು ನೀಡಿದ್ದಾರೆ. ಈ ಬೆನ್ನಲ್ಲೇ ಬೊಮ್ಮಾಯಿ(Bommai) ಅವರು ತಮ್ಮ ಸಿಎಂ ಸ್ಥಾನಕ್ಕೆ ರಾಜಿನಾಮೆಯನ್ನೂ ನೀಡಿಯಾಗಿದೆ. ಈ ಸಂದರ್ಭದಲ್ಲಿ ಕನ್ನಡ ಸಿನಿಮಾ ನಿರ್ದೇಶಕ(Kannada Films Director) ಪವನ್ ಒಡೆಯರ್(Pavan wadeyar) ಸಿಎಂ ಬಸವರಾಜ ಬೊಮ್ಮಾಯಿ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಹೌದು, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ(Bommai) ರಾಜಿನಾಮೆ ಕೊಡುತ್ತಿದ್ದಂತೆ ಅವರ ಕುರಿತು ವ್ಯಂಗ್ಯವಾಡಿದ ನಿರ್ದೇಶಕ ಪವನ್ ಒಡೆಯರ್ “ಮಾಮ ತೋರಿದ ದುರಹಂಕಾರ ನನ್ನ ಕಣ್ಣಿನಲ್ಲಿದೆ.. ಕನ್ನಡಿಗರು ಮುಟ್ಟಾಳರಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

ಅಲ್ಲದೆ “ಕರ್ನಾಟಕದ ಪ್ರಾಚೀನ ಜಾನಪದ ಕಲೆ ಡೊಳ್ಳುಕುಣಿತದ ಕುರಿತು ನಿರ್ಮಿಸಿದ್ದ ‘ಡೊಳ್ಳು’ ಚಿತ್ರಕ್ಕೆ ರಾಷ್ಟೀಯ ಪ್ರಶಸ್ತಿ ಬಂದಾಗ,ಬೊಮ್ಮಾಯಿ ಮಾಮಗೆ ಚಿತ್ರ ವೀಕ್ಷಿಸಲು ಕೊರಿದ್ದೆವು.ಮಾಮ ತೋರಿದ ದುರಹಂಕಾರ ನನ್ನ ಕಣ್ಣಿನಲ್ಲಿ ಇನ್ನೂ ಹಾಗೆ ಇದೆ. ತೆಲುಗು ಚಿತ್ರದ ಕಾರ್ಯಕ್ರಮಕ್ಕೆ ಮಾಮ 3 ತಾಸು ಕುಳಿತು ಕೊಳ್ಳುವಷ್ಟು ಸಮಯ ಇದೆ.ಕನ್ನಡಿಗರು ಮುಟ್ಟಾಳರಲ್ಲ” ಎಂದಿದ್ದಾರೆ.

ಇದಷ್ಟೇ ಅಲ್ಲದೆ ಮಾಜಿ ಸಿಎಂ ಸಿದ್ದರಾಮಯ್ಯನವರ ಕುರಿತು ಹೊಗಳಿದ ಪವನ್ ಅವರು “ಸಿದ್ದರಾಮಯ್ಯ ಸರ್‌ಗೆ ಒಂದೇ ಒಂದು ಬಾರಿ ಕರೆ ಮಾಡಿದ್ದೆವು. “ಹೌದಾ, ಡೊಳ್ಳು ಕುಣಿತ ನಂಗೆ ಭಾರಿ ಇಷ್ಟ ರೀ” ಎಂದು ಕರೆಕೊಟ್ಟ ಸಂಜೆಯೇ ಬಂದು ಚಿತ್ರ ವೀಕ್ಷಿಸಿ, ಹಾರೈಸಿ, ಹಲವಾರುಕಡೆ ಹೆಮ್ಮೆ ಇಂದ ಮಾತನಾಡಿದ್ದರು. ಕನ್ನಡ ಭಾಷೆ, ಕರ್ನಾಟಕ ಸಂಸ್ಕೃತಿ, ಜಾನಪದ ಕಲೆ. ಇವೆಲ್ಲವನ್ನೂ ಜನ ಮಾರಿಕೊಳ್ಳಲ್ಲ.” ಎಂದು ಟ್ವೀಟ್ ಮಾಡಿದ್ದಾರೆ.

ಅಂದಹಾಗೆ ಬಿಜೆಪಿ(BJP) ಹೀನಾಯವಾಗಿ ಸೋತು, ಬೊಮ್ಮಾಯಿ ಅವರು ರಾಜಿನಾಮೆ ಕೊಡುತ್ತಿದ್ದಂತೆ ಪವರ್ ಒಡೆಯರ್ ಅವರು ಈ ರೀತಿಯಾಗಿ ಟ್ವೀಟ್ ಮಾಡಿದ್ದು ಎಲ್ಲರಿಗೂ ಅಚ್ಚರಿ ಉಂಟುಮಾಡಿದೆ. ಅದೂ ಕೂಡ ಕಿಚ್ಚ ಸುದೀಪ್(Kiccha Sudeep) ಬಸವರಾಜ್ ಬೊಮ್ಮಾಯಿ ಅವರನ್ನು ಮಾಮ ಎಂದು ಸಂಭೋದಿಸುತ್ತಿದ್ದುದನ್ನೇ ಪವನ್ ಅವರು ವ್ಯಂಗಿಸಲು ಅಸ್ತ್ರವಾಗಿ ಬಳಿಸಿದ್ದು ವಿಚಿತ್ರ ಅನಿಸಿದೆ.

ಇದನ್ನೂ ಓದಿ:Next Chief minister in Karnataka: ಕರ್ನಾಟಕ ಹೊಸ ಸಿಎಂ ಆಯ್ಕೆಗೆ, ಮಹಾರಾಷ್ಟ್ರ ಮಾಜಿ ಸಿಎಂ ನೇಮಕ! ಒಟ್ಟು ಮೂವರು ವೀಕ್ಷಕರನ್ನು ನೇಮಿಸಿದ ಹೈಕಮಾಂಡ್

Leave A Reply

Your email address will not be published.