Vijayapur: ಬೆಳ್ಳಂಬೆಳಗ್ಗೆ ಗುಂಡು ಹಾರಿಸಿ ರೌಡಿಶೀಟರ್‌ ಮರ್ಡರ್‌; ಕುಟುಂಬಸ್ಥರ ಆಕ್ರಂದನ

Rowdyshitters murder in Vijayapur crime news

Rowdyshitters murder : ಚುನಾವಣೆಯ ಭರಾಟೆಯ ಮಧ್ಯೆ ಗುಮ್ಮಟ ನಗರಿ ವಿಜಯಪುರ(Vijayapur) ದಲ್ಲಿ ರೌಡಿಶೀಟರ್‌ ಒಬ್ಬನ ಮೇಲೆ ಗುಂಡು (Rowdyshitters murder) ಹಾರಿಸಿ ಬರ್ಬರವಾಗಿ ಕೊಲೆ ಮಾಡಿದ ಘಟನೆಯೊಂದು ನಡೆದಿದೆ. ನಗರದ ಚಂದಾಪುರ ಕಾಲೋನಿಯಲ್ಲಿ ನಿನ್ನ (ಮೇ.6) ರಂದು ಬೆಳಗ್ಗೆ 10.30ರ ಸುಮಾರಿಗೆ ಈ ಘನಘೋರ ಘಟನೆ ನಡೆದಿದೆ.

 

ಹೈದರ್‌ಆಲಿ ನದಾಫ್‌ ಎಂಬಾತನೇ ಗುಂಡಿನ ದಾಳಿಗೆ ಒಳಗಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದ ವ್ಯಕ್ತಿ. ಈತ ನಗರದ ಚಂದಾಪುರ ಕಾಲೋನಿ ನಿವಾಸಿ.

ಎಂದಿನಂತೆ ಬೆಳಗ್ಗೆ ತನ್ನ ಮನೆಯಲ್ಲಿ ತಿಂಡಿ ತಿಂದ ಹೈದರ್‌ಆಲಿ ಮನೆಯಿಂದ ಹೊರಗೆ ಬಂದು ಕಾರು ಹತ್ತುವ ಸಮಯದಲ್ಲಿ ಬೈಕ್‌ ಮತ್ತು ಕಾರಿನಲ್ಲಿ ದಿಢೀರನೆ ಬಂದ ವ್ಯಕ್ತಿಗಳು ಕಂಟ್ರಿ ಪಿಸ್ತೂಲ್‌ನಿಂದ ನಾಲ್ಕು ಸುತ್ತು ಗುಂಡು ಹೊಡೆದು, ಪರಾರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಈ ದಾಳಿಯಿಂದ ತಪ್ಪಿಸಿಕೊಳ್ಳಲು ಹೈದರ್‌ಆಲಿ ಪ್ರಯತ್ನ ಮಾಡಿದರೂ ಆತನನ್ನು ಬೆನ್ನಟ್ಟಿ ಗುಂಡು ಹಾರಿಸಲಾಗಿದೆ. ಆತ ನೋವಿನಿಂದ ಚೀರುತ್ತಾ ನೆಲಕ್ಕುರುಳಿ ಬಿದ್ದಾಗ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ರೌಡಿಶೀಟರ್‌ ಹೈದರ್‌ಆಲಿ ನದಾಫ್‌ ತನ್ನ ಪತ್ನಿ ನಿಶಾತ್‌ ನದಾಫ್‌ಳನ್ನು ಇತ್ತೀಚೆಗಷ್ಟೇ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 19ನೇ ವಾರ್ಡ್‌ನಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದ. ಈ ಚುನಾವಣೆಯಲ್ಲಿ ಆತನ ಪತ್ನಿ ಗೆದ್ದಿದ್ದಳು. ಹಾಗಾಗಿ ಪಾಲಿಕೆಯ ಚುನಾವಣೆಯ ವೈಷಮ್ಯವೇ ಈ ಕೊಲೆಗೆ ಕಾರಣವಿರಬಹುದೇ ಎಂಬ ಮಾತುಗಳು ಕೇಳಿ ಬರುತ್ತಿದೆ. ಕೊಲೆಯಾದ ವ್ಯಕ್ತಿಯ ಕುಟುಂಬಸ್ಥರು ಪೊಲೀಸರಲ್ಲಿ ಆರೋಪಿಗಳನ್ನು ಈ ಕೂಡಲೇ ಬಂಧಿಸಬೇಕು, ಅವರಿಗೆ ಕಠಿಣ ಶಿಕ್ಷೆ ನೀಡಬೇಕು, ಇಲ್ಲದಿದ್ದರೆ ನಾವು ಮನೆ ಮಂದಿ ಎಸ್ಪಿ ಕಚೇರಿ ಬಳಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾರೆ.

ಕೊಲೆಯಾದ ವ್ಯಕ್ತಿಯ ಮೇಲೆ ಈಗಾಗಲೇ ಕೊಲೆ, ಬೆದರಿಕೆ ಸೇರಿದಂತೆ ಹಲವು ಕೇಸುಗಳು ಇವೆ ಎನ್ನಲಾಗಿದೆ. ಹಣದ ವ್ಯವಹಾರ, ಆಸ್ತಿ ಒತ್ತುವರಿ ಸೇರಿದಂತೆ ಇತರೆ ವ್ಯವಹಾರಗಳನ್ನು ಹೈದರ್‌ಆಲಿ ಮಾಡುತ್ತಿದ್ದ. ಘಟನೆ ನಡೆದ ಸ್ಥಳಕ್ಕೆ ಜಲನಗರ ಠಾಣೆ ಪೊಲೀಸರು ಬಂದಿದ್ದು, ಆರೋಪಿಗಳ ಬಂಧನಕ್ಕೆ ತಂಡ ರಚನೆ ಮಾಡಿದ್ದಾರೆ. ಈ ಕೊಲೆಗೂ ಚುನಾವಣೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ವಿಜಯಪುರ ಎಸ್‌ಪಿ ಹೆಚ್‌ಡಿ ಆನಂದಕುಮಾರ ಹೇಳಿದ್ದಾರೆ. ಚುನಾವಣೆಯ ಸಮಯದಲ್ಲಿ ಈ ಭೀಕರ ಕೊಲೆ ನಡೆದಿದ್ದು ಎಲ್ಲರನ್ನೂ ನಿಜಕ್ಕೂ ತಲ್ಲಣ ಗೊಳಿಸದೆ. ಕೊಲೆಯಾದ ಹೈದರಾಲಿ ಶವದ ಮರಣೋತ್ತರ ಪರೀಕ್ಷೆ ನಡೆಸಿ, ಶವವನ್ನು ಕುಟುಂಬದವರಿಗೆ ನೀಡಿದ್ದಾರೆ.

ಇದನ್ನೂ ಓದಿ: The Kerala Story ಸಿನಿಮಾ ವೀಕ್ಷಿಸಿದ ಕಲ್ಲಡ್ಕ ಪ್ರಭಾಕರ್ ಭಟ್! ಏನಂದ್ರು ಗೊತ್ತೇ?

Leave A Reply

Your email address will not be published.