Delhi metro: ದೆಹಲಿ ಮೆಟ್ರೋದಲ್ಲಿ ಮತ್ತೊಂದು ಪ್ರಣಯ ಪ್ರಸಂಗ; ಮಲಗಿಕೊಂಡು ಲಿಪ್‌ ಲಾಕ್‌ ಮಾಡಿದ ಪ್ರೇಮಿಗಳು – ವೀಡಿಯೋ ವೈರಲ್‌

video of couple kissing in Delhi Metro coach went viral

Delhi metro: ದೆಹಲಿ ಮೆಟ್ರೋ(Delhi metro) ಗೂ ಹಾಗೂ ಕಾಂಟ್ರವಸ್ರಿ ಮಾಡಿಕೊಳ್ಳೋರಿಗೂ ಅದೇನು ಸಂಬಂಧವೋ ಗೊತ್ತಿಲ್ಲ. ಎಲ್ಲವೂ ಅಲ್ಲಿಯೇ ನಡೆಯುತ್ತದೆ. ಇತ್ತೀಚೆಗೆ ಹುಡುಗಿ ಒಬ್ಬಳು ಬಿಕನಿ(Bikni) ಹಾಕಿ ರೈಲು ಹತ್ತಿದ್ಲು, ಒಂದು ಜೋಡಿ ಓರಲ್ ಲೈಂಗಿಕ(Oral sex) ಕ್ರಿಯೆ ನಡೆಸಿತ್ತು ಮತ್ತೆ ಕೆಲವು ದಿನಗಳ ಹಿಂದೆ ಸ್ಕರ್ಟ್(Skirt) ಹಾಕಿದ ಹುಡುಗರು ಎಲ್ಲೆಡೆ ಸುದ್ಧಿಯಾಗಿದ್ರು. ಆದರೀಗ ಮತ್ತೆ ಇಂತಹುದೇ ಘಟನೆಯೊಂದು ದೆಹಲಿ ಮೆಟ್ರೋ ಮದಲ್ಲಿ ನಡೆದಿದ್ದು, ನೆಟ್ಟಿಗರನ್ನು ಕೆರಳಿಸಿ ಕಣ್ಣು ಕೆಂಪಾಗಿಸಿದೆ.

 

ಹೌದು, ದೆಹಲಿ ಮೆಟ್ರೋದಲ್ಲಿ ಯುವಕ ಹಾಗೂ ಯುವತಿ ಪ್ರಣಯ ಪ್ರಸಂಗದಲ್ಲಿ ತೊಡಗಿದ್ದು ಇದೀಗ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಮೆಟ್ರೋ ಕೋಚ್‌ನ (Metro Coach) ನೆಲದ ಮೇಲೆ ಕುಳಿತು ಪ್ರೇಮಿಗಳಿಬ್ಬರು (Lovers) ಲಿಪ್‌ ಲಾಕ್‌(Lip lock) ಮಾಡುತ್ತಿದ್ದ ದೃಶ್ಯ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ವೀಡಿಯೋದಲ್ಲಿ ಯುವತಿ ವ್ಯಕ್ತಿಯೊಬ್ಬನ ಮಡಿಲಲ್ಲಿ ಕುಳಿತು ಪರಸ್ಪರ ತುಟಿಗೆ ಚುಂಬಿಸುತ್ತಿರುವುದು ಕಂಡುಬಂದಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ

ಮೂಲಗಳ ಪ್ರಕಾರ, ಕೆಲ ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜೊತೆಗೆ ಯುವತಿ ಹಾಗೂ ವೀಡಿಯೋದಲ್ಲಿನ ಯುವಕ ಗಂಡ-ಹೆಂಡತಿ ಎಂದು ಹೇಳಲಾಗುತ್ತಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ್ದು ನೆಟ್ಟಿಗರು ದೆಹಲಿ ಮೆಟ್ರೋದ ಹೆಸರನ್ನು ಬದಲಾಯಿಸುವಂತೆ ಆಗ್ರಹಿಸಿದ್ದಾರೆ. ಇನ್ನು ಕೆಲವರು ಜನರು ಇದನ್ನೂ ನೋಡಿ ಯಾಕೆ ಸುಮ್ಮನಿದ್ದಾರೆ. ಇದು ನಿಜವಾದ ಪ್ರೀತಿಯೇ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲು ಮಾಡಲಾದ ವಿಡಿಯೋನಾ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಡಿಎಂಆರ್‌ಸಿ(DMRC), ದೆಹಲಿ ಮೆಟ್ರೋ ಬಳಸುವಾಗ ಪ್ರಯಾಣಿಕರು ಜವಾಬ್ದಾರಿಯುತವಾಗಿ ವರ್ತಿಸಬೇಕು. ಇಂತಹ ಅಶ್ಲೀಲ ಚಟುವಟಿಕೆಗಳಿಂದ ಅದು ಪ್ರಯಾಣಿಕರನ್ನ ಕೆರಳಿಸಹುದು. ಡಿಎಂಆರ್‌ಸಿ ಕಾರ್ಯಾಚರಣೆ ಮತ್ತು ನಿರ್ವಹಣೆ ಕಾಯ್ದೆಯ ಸೆಕ್ಷನ್‌ 59ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

 

ಇದನ್ನು ಓದಿ: Bengaluru: ಸರ್ಕಾರ ರಜೆ ಘೋಷಿಸಿದರೂ ಬೆಂಗಳೂರು ಜನ ಮತದಾನ ಮಾಡಿಲ್ಲ: ಶೋಭಾ ಕರಂದ್ಲಾಜೆ 

 

Leave A Reply

Your email address will not be published.