Netherland: ಅಬ್ಬಾಬ್ಬಾ! 550 ಮಕ್ಕಳಿಗೆ ತಂದೆಯಾದ 41ರ ಈ ಭೂಪ!

Netherland : ಮದುವೆಯಾದ ಮೇಲೆ ಒಂದು ಗಂಡು, ಒಂದು ಹೆಣ್ಣು ಮಗು ಆದ್ರೆ ಸಾಕಪ್ಪ. ಸುಂದರವಾದ, ನೆಮ್ಮದಿಯ ಸಂಸಾರ ನಡೆಸಬಹುದು ಎಂಬುದು ಹಲವರ ಕನಸು. ಯೋಜನೆ ಏನೋ ಎರಡಕ್ಕೇ ಇರುತ್ತದೆ, ಆದರೆ ಏನು ಮಾಡೋದು ಕೆಲವೊಮ್ಮೆ ಈ ಲೆಕ್ಕಾಚಾರ ಹೆಚ್ಚಾಗುವುದು ಉಂಟು. ಆದರೂ ಹೆಚ್ಚೆಂದರೆ ಮೂರು, ನಾಲ್ಕು ಹೋಗಲಿ ಬಿಡಿ ಐದೆಂದೇ ಇಟ್ಟುಕೊಳ್ಳಿ. ಆದರೆ ಇಲ್ಲೊಬ್ಬ ಆಸಾಮಿ ಬರೋಬ್ಬರಿ 550 ಮಕ್ಕಳಿಗೆ ತಂದೆಯಾಗಿದ್ದಾನೆ. ಅದೂ ಕೂಡ ಕೇವಲ ತನ್ನ 41ನೇ ವಯಸ್ಸಿಗೆ!

ಹೌದು, 41 ವರ್ಷದ ಜೊನಾಥನ್ ಜಾಕೋಬ್ ಮೈಜರ್ ಎಂಬ ಭೂಪನೇ, ಮಹಾ ಪುರುಷನೇ ಆ 550ಮಕ್ಕಳ ತಂದೆ. ಈತ ನೆದರ್ಲ್ಯಾಂಡ್ಸ್(Netherland) ನಿವಾಸಿಯಾಗಿದ್ದಾನೆ. ಹೇಗೆಂದರೆ ತನ್ನ ವೀರ್ಯ(sperm) ವನ್ನು ದಾನ ಮಾಡಿ, ಮಾಡಿ ಇಷ್ಟೊಂದು ಮಕ್ಕಳ ಹುಟ್ಟಿಗೆ ಕಾರಣನಾಗಿದ್ದಾನೆ. ಇಂದಿನ ದಿನಗಳಲ್ಲಿ ವೀರ್ಯಾಣು ದಾನವು ತುಂಬಾ ಟ್ರೆಂಡ್‌ನಲ್ಲಿದೆ. ಭಾರತದಲ್ಲಿ ಅಷ್ಟಾಗಿ ಇಲ್ಲ, ಆದರೆ ವಿದೇಶದಲ್ಲಿ ಇದಕ್ಕೆ ಸಾಕಷ್ಟು ಬೇಡಿಕೆ ಇದೆ.

ಅಂದಹಾಗೆ ಬಂಜೆತನದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅನೇಕ ರೀತಿಯ ವೈದ್ಯಕೀಯ ಚಿಕಿತ್ಸೆಗಳು ಲಭ್ಯವಿವೆ. ಇದರಿಂದಾಗಿ ಮಕ್ಕಳನ್ನ ಪಡೆಯುವುದು ಸುಲಭವಾಗುತ್ತಿದೆ. ಅಂತೆಯೇ ಪರ ಪುರುಷನಿಂದ ವೀರ್ಯ ಪಡೆದು ಮಕ್ಕಳನ್ನು ಹೆರುವುದೂ ಅದರಲ್ಲಿ ಒಂದು. ಅಂತೆಯೇ ಈ ಜೋನಾಥನ್ 2017ರ ಹೊತ್ತಿಗೆ, ನೆದರ್ಲ್ಯಾಂಡಿನ 10 ವಿವಿಧ ಚಿಕಿತ್ಸಾಲಯಗಳಿಗೆ ತನ್ನ ವೀರ್ಯವನ್ನ ದಾನ ಮಾಡಿದ ಕಾರಣ 102 ಮಕ್ಕಳ ತಂದೆಯಾಗಿದ್ದಾನೆ.

ಇವನ ವಿರುದ್ಧ ನೂರಾರು ಮಹಿಳೆಯರು ಪ್ರಕರಣ ದಾಖಲಿಸಿದ್ದಾರೆ. ಆದರೀತ ಆ ಮಕ್ಕಳಿಗೆ ತಾನೊಬ್ಬನೇ ತಂದೆ ಎಂದು ಹೇಳುತ್ತಾನೆ. ಇದರ ಬೆನ್ನಲೇ ಇದು ನನ್ನ ಮಗುವಿಗೆ ಸಮಸ್ಯೆ ಉಂಟುಮಾಡಬಹುದು. ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ ಎಂದು ಈತನಿಂದ ವೀರ್ಯಾಣು ದಾನ ಪಡೆದ ಮಹಿಳೆ ಆರೋಪಿಸಿದ್ದಾರೆ.

ಆ ವ್ಯಕ್ತಿ ವೀರ್ಯಾಣು ದಾನ ಮಾಡುವುದರಿಂದ, ಅವನಿಂದ ಜನ್ಮ ತಾಳುವ ಮಕ್ಕಳ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಈತನಿಗೆ ವೀರ್ಯಾಣು ದಾನ ಮಾಡದಂತೆ ನ್ಯಾಯಾಲಯ ನಿಷೇಧ ಹೇರಿದೆ. ಇಷ್ಟೇ ಅಲ್ಲ, ಮಾಹಿತಿಯ ಕೊರತೆಯಿಂದಾಗಿ, ಅವರು ಮದುವೆಯಾಗುವ ಅಪಾಯವೂ ಹೆಚ್ಚಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.ಇದರ ಹೊರತಾಗಿಯೂ ಆತನಿಗೆ ಹಲವು ಮಕ್ಕಳಿದ್ದಾರೆ. ಮೈಜರ್ ಅವರು ಉಕ್ರೇನ್ ಮತ್ತು ಡೆನ್ಮಾರ್ಕ್ ಸೇರಿದಂತೆ ಇತರ ದೇಶಗಳಲ್ಲಿ ವೀರ್ಯಾಣು ದಾನ ಮಾಡಿದ್ದಾರೆ. ಈತ ಸದ್ಯ 550 ಮಕ್ಕಳಿಗೆ ತಂದೆಯಾಗಿದ್ದಾನೆ.

Leave A Reply

Your email address will not be published.