CM Bommai: ಪ್ರಧಾನಿ ಮೋದಿ ಸಮಾಜದ ವಿಷ ಕುಡಿಯುವ ನೀಲಕಂಠ- ಬೊಮ್ಮಾಯಿ! ಅಷ್ಟಕ್ಕೂ ಸಿಎಂ ಹೀಗಂದಿದ್ದೇಕೆ?

CM Bommai: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಚುನಾವಣಾ ರಂಗು ರಂಗೇರಿದೆ. ಹೀಗಾಗಿ ಮೂರೂ ಪಾರ್ಟಿಗಳು ಅಬ್ಬರದ ಪ್ರಚಾರ ನಡೆಸಿವೆ. ಈ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಪಾಳಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರದ ಅಬ್ಬರವಿತ್ತು. ಒಂದೇ ದಿನ ಮೂರು ಕಡೆಗಳಲ್ಲಿ ಸಾರ್ವಜನಿಕ ಸಭೆ ಹಾಗೂ ರಾಜಧಾನಿಯಲ್ಲಿ ಮೋದಿ ರೋಡ್ ಶೋ ನಡೆಸಿದ್ದಾರೆ.

ಹೌದು, ಇಂದು ಬೆಳಗ್ಗೆ 8:20ಕ್ಕೆ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೀದರ್ ಗೆ ಮೋದಿ ಪ್ರಯಾಣ ಬೆಳೆಸಿದ್ದು 10:20ಕ್ಕೆ ಬೀದರ್ ಏರಬೇಸ್​ಗೆ ಪ್ರಧಾನಿ ಮೋದಿ ಆಗಮಿಸಿದ್ದರು. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಹುಮ್ನಾಬಾದ್ ಸಮಾವೇಶಕ್ಕೆ ತೆರಳಿದರು.

ಈ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ (CM Bommai) ಬೊಮ್ಮಾಯಿ, ‘ವಿಶ್ವಮಾನವ, ವಿಶ್ವ ಬಂಧು ಬಸವಣ್ಣನ ನಾಡಿನಲ್ಲಿ ಆಧುನಿಕ ವಿಶ್ವನಾಯಕ ಮೋದಿಯವರಿಗೆ ಸ್ವಾಗತಿಸುತ್ತಿದ್ದೇನೆ. ವಿಶ್ವದ ಮೊದಲ ಪ್ರಜಾಪ್ರಭುತ್ವದ ಮೊದ ಸಂಕೇತ ಇದ್ದರೆ ಅದು ಅನುಭವ ಮಂಟಪ. ಇದನ್ನು ಗುರುತಿಸಿದವರು ಪ್ರಧಾನಿ ಮೋದಿಯವರು. ಪ್ರಜಾಪ್ರಭುತ್ವ ಎಂದರೆ ಸಮಾನತೆ, ಎಲ್ಲರನ್ನೂ ಸರಿಸಮಾನವಾಗಿ ನೋಡುವಂತಹದ್ದು. ಇದನ್ನು ಕಾಂಗ್ರೆಸ್ ಮಾಡುತ್ತಿಲ್ಲ ಎಂದರು.

ಅಲ್ಲದೆ ನಾವು ದೀನ ದಲಿತರಿಗೆ ವಿಶೇಷ ಕಾರ್ಯಕ್ರಮಗಳ ಮೂಲಕ ನಾವು ಸಮಾನತೆಯ ಅನುಭವ ನೀಡಿದ್ದೇವೆ. ಕಲ್ಯಾಣ ಕರ್ನಾಟಕದ ಜನರ ಅಭಿವೃದ್ಧಿಗೆ, ಬೀದರ್​ಗೆ, ಕಲಬುರ್ಗಿಗೆ ಹೊಸ ಟೆಕ್ಸ್​ಟೈಲ್​ ಪಾರ್ಕ್​ಅನ್ನು ಪ್ರಧಾನಿ ಮೋದಿಯ ನೇತೃತ್ವದಲ್ಲಿ ನಡೆದಿದ್ದು ಒಂದು ಲಕ್ಷ ಜನರಿಗೆ ಉದ್ಯೋಗ ಸಿಕ್ಕಿದೆ. ಈ ನಡುವೆಯೂ ಕಾಂಗ್ರೆಸ್, ಲಿಂಗಾಯತ ನಾಯಕರು ಭ್ರಷ್ಟ ನಾಯಕರು ಎನ್ನುತ್ತಾರೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಖರ್ಗೆಯವರು ಪ್ರಧಾನಿ ವಿರುದ್ಧ ನೀಡಿದ್ದ ‘ವಿಷ’ ಹೇಳಿಕೆಯ ಕುರಿತು ಮಾತನಾಡಿದ ಅವರು ‘ಸಮಾಜದ ವಿಷವನ್ನು ಕುಡಿದು ಸಮಾಜ ಸೇವೆ ಮಾಡಿದವರಿದ್ದರೆ ಅದು ಪ್ರಧಾನಿ ಮೋದಿ. ಹೀಗಾಗಿ ಪ್ರಧಾನಿ ಮೋದಿ ಸಮಾಜದ ವಿಷ ಕುಡಿಯುವ ನೀಲಕಂಠ ಎಂದು ಹೇಳಿ ಕಾಂಗ್ರೆಸ್​ಗೆ ತಿರುಗೇಟನ್ನು ನೀಡಿದ್ದಾರೆ.

ಇನ್ನು ಮೋದಿ ವಿಷ ಸರ್ಪ ಎಂದು ಟೀಕಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಧಾನಿ ಮೋದಿ ಅವರೂ ತಿರುಗೇಟು ನೀಡಿದ್ದಾರೆ. “ಕಾಂಗ್ರೆಸ್ ಪ್ರತಿಯೊಬ್ಬರನ್ನೂ ದ್ಷೇಷದಿಂದ ನೋಡುತ್ತದೆ. ಕಾಂಗ್ರೆಸ್ ನಾಯಕರು ಮತ್ತೆ ನನಗೆ ಬೈಯಲು ಶುರು ಮಾಡಿದ್ದಾರೆ. 91 ಸಲ ಬೇರೆ ಬೇರೆ ಬೈಗುಳ‌ ಬೈದಿದ್ದಾರೆ. ಇದನ್ನು ಬಿಟ್ಟು ಕಾರ್ಯಕರ್ತರ ಉತ್ಸಾಹ ಹೆಚ್ಚಿಸುವ ಕೆಲಸ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ದೇಶಕ್ಕಾಗಿ ಕೆಲಸ ಮಾಡುವವರನ್ನು ಅಪಮಾನ ಮಾಡುವುದು ಕಾಂಗ್ರೆಸ್ ಇತಿಹಾಸ ಎಂದು ಟೀಕಿಸಿದ್ದಾರೆ.

 

ಇದನ್ನು ಓದಿ: Prabhu deva: ಮೊದಲ ಬಾರಿ 2ನೇ​ ಪತ್ನಿಯೊಡನೆ ಕಾಣಿಸಿಕೊಂಡ ಇಂಡಿಯನ್ ಮೈಕಲ್ ಜಾಕ್ಸನ್! ಇವರೇ ನೋಡಿ ಪ್ರಭುದೇವರ ಎರಡನೇ ಪತ್ನಿ!

Leave A Reply

Your email address will not be published.