Rajasthan: ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಈ ದಿನಗೂಲಿ ನೌಕರ! ಅಂದಾಜಲ್ಲಿ ಹಾಕಿದ ಟೀಮಿಗೆ ಸಿಕ್ತು 2ಕೋಟಿ!
Rajasthan: ಅದೃಷ್ಟ ಎಂಬುದು ಯಾರಿಗೆ ಹೇಗೆ ಒಲಿಯುತ್ತದೆ ಎಂದು ಹೇಳಲಾಗದು. ಕೆಲವರು ರಾತ್ರಿ ಬೆಳಗಾಗೋದ್ರೊಳಗೆ ಶ್ರೀಮಂತರಾಗಿ ಮೆರೆದಿದ್ದನ್ನು, ಶ್ರೀಮಂತರಿದ್ದವರು ಎಲ್ಲಾ ಕಳಕೊಂಡು ಏನೂ ಇಲ್ಲದಾಗಿ ಬಡವರಾದದ್ದನ್ನು ನಾವು ನೋಡಿದ್ದೇವೆ, ಆ ಬಗ್ಗೆ ಕೇಳಿದ್ದೇವೆ. ಅಂತೆಯೇ ಇದಕ್ಕೆ ಉದಾಹರಣೆ ಎಂಬಂತೆ ಇಲ್ಲೊಂದೆಡೆ ದಿನಗೂಲಿ ನೌಕರನೊಬ್ಬ ಆನ್ಲೈನ್ ಗೇಮ್ನಲ್ಲಿ 2 ಕೋಟಿ ಗೆದ್ದು ರಾತ್ರೋ ರಾತ್ರಿ ಕೋಟ್ಯಾಧಿಪತಿಯಾಗದ್ದಾನೆ (Rajasthan).
ಕೆಲವೊಮ್ಮೆ ಈ ಲಾಟರಿ ಟಿಕೆಟ್ ಅಲ್ಲಿ ದಿನಬೆಳಗಾಗೋದ್ರೊಳಗೆ ಕೋಟಿ ಕೋಟಿ ಲಾಟರಿ ಹೊಡೆದು ಕೆಲವರು ಕೋಟ್ಯಾದಿಪತಿಗಳಾದವರನ್ನು ನಾವು ನೋಡಿದ್ದೆವು. ಆದರಿಲ್ಲಿ ರಾಜಸ್ಥಾನದ ಭರತ್ಪುರ ಜಿಲ್ಲೆಯ ರೂಪವಾಸ್ ತೆಹಸಿಲ್ನ ಮಾದಾಪುರ ಗ್ರಾಮದ ದಿನಗೂಲಿ ನೌಕರ ಆನ್ಲೈನ್ ಗೇಮ್ನಲ್ಲಿ 2 ಕೋಟಿ ಗೆದ್ದು ರಾತ್ರೋ ರಾತ್ರಿ ಕೋಟ್ಯಾಧಿಪತಿಯಾಗದ್ದಾನೆ.
ಹೌದು, ಮಾದಾಪುರ(Madapura) ಗ್ರಾಮದ ನಿವಾಸಿ ಖೇಮ್ ಸಿಂಗ್ ಡ್ರೀಮ್ 11 ಫ್ಯಾಂಟಸಿ ಗೇಮ್ನಲ್ಲಿ 2 ಕೋಟಿ ಗೆಲ್ಲುವ ಮೂಲಕ ರಾತ್ರೋರಾತ್ರಿ ಮಿಲಿಯನೇರ್ ಆಗಿದ್ದಾರೆ. ಆದರೆ ವಿಚಿತ್ರವೆಂದರೆ ಖೇಮ್ ಸಿಂಗ್ ತನಗೆ ಕ್ರಿಕೆಟ್ ಮತ್ತು ಈ ಆಟದ ಬಗ್ಗೆ ಏನೇನು ತಿಳಿದಿಲ್ಲ, ಬೇರೆಯವರನ್ನು ಆಡುವುದನ್ನ ನೋಡಿ ಕುತೂಹಲಕ್ಕಾಗಿ ಈ ಆಟವನ್ನು ಆಡಲು ಶುರು ಮಾಡಿದೆ ಎಂದು ತಿಳಿಸಿದ್ದಾರೆ.
ಅಂದಹಾಗೆ ಕೋಟ್ಯಾಧೀಶನಾಗಿರುವ ಖೇಮ್ ಸಿಂಗ್(Khem Sing) ಕುಟುಂಬದ ಆರ್ಥಿಕ ಸ್ಥಿತಿ ಶೋಚನೀಯವಾಗಿತ್ತು. ಹೊಟ್ಟೆ ಪಾಡಿಗಾಗಿ ಹರಿಯಾಣದ ಗುರ್ಗಾಂವ್ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಹೀಗಿರುವಾಗ ಈ ಮಧ್ಯೆ, ತಮ್ಮ ಊರಿನ ಹಲವರು ಡ್ರೀಮ್ 11 ಆಡುವುದನ್ನು ಅವರು ನೋಡುತ್ತಿದ್ದರು. ಇತರರು ದುಡ್ಡು ಕಟ್ಟಿ ಗೆಲಲೋದನ್ನು ಕಂಡ ಅವರು ಉತ್ಸುಕರಾಗಿ ಈ ಆಟವನ್ನು ಆಡಲು ಆರಂಭಿಸಿದರು.
ಈ ಕುರಿತು ಮಾತನಾಡಿದ ಖೇಮ್ ಸಿಂಗ್ “ಚೆನ್ನೈ ವರ್ಸಸ್ ಹೈದರಾಬಾದ್ ಪಂದ್ಯದ ವೇಳೆ 49 ರೂಪಾಯಿ ಹೂಡಿಕೆ ಮಾಡಿ 2 ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದೇನೆ. ಇದು ನನ್ನ ಎರಡನೇ ಪ್ರಯತ್ನ. ಮೊದಲ ಸಲ ಸೋತಾಗ ನನ್ನ ಮನಸ್ಸಿಗೆ ನಿರಾಸೆಯಾಯಿತು. ನಾಲ್ಕೈದು ದಿನಗಳ ನಂತರ ಎರಡನೇ ಪ್ರಯತ್ನದಲ್ಲಿ ಚೆನ್ನೈ-ಹೈದರಾಬಾದ್ ನಡುವಿನ ಪಂದ್ಯದ ವೇಳೆ 49 ರೂಪಾಯಿ ಹಾಕಿ ಟೀಮ್ ಮಾಡಿದ್ದೆ. ಅದರಲ್ಲಿ ಎರಡು ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದೇನೆಂದು” ಸಂತೋಷ ವ್ಯಕ್ತಪಡಿಸಿದರು. ಅಲ್ಲದೆ ಸಧ್ಯಕ್ಕೆ ಬ್ಯಾಂಕ್ ಖಾತೆಗೆ 69 ಲಕ್ಷ ಬಂದಿದ್ದು, ಉಳಿದ ಮೊತ್ತವನ್ನು ವಿತ್ ಡ್ರಾ ಮಾಡಿದ್ದು, ಅದು ಪ್ರಕ್ರಿಯೆಯಲ್ಲಿದೆ ಎಂದು ತಿಳಿಸಿದರು.
ಇನ್ನು ಖೇಮ್ ಸಿಂಗ್ ಅವರ ಈ ಗೆಲುವುನ್ನು ಅವರ ಇಡಿ ಗ್ರಾಮವೇ ಸಂಭ್ರಮಿಸಿದೆ. ಇದೇ ವೇಳೆ ವಿಜೇತ ಯುವಕನಿಗೆ ಗ್ರಾಮಸ್ಥರು ಮಾಲೆ, ಪೇಟ ತೊಡಿಸಿ ಸನ್ಮಾನ ಮಾಡಿದ್ದಾರೆ.
ಇದನ್ನೂ ಓದಿ:ಹಲಸಿನ ಹಣ್ಣಿನ ಮಾರಾಟದಿಂದ ಇಷ್ಟೆಲ್ಲಾ ಲಾಭ ಇದ್ಯಾ? ವಾವ್, ಸೂಪರ್ ಅಲ್ವಾ!