Bhatkal: ಭಟ್ಕಳದಲ್ಲಿ ಹಿಂದೂ ಯುವಕರಿಂದ ಮುಸ್ಲಿಂ ಯುವತಿಗೆ ಲೈಂಗಿಕ ದೌರ್ಜನ್ಯ; ಆರೋಪಿಗಳು ಅರೆಸ್ಟ್‌

Bhatkal: ಉತ್ತರಕನ್ನಡ ಜಿಲ್ಲೆಯ ಭಟ್ಕಳ (Bhatkal) ದಲ್ಲಿ ಹಿಂದೂ ಯುವಕರಿಂದ ಮುಸ್ಲಿಂ ಯುವತಿಗೆ ಲೈಂಗಿಕ ದೌರ್ಜನ್ಯ ನಡೆದಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಭಟ್ಕಳ ನಗರದ ರಂಜಾನ್‌ ಮಾರ್ಕೆಟ್‌ ನಿಂದ ಯುವತಿಗೆ ಆಟೋ ಹತ್ತಿದ್ದಾಳೆ. ಈ ವೇಳೆ ಆಟೋ ನಿಲ್ದಾಣದಲ್ಲಿ ಇದ್ದ ಕೆಲ ಯುವಕರು ಯುವತಿಗೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ. ಕೂಡಲೇ ಸ್ಥಳೀಯರು ಗಮನಿಸಿ ಬುದ್ದಿವಾದ ಹೇಳಿದ್ದಾರೆ. ಈ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಶುರುವಾಗಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಲೈಂಗಿಕ ದೌರ್ಜನ್ಯ ನಡೆಸಿದ ಯುವಕರನ್ನ ಬಂಧಿಸಿ ಪೊಲೀಸ್ ವಾಹನದಲ್ಲಿ ಠಾಣೆಗೆ ಕರೆದೊಯ್ದಿದ್ದಾರೆ.
ಹೀಗೆ ಹೋಗುವ ವೇಳೆ ಮುಸ್ಲಿಂ ಯುವಕರು ಆಕ್ರೋಶದಿಂದ ಕಲ್ಲು ತೂರಾಟ ಮಾಡಿದ್ದಾರೆ. ಈ ಕುರಿತು ಭಟ್ಕಳ ಶಹರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಈ ಘಟನೆ ಸಂಬಂಧ ಇಬ್ಬರು ಹಿಂದೂ ಯುವಕರು ಸೇರಿ ಏಳು ಜನರನ್ನ ಪೊಲೀಸರು ಬಂಧಿಸಿದ್ದಾರೆ. ಹದ್ಲೂರು ನಿವಾಸಿ ಚಂದ್ರು ಗೊಂಡ, ಸರ್ಪನಕಟ್ಟೆಯ ರವೀಂದ್ರ ನಾಯ್ಕ್​ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಜೊತೆಗೆ ಪೊಲೀಸ್​ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಸುಲ್ತಾನ್​ ಸ್ಟ್ರೀಟ್​ನ ಮೊಹ್ಮದ್​ ಮೀರಾ,ಮೊಹ್ಮದ್​ ಇಮ್ರಾನ್​ ಶೇಖ್​ ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.

 

ಇದನ್ನೂ ಓದಿ: ಬಿಜೆಪಿಗೆ ರಾಜೀನಾಮೆ ನೀಡಿದ ಈಶ್ವರಪ್ಪಗೆ ಪ್ರಧಾನಿ ಕರೆ : ಸದಾ ಪಕ್ಷ ನಿಮ್ಮ ಜೊತೆಯಿದೆ ಮೋದಿ ಭರವಸೆ

Leave A Reply

Your email address will not be published.