Home latest Very short resignation letter : ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್​​ ಆಗ್ತಿದೆ ಅತ್ಯಂತ ಚಿಕ್ಕ ರಾಜಿನಾಮೆ...

Very short resignation letter : ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್​​ ಆಗ್ತಿದೆ ಅತ್ಯಂತ ಚಿಕ್ಕ ರಾಜಿನಾಮೆ ಪತ್ರ! ಯಾರು ನೀಡಿದ್ದು ಗೊತ್ತಾ?

Very short resignation letter

Hindu neighbor gifts plot of land

Hindu neighbour gifts land to Muslim journalist

Very short resignation letter : ಸದ್ಯ ಕರ್ನಾಟಕದಲ್ಲಿವಿಧಾನಸಭಾ ಚುನಾವಣೆ ನಿಮಿತ್ತ ಟಿಕೆಟ್ ವಿಚಾರದಲ್ಲಿ ಪಕ್ಷಗಳೊಳಗೆ ಮುನಿಸು ಉಂಟಾಗಿ ಶಾಸಕ ಸ್ಥಾನಕ್ಕೆ, ಪಕ್ಷದ ಸದಸ್ಯತ್ವಕ್ಕೆ ರಾಜಿನಾಮೆ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಕರ್ನಾಟಕದಲ್ಲೀಗ ರಾಜಿನಾಮೆ ಪರ್ವ ಎಂದು ಹೇಳಬಹುದು. ಆದರೀಗ ಇಲ್ಲೊಂದೆಡೆ ಒಬ್ಬ ಕೆಲಸಗಾರ ತಮ್ಮ ಕಂಪನಿಯ ಮಾಲಿಕರಿಗೆ ಮೂರು ಶಬ್ದಗಳಲ್ಲಿ ರಾಜಿನಾಮೆ ಪತ್ರ ನೀಡಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

ಯಾವುದಾದರು ಕಂಪನಿಯಲ್ಲಿ ಕಾರ್ಯನಿರ್ವಹಿಸುವ ಕೆಲಸಗಾಗರರು ಆ ಕಂಪನಿಗೆ ರಾಜಿನಾಮೆ ನೀಡುವಾಗ ಉದ್ದ ಉದ್ದ ಸಾಲುಗಳನ್ನು ಬರೆದು, ವಿವಿಧ ರೀತಿಯ ಪದ ಪುಂಜಗಳ ಮೂಲಕ ರಾಜಿನಾಮೆ ನೀಡುವುದನ್ನು ನೋಡಿದ್ದೇವೆ. ಆದರೆ ಇಲ್ಲಿ ಒಬ್ಬ ಕೆಲಸಗಾರ ತಮ್ಮ ಕಂಪನಿಯ ಮಾಲಿಕರಿಗೆ ಮೂರು ಶಬ್ದಗಳಲ್ಲಿ ರಾಜಿನಾಮೆ ನೀಡಿದ್ದಾರೆ.

ಹೌದು, ಇದು ಆಶ್ಚರ್ಯವಾದರು ಸತ್ಯ. ಈ ರಾಜಿನಾಮೆ ಫೊಟೋವನ್ನು ಕಾವೇರಿ ಎಂಬುವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ಚಿಕ್ಕ ಮತ್ತು ಸಿಹಿ” ಎಂದು (Very short resignation letter) ಪೋಸ್ಟ್​ಗೆ ಶೀರ್ಷಿಕೆ ನೀಡಿದ್ದಾರೆ. ವೈರಲ್ ಆದ ಈ ಪತ್ರದಲ್ಲಿ ಪತ್ರದಲ್ಲಿ
“ಮಾನ್ಯರೇ​​ : ರಾಜಿನಾಮೆ​​ ಪತ್ರ, ಬೈ ಬೈ ಸರ್, ನಿಮ್ಮ ಪ್ರೀತಿಯ” ಎಂಬ ಕೇವಲ ಮೂರೇ ಮೂರೇ ಸಾಲುಗಳಿವೆ.

ಸದ್ಯ ಈ ರಾಜೀನಾಮೆ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಅಲ್ಲದೆ ಹೆಚ್ಚಿನವರು ವಿನೋದಮಯವಾಗಿ ಸಾಕಷ್ಟು ಉತ್ತಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಆದರೆ ಈ ರಾಜಿನಾಮೆಯನ್ನು ಯಾರು, ಯಾವ ಕಂಪೆನಿಗೆ ನೀಡಿದ್ದಾರೆ ಎಂಬುದು ತಿಳಿದಿಲ್ಲ. ಇದು ನಿಜವಾಗಿಯೂ ರಾಜಿನಾಮೆ ನೀಡಿದ್ದೋ ಇಲ್ಲ ತಮಾಷೆಗಾಗಿ ಹೀಗೆ ಮಾಡಿದ್ದೋ ಎಂಬುದು ಕೂಡ ತಿಳಿದುಬಂದಿಲ್ಲ.

 

 

 

ಇದನ್ನು ಓದಿ : Award Ceremony: ಮಹಾರಾಷ್ಟ್ರಪ್ರಶಸ್ತಿ ಸಮಾರಂಭದ ಬಿಸಿಲಿನ ಝಳಕ್ಕೆ ಬಲಿಯಾದವರ ಸಂಖ್ಯೆ 13 ಕ್ಕೆ ಏರಿಕೆ