Chandra Grahan 2023: ಈ ವರ್ಷದ ಚಂದ್ರಗ್ರಹಣ ಯಾವಾಗ ನಡೆಯುತ್ತೆ? ಸಂಪೂರ್ಣ ಮಾಹಿತಿ , ಹಲವು ವೈಶಿಷ್ಟ್ಯಗಳ ವಿವರ ಇಲ್ಲಿದೆ!
Chandra Grahan 2023: ಎಲ್ಲರಿಗೂ ಗೊತ್ತಿರುವ ಹಾಗೆ ಪ್ರತಿ ವರ್ಷ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣ ಸಂಭವಿಸುತ್ತದೆ. ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಹಾದುಹೋದ ಸಂದರ್ಭ ಚಂದ್ರ ಗ್ರಹಣ ಸಂಭವಿಸುತ್ತವೆ. ಇದರಿಂದಾಗಿ ಚಂದ್ರನು ಭೂಮಿಯ ನೆರಳಿನಲ್ಲಿ ಚಲಿಸುತ್ತಾನೆ. ಹೀಗಾಗಿ, ಕೆಲವು ಗ್ರಹಣಗಳು ಕೆಲ ಅಡ್ಡಪರಿಣಾಮಗಳನ್ನು ಬೀರುತ್ತವೆ.
ಈ ವರ್ಷದ ಮೊದಲ ಚಂದ್ರ ಗ್ರಹಣ (Chandra Grahan 2023)ಮುಂಬರುವ ಮೇ 5 ರಂದು ಸಂಭವಿಸಲಿದೆ. 2023ರ ಮೊದಲ ಚಂದ್ರಗ್ರಹಣವು ಶುಕ್ರವಾರ, ಮೇ 5, 2023 ರಂದು ರಾತ್ರಿ 8:45 ಕ್ಕೆ ಅರಂಭವಾಗಿ ಮಧ್ಯಾಹ್ನ 1:00 ಗಂಟೆಗೆ ಕೊನೆಯಾಗುತ್ತದೆ. ಸುಮಾರು 4 ಗಂಟೆ 15 ನಿಮಿಷ 34 ಸೆಕೆಂಡುಗಳು ಪೆನಂಬ್ರಾ ಗ್ರಹಣ ಇರಲಿದೆ.
ಇದು ಪೆನಂಬ್ರಲ್ ಚಂದ್ರ ಗ್ರಹಣವಾಗಿದ್ದು, ಈ ಗ್ರಹಣದಲ್ಲಿ ಭೂಮಿಯ (Earth) ನೆರಳು ಚಂದ್ರನ ಹೊರ ಭಾಗದಲ್ಲಿ ಬೀಳಲಿದೆ. ಈ ಸಮಯದಲ್ಲಿ ಚಂದ್ರನ ಬೆಳಕು ಮಬ್ಬಾಗಿರಲಿದ್ದು,ಈ ಗ್ರಹಣವನ್ನು ಬರಿಗಣ್ಣಿನಲ್ಲಿ ನೋಡಲು ಸಾಧ್ಯವಿಲ್ಲವೆಂದು ವಿಜ್ಞಾನಿಗಳು (Scientist) ಮಾಹಿತಿ ನೀಡಿದ್ದಾರೆ. ಪೆನಂಬ್ರಾಲ್ ಚಂದ್ರ ಗ್ರಹಣವು ಭಾರತದ ಕೆಲವು ಜನಪ್ರಿಯ ನಗರಗಳಾದ ನವದೆಹಲಿ, ಮುಂಬೈ, ಕೋಲ್ಕತ್ತಾ, ಬೆಂಗಳೂರು, ಅಹಮದಾಬಾದ್, ಚೆನ್ನೈ, ಹೈದರಾಬಾದ್ ಮತ್ತು ಪುಣೆಯಲ್ಲಿ ಗೋಚರವಾಗಲಿದೆ.
ಚಂದ್ರ ಗ್ರಹಣ 2023 ಎಲ್ಲೆಲ್ಲಿ ಕಾಣುತ್ತದೆ?
ದೃಕ್ ಪಂಚಾಂಗ್ ಅನುಸಾರ, ಚಂದ್ರ ಗ್ರಹಣವು ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ, ಯುರೋಪ್, ಹಿಂದೂ ಮಹಾಸಾಗರ, ಪೆಸಿಫಿಕ್ ಮಹಾಸಾಗರ, ಅಟ್ಲಾಂಟಿಕ್ ಮಹಾಸಾಗರ ಮತ್ತು ಅಂಟಾರ್ಟಿಕಾದಿಂದ ಕಾಣಿಸುತ್ತದೆ. ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕದ ಬಹುತೇಕ ಭಾಗಗಳಿಂದ ಯಾವುದೇ ಗ್ರಹಣ ಗೋಚರವಾಗದು.ಪೆನಂಬ್ರಾಲ್ ಗ್ರಹಣವು ಭಾರತ, ಪಾಕಿಸ್ತಾನ, ನೇಪಾಳ, ಮಾರಿಷಸ್ ಮತ್ತು ಸಿಂಗಾಪುರದಲ್ಲಿ ಗೋಚರಿಸುತ್ತದೆ.
2023 ರ ಎರಡನೇ ಚಂದ್ರಗ್ರಹಣವು ಅಕ್ಟೋಬರ್ 28 ರಂದು ಸಂಭವಿಸಲಿದೆ. ಇದು ಭಾಗಶಃ ಚಂದ್ರ ಗ್ರಹಣವಾಗಿದ್ದು, ಪ್ರಸ್ತುತ ಸಮಯ ಮತ್ತು ದಿನಾಂಕದ ಅನುಸಾರ, ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಉತ್ತರ ಅಮೇರಿಕಾ, ಉತ್ತರ/ಪೂರ್ವ ದಕ್ಷಿಣ ಅಮೇರಿಕಾ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ, ಆರ್ಕ್ಟಿಕ್ ಮತ್ತು ಅಂಟಾರ್ಟಿಕಾದಲ್ಲಿ ಭಾಗಶಃ ಚಂದ್ರಗ್ರಹಣದ ಕೆಲವು ಭಾಗಗಳಲ್ಲಿ ಗ್ರಹಣ ಕಾಣಿಸಲಿದೆ.
ಇದನ್ನು ಓದಿ: ATM – Anytime Liquor Machine: ಮದ್ಯ ಖರೀದಿಗೂ ಬಂತು ಎಟಿಎಂ – ಎನಿಟೈಮ್ ಲಿಕ್ಕರ್ ಮೆಷಿನ್ ..!