Home Interesting Duplicate Bag Gift: ಪ್ರೇಯಸಿಗೆ ಪ್ರಿಯಕರನಿಂದ ನಕಲಿ ಬ್ಯಾಗ್ ಗಿಫ್ಟ್; ಅಷ್ಟಕ್ಕೂ ಹೀಗೇಕೆ ಮಾಡಿದ ಈ...

Duplicate Bag Gift: ಪ್ರೇಯಸಿಗೆ ಪ್ರಿಯಕರನಿಂದ ನಕಲಿ ಬ್ಯಾಗ್ ಗಿಫ್ಟ್; ಅಷ್ಟಕ್ಕೂ ಹೀಗೇಕೆ ಮಾಡಿದ ಈ ಲವ್ವರ್ ಬಾಯ್?!

Duplicate Bag Gift

Hindu neighbor gifts plot of land

Hindu neighbour gifts land to Muslim journalist

Duplicate Bag Gift: ಪ್ರೀತಿ ಮಾಡೋರು ತಮ್ಮ ಪ್ರೇಯಸಿಗೋ, ಪ್ರಿಯತಮನಿಗೋ ಗಿಫ್ಟ್‌ ಕೊಡೋದು ಮಾಮೂಲು. ಹಾಗೆನೇ ಇಲ್ಲೊಬ್ಬ ತನ್ನ ಪ್ರೇಯಸಿಯನ್ನು ಮೆಚ್ಚಿಸೋಕೆ ಬ್ರಾಂಡೆಂಡ್‌ ಗಿಫ್ಟ್‌ ನೀಡಿದ್ದಾನೆ. ಅರೇ! ಇದರಲ್ಲೇನಿದೆ ವಿಶೇಷ ಅಂತೀರಾ? ಇಲ್ಲೇ ಇರೋದು ಪಾಯಿಂಟ್‌. ಆತ ನೀಡಿದ್ದು ನಕಲಿ ಬ್ಯಾಗ್‌ಗಳನ್ನು. ಇದರಿಂದ ಮುಂದೇನಾಯ್ತು. ಇಲ್ಲಿದೆ ಓದಿ.

ದಕ್ಷಿಣ ಚೀನಾದ ಯುವತಿಯೊಬ್ಬಳಿಗೆ ತನ್ನ ಬಾಯ್ ಫ್ರೆಂಡ್ (boy friend) ಉಡುಗೊರೆಯಾಗಿ ನಕಲಿ ಡಿಸೈನರ್ (designer) ಬ್ಯಾಗ್ ನೀಡಿದ್ದಾರೆ. ಇದನ್ನು ತಿಳಿದ ಪ್ರೇಯಸಿ ತನ್ನ ಬಾಯ್ ಫ್ರೆಂಡ್ (boy friend) ಮೇಲೆ ಬೇಸರ ವ್ಯಕ್ತಪಡಿಸಿದ್ದಾಳೆ.

ಈ ಕುರಿತು ಸಾಮಾಜಿಕ ಜಾಲತಾಣ(social media) ದಲ್ಲಿ ಮಾತಾನಾಡಿದ ಯುವತಿ, ತನ್ನ ಪ್ರಿಯಕರ ತನಗೆ ಹಲವಾರು ಐಷಾರಾಮಿ ಡಿಸೈನರ್ (designer) ಬ್ಯಾಗ್ (bag) ಗಳನ್ನು ನೀಡಿದ್ದನ್ನು ನೋಡಿ ಆತ ಒಳ್ಳೆಯವನು ಎಂದು ನಾನು ಭಾವಿಸಿದ್ದೆ, ನಾನು ಆ ಬ್ಯಾಗ್(bag) ಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ನಾನು ಬ್ಯಾಗ್(bag) ಗಳನ್ನು ಮಾರಾಟ ಮಾಡಲು ಹೋದಾಗ ಅವುಗಳು ನಕಲಿ (Duplicate Bag Gift) ಎಂದು ತಿಳಿದಿದೆ.

ಬ್ಯಾಗ್ (Bag) ಗಳು ಅಸಲಿಯಲ್ಲ ನಕಲಿ ಎಂದು ತಿಳಿದು ಬೇಸರಗೊಂಡಿದ್ದಾಳೆ. ಈ ಬಗ್ಗೆ ಪ್ರಿಯಕರ ಬಳಿ ಕೇಳಿದಾಗ, ಆಕೆಯನ್ನು ದಬಾಯಿಸಿದ್ದಾನೆ ಅಂತೆ. ನಾನು ನಿನಗೆ ನೀಡಿದ ಗಿಫ್ಟ್ (Gift) ಅನ್ನು ಯಾಕೆ ಮಾರಾಟ ಮಾಡುತ್ತಿದ್ದೀಯ ಎಂದು ಜಗಳ ಮಾಡಿದ್ದು, ಈ ಬಗ್ಗೆ ಯುವತಿ ತಿಳಿಸಿದ್ದಾಳೆ. ಈ ವೀಡಿಯೋ (video) ನೋಡಿದ ನೆಟ್ಟಿಗರು ಇವರಿಬ್ಬರ ಸಂಬಂಧ ಕೇವಲ ಹಣದ ಮೇಲೆ ನಿಂತಿದೆ ಎಂದು ಕಮೆಂಟ್ (comment) ಹಾಕಿದರೆ, ಇನ್ನು ಕೆಲವರು ಗೆಳೆಯನನ್ನು ದೂಷಿಸುವ ಕಮೆಂಟ್ ಹಾಕುತ್ತಿದ್ದಾರೆ.