Wrestlers Protest: ಪ್ರತಿಭಟನೆ ಮಾಡಿದರೆ ದೇಶಕ್ಕೆ ಕಳಂಕ ಎಂದ ಪಿಟಿ ಉಷಾ!!!

Wrestlers Protest: ಭಾರತೀಯ ಕುಸ್ತಿ ಫೆಡರೇಷನ್ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ (WFI chief Brij Bhushan Sharan Singh) ಲೈಂಗಿಕ ಕಿರುಕುಳ (Sexual Harassment) ನೀಡಿದ್ದಾರೆ ಎಂದು ಆರೋಪಿಸಿ ನ್ಯಾಯಕ್ಕಾಗಿ ದೆಹಲಿಯ ಜಂತರ್ ಮಂತರ್ನ ನಡೆಸುತ್ತಿರುವ ಪ್ರತಿಭಟನೆಗೆ ದೇಶಾದ್ಯಂತ ಬೆಂಬಲ ವ್ಯಕ್ತವಾಗುತ್ತಿದೆ. ಇದರ ನಡುವೆ ಪಿಟಿ ಉಷಾ ಮಹಿಳಾ ಕ್ರೀಡಾಪಟುಗಳ ನಡೆಯನ್ನು ಟೀಕಿಸಿದ್ದಾರೆ. ಪಿ.ಟಿ ಉಷಾ ಅವರು ಒಬ್ಬ ಮಹಿಳಾ ಕ್ರೀಡಾಪಟುವಾಗಿದ್ದುಕೊಂಡು ನ್ಯಾಯಕ್ಕಾಗಿ ಹೋರಾಡುತ್ತಿರುವ ಮಹಿಳಾ ಕ್ರೀಡಾಪಟುಗಳ ಮೇಲಿನ ದೌರ್ಜನ್ಯವನ್ನು ಪ್ರಶ್ನಿಸಿ ಬೆಂಬಲ ನೀಡುವ ಬದಲಿಗೆ ಇನ್ನುಳಿದ ಮಹಿಳಾ ಕ್ರೀಡಾಪಟುಗಳನ್ನು ಹಳಿಯುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಮಹಿಳಾ ಕ್ರೀಡಾಪಟುಗಳು ಆಕ್ರೋಶ ಹೊರಹಾಕಿದ್ದಾರೆ.

Wrestlers Protest
Image source: Indian express

 

ಭಾರತೀಯ ಕುಸ್ತಿ ಫೆಡರೇಷನ್ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ (WFI chief Brij Bhushan Sharan Singh) ಲೈಂಗಿಕ ಕಿರುಕುಳ (Sexual Harassment) ನೀಡಿದ್ದಾರೆ ಎಂಬ ಆರೋಪ ಮಾಡಿ ನ್ಯಾಯಕ್ಕಾಗಿ ಭಜರಂಗ್ ಪೂನಿಯಾ (Bajrang Punia), ಸಾಕ್ಷಿ ಮಲಿಕ್ (Sakshi Malik), ವಿನೇಶ್ ಪೋಗಾಟ್ (Vinesh Phogat) ಒಳಗೊಂಡಂತೆ ಪ್ರಮುಖರು ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯ, ಭಾರತೀಯ ಒಲಿಂಪಿಕ್‌ ಸಂಸ್ಥೆಯ ಮುಖ್ಯಸ್ಥೆ ಪಿಟಿ ಉಷಾ (Indian Olympic Association (IOA) President PT Usha) ಈ ಪ್ರತಿಭಟನೆಯನ್ನು ಟೀಕಿಸಿದ್ದಾರೆ. ಹೀಗಾಗಿ, ಪಿಟಿ ಉಷಾ ಅವರ ವಿರುದ್ಧ ಕುಸ್ತಿಪಟುಗಳು(Wrestlers Protest) ಅಸಮಾಧಾನ ಹೊರ ಹಾಕಿದ್ದಾರೆ.

ಉಷಾ ಅವರು ಬ್ರಿಜ್ ಭೂಷಣ್ ಪರ ಮಾತಾಡುತ್ತಿದ್ದು, ಈ ರೀತಿ ಪ್ರತಿಭಟನೆ ಮಾಡುವ ಆತುರದ ನಿರ್ಣಯ ತೆಗೆದುಕೊಳ್ಳುವ ಬದಲು ಲೈಂಗಿಕ ಕಿರುಕುಳದ ದೂರುಗಳಿಗಾಗಿ ಈ ಆರೋಪಗಳನ್ನು ಭಾರತೀಯ ಒಲಿಂಪಿಕ್ ಸಂಸ್ಥೆಯ ಸಮಿತಿ ಮತ್ತು ಕ್ರೀಡಾಪಟುಗಳ ಆಯೋಗಕ್ಕೆ ನೀಡಬೇಕಿತ್ತು. ಆದರೆ ಕುಸ್ತಿಪಟುಗಳು ಪ್ರತಿಭಟನೆ ನಡೆಸುವ ಅವಶ್ಯಕತೆ ಇರಲಿಲ್ಲ. ಇದರ ಬದಲಿಗೆ ನಮ್ಮ ಬಳಿಗೆ ಬರಬೇಕಿತ್ತು. ಅವರು ಐಒಎಗೆ ಬಂದಿಲ್ಲ. ಎಲ್ಲಾ ರಾಜಕೀಯ ಪಕ್ಷಗಳನ್ನು ತಮ್ಮ ಪ್ರತಿಭಟನೆಗೆ ಬೆಂಬಲ ನೀಡಲು ಸೂಚಿಸುತ್ತಿದ್ದಾರೆ. ಇದು ಅಶಿಸ್ತಿನ ನಡೆಯಾಗಿದ್ದು, ಇದರಿಂದ ದೇಶದ ಘನತೆಗೆ ಧಕ್ಕೆಯಾಗುತ್ತಿದೆ. ಕುಸ್ತಿ ಫೆಡರೇಷನ್ ಹಣ ದುರುಪಯೋಗ ಮಾಡಿಕೊಳ್ಳುವ ದೆಸೆಯಲ್ಲಿ ಕ್ರೀಡಾಳುಗಳು ಹೀಗೆ ಮಾಡುತ್ತಿದ್ದಾರೆ ಎಂದು ಪಿ. ಟಿ. ಉಷಾ ಆರೋಪಿಸಿದ್ದಾರೆ.

ಪಿ ಟಿ ಉಷಾ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಹೆಣ್ಣುಮಕ್ಕಳ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ನಡೆಯನ್ನು ಎಲ್ಲ ಕ್ರೀಡಾಪಟುಗಳು ಖಂಡಿಸುತ್ತಿದ್ದಾರೆ. ನಮ್ಮ ನಡೆಯನ್ನು ಅಶಿಸ್ತು ಎಂದು ಪರಿಗಣಿಸುತ್ತಿರುವುದಲ್ಲದೇ ದೇಶಕ್ಕೆ ಕಳಂಕ ಎಂದು ಹೇಳಿದ್ದನ್ನು ಕೇಳಿ ಸಾಕ್ಷಿ ಮಲಿಕ್ ಬೇಸರ ವ್ಯಕ್ತ ಪಡಿಸಿದ್ದಾರೆ. ನಾವು ಅತ್ಯಂತ ಶಾಂತಿಯುತವಾಗಿ ಪ್ರತಿಭಟನೆ ನಡಸುತ್ತಿದ್ದೇವೆ ಹೇಳಿಕೊಂಡಿರುವ ಸಾಕ್ಷಿ ಮಲಿಕ್ ಪಿ ಟಿ ಉಷಾ ಅವರ ಮಾತಿನಿಂದ ಜೊತೆಗೆ ಪಿಟಿ ಉಷಾ ಅವರು ಮಹಿಳಾ ಅಥ್ಲೀಟ್ ಆಗಿ ಹೆಣ್ಣಿನ ಸಮಸ್ಯೆ ಕೇಳುತ್ತಿಲ್ಲವಲ್ಲ ಎಂದು ಸಾಕ್ಷಿ ಮಲಿಕ್ ಅವರು ನೊಂದು ಕಣ್ಣೀರು ಹಾಕಿದ್ದಾರೆ. ಈ ನಡುವೆ ಕ್ರೀಡಾ ಸಚಿವ ಅನುರಾಗ್ ಠಾಕೂರ್ (Anurag Singh Thakur) ಅವರು ಈ ಕುರಿತು ಪಾರದರ್ಶಕವಾಗಿ ತನಿಖೆ ಆಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

 

ಇದನ್ನು ಓದಿ: House Rent: ಬೆಂಗಳೂರಿನಲ್ಲಿ ಮನೆ ಬಾಡಿಗೆಗೆ ಬೇಕೆಂದರೆ ಪಿಯುಸಿಯಲ್ಲಿ ಶೇ.90 ಅಂಕ ಕಡ್ಡಾಯ, ಮಾಲೀಕನ ಸ್ಥಿತಿ ವೈರಲ್! 

Leave A Reply

Your email address will not be published.