Kenya : ಅಬ್ಬಾಬ್ಬಾ! ಪಾದ್ರಿಯ ಜಮೀನಿನಲ್ಲಿ ಪತ್ತೆಯಾದ್ವು 47 ಶವಗಳು! ಮೈ ನಡುಗಿಸುತ್ತೆ ಈ ಸಾವಿನ ಹಿಂದಿರೋ ಆ ಕಾರಣ!

Kenya: ಪ್ರತಿಯೊಂದು ಧರ್ಮೀಯರಿಗೂ ತಮ್ಮ ತಮ್ಮ ಧರ್ಮಗಳಲ್ಲಿ ಧರ್ಮ ಗುರುಗಳೆಂಬುವರು ಇರುತ್ತಾರೆ. ಉತ್ತಮವಾದ ಬೋಧನೆ, ಉಪದೇಶಗಳನ್ನು ಮಾಡಿ, ಅನ್ಯ ಮಾರ್ಗಗಳಲ್ಲಿ ನಡೆಯದಂತೆ ತಡೆದು ಬದುಕು ರೂಪಿಸೋ ದಾರಿ ಹಿಡಯುವಂತೆ ಮಾಡುವುದು ಅವರ ಕರ್ತವ್ಯ ಹಾಗೂ ಜವಾಬ್ದಾರಿ ಅನ್ನಬಹುದು. ಆದರೆ ಈ ಗುರುಗಳ ಉಪದೇಶವೇ ತನ್ನ ಜನರ ಪ್ರಾಣ ತೆಗೆದು ಬದುಕನ್ನು ನಾಶ ಮಾಡಿಬಿಟ್ಟರೆ ಏನು ಹಾಡೋದು? ಆದರೆ ಇಂತಹ ಒಂದು ವಿಚಿತ್ರ ಘಟನೆಯೊಂದು ಆಫ್ರಿಕಾದ(Africa) ಕೀನ್ಯ(Kenya) ದಲ್ಲಿ ನಡೆದಿದೆ.

ಹೌದು, ಆಫ್ರಿಕಾದ ಕೀನ್ಯಾ(Kenya)ದಲ್ಲಿ ಕ್ರೈಸ್ತ ಪಾದ್ರಿಯೊಬ್ಬರ ಜಮೀನಿನಲ್ಲಿ ಇದುವರೆಗೆ 47 ಕ್ಕೂ ಅಧಿಕ ಮಂದಿಯ ಶವಗಳು ಪತ್ತೆಯಾಗಿದೆ! ಇದಕ್ಕೆ ಕಾರಣ ಪಾದ್ರಿಯ ಉಪದೇಶ. ಹೌದು, ಒಂದೊಮ್ಮೆ ನೀವು ಸ್ವರ್ಗಕ್ಕೆ ಹೋಗಬಯಸುತ್ತೀರಿ ಎಂದರೆ ಉಪವಾಸವಿರಿ ಬಳಿಕ ಜೀವಂತ ಸಮಾಧಿಯಾಗಿ ಎಂದು ಪಾದ್ರಿ ಮಾತನ್ನು ನಂಬಿ, ಸ್ವರ್ಗಕ್ಕೆ ಹೋಗುವ ಆಸೆಯಲ್ಲಿ 47ಕ್ಕೂ ಅಧಿಕ ಮಂದಿ ಜೀವಂತ ಸಮಾಧಿಯಾಗಿದ್ದಾರೆ ಎನ್ನುವ ಆಘಾತಕಾರಿ ಸಂಗತಿ ಬಯಲಿಗೆ ಬಂದಿದೆ.

ಸದ್ಯ ಇದೀಗ ಕೀನ್ಯಾ ಪೊಲೀಸರು ಒಂದೇ ಕುಟುಂಬದ 5 ಜನರನ್ನು ಸಮಾಧಿಯಿಂದ ತೆಗೆದಿದ್ದಾರೆ. ಆ ಮೃತದೇಹಗಳಲ್ಲಿ ಮಕ್ಕಳೂ ಇದ್ದಾರೆ. ಅಲ್ಲದೆ ಪೊಲೀಸರು ಇದುವರೆಗೆ 65 ಸಮಾಧಿಗಳನ್ನು ಪತ್ತೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರೊಂದಿಗೆ ಯಾರಾದರೂ ಬದುಕಿರಬಹುದೆಂಬ ನಿರೀಕ್ಷೆಯಲ್ಲಿ ಪೊಲೀಸರು ಸಮಾಧಿಯನ್ನು ಅಗೆಯುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಮೃತದೇಹವನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿದೆ.

ಅಂದಹಾಗೆ ಈ ಪಾದ್ರಿ ಉಪವಾಸವಿರುವಾಗಲೇ ನೀವು ಸಮಾಧಿಯಾದರೆ ಸ್ವರ್ಗಕ್ಕೆ ಹೋಗುತ್ತೀರಿ, ಯೇಸುವನ್ನು ಭೇಟಿಯಾಗುತ್ತೀರಿ ಎಂದು ಹೇಳಿದ್ದ ಕಾರಣ ಎಲ್ಲರೂ ಪ್ರಾಣ ಕಳೆದುಕೊಂಡಿದ್ದಾರೆ. ಬಹಿರಂಗವಾದ ನಂತರ, ಪೊಲೀಸರು ಪಾಲ್ ಮೆಕೆಂಜಿ ಎಂಬ ಪಾದ್ರಿಯನ್ನು ಬಂಧಿಸಿದ್ದಾರೆ. ಆತ್ಮಹತ್ಯೆಗೆ ಪ್ರೇರೇಪಿಸಲಿಲ್ಲ ಎಂದು ಅವರು ಹೇಳಿದ್ದಾರೆ. 2019ರಲ್ಲೇ ಚರ್ಚ್​ ಅನ್ನು ಮುಚ್ಚಲಾಗಿದೆ ಎಂದಿದ್ದಾರೆ. ಪೊಲೀಸರು ಈಗ ಎಲ್ಲಾ ದೇಹಗಳಿಂದ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: Akanda Shinivasa murthy: ಕೊನೆಗೂ ಆ ಪಕ್ಷದಿಂದ ಅಕಾಡಕ್ಕಿಳಿದ ಅಖಂಡ ಶ್ರೀನಿವಾಸ ಮೂರ್ತಿ! ಪುಲಿಕೇಶಿ ನಗರದ ಜನತೆಗೆ ಶಾಕ್!

Leave A Reply

Your email address will not be published.