Best Smartwatch : ನಿಮ್ಮ ಪ್ರೀತಿಪಾತ್ರರಿಗೆ ಗಿಫ್ಟ್‌ ನೀಡುವ ಆಲೋಚನೆಯಿದ್ದರೆ ಇಲ್ಲಿದೆ ಬೆಸ್ಟ್‌ ಸ್ಮಾರ್ಟ್‌ವಾಚ್‌ಗಳ ಲಿಸ್ಟ್‌!

Best Smartwatch : ನಿಮ್ಮ ಆತ್ಮೀಯರಿಗಾಗಿ ಸ್ಮಾರ್ಟ್‌ವಾಚ್‌ಗಳನ್ನು ನೀಡಲು ನೀವು ಉತ್ಸುಕರಾಗಿದ್ದೀರಾ? ಹಾಗಾದರೆ ಇಲ್ಲಿದೆ ನಿಮಗೊಂದು ಮಾಹಿತಿ. ನಿಮ್ಮ ಪ್ರೀತಿ ಪಾತ್ರರಿಗೆ ಯಾರಿಗಾದರೂ ಗಿಫ್ಟ್‌ ಕೊಡಬೇಕೆಂಬ ಆಲೋಚನೆಯಿಂದ್ದರೆ ನಿಮಗೆ ನಾವು ಹೇಳಲಿದ್ದೇವೆ ಕೆಲವೊಂದು ಬೆಸ್ಟ್‌ ಸ್ಮಾರ್ಟ್‌ವಾಚ್‌(Best Smartwatch)ಗಳ ಬಗ್ಗೆ. ಬನ್ನಿ ಅದ್ಯಾವುದು ತಿಳಿಯೋಣ.

ಸ್ಮಾರ್ಟ್ ವಾಚ್‌ಗಳು ಜನರಲ್ಲಿ ಹೆಚ್ಚು ಪ್ರಭಾವ ಬೀರುತ್ತಿರುವುದು ನಿಮಗೆ ತಿಳಿದೆ ಇದೆ. ಜನರು ಹೆಚ್ಚು ಸ್ಮಾರ್ಟ್ ವಾಚ್ ಗಳಿಗೆ ಆಕರ್ಷಿತರಾಗಿದ್ದಾರೆ. ಟೆಕ್ ನಲ್ಲಿನ ಪ್ರಮುಖ ಬ್ರಾಂಡ್‌ಗಳು ಹೊಚ್ಚ ಹೊಸ ಫೀಚರ್ ಇರುವ ಮಾದರಿಯ ಸ್ಮಾರ್ಟ್ ವಾಚ್ ಗಳನ್ನು ಮಾರುಕಟ್ಟೆಗೆ ತರುತ್ತಿವೆ. ಗ್ರಾಹಕರನ್ನು ಆಕರ್ಷಿಸಲು ಮಾರುಕಟ್ಟೆಯಲ್ಲಿ ಹೊಚ್ಚ ಹೊಸ ಸ್ಮಾರ್ಟ್ ವಾಚ್‌ಗಳು ಅಗ್ಗದ ಬೆಲೆಯಿಂದ ದುಬಾರಿ ಬೆಲೆಯವರೆಗೆ ಆನೇಕ ಫೀಚರ್ ಇರುವ ವಾಚ್‌ಗಳಿವೆ. ಈ ಹಿನ್ನಲೆಯಲ್ಲಿ ಆಪಲ್‌, ಫಿಟ್‌ಬಿಟ್‌, ಬೌಟ್ ಬ್ರಾಂಡ್ ಸ್ಮಾರ್ಟ್‌ವಾಚ್‌ಗಳು ಹೆಚ್ಚು ಬೇಡಿಕೆಯಲ್ಲಿವೆ. ಹಾಗೆಯೇ ಆನ್ಲೈನ್ ಶಾಪಿಂಗ್ ನಲ್ಲಿನ ಅಮೆಜಾನ್‌ನಲ್ಲಿ ಸ್ಮಾರ್ಟ್‌ ವಾಚ್‌ಗಳು ಜನರನ್ನು ಹೆಚ್ಚು ಆಕರ್ಷಿಸುತ್ತಿದೆ ಮತ್ತು ಹೆಚ್ಚು ಖರೀದಿಸುವಂತೆ ಮಾಡುತ್ತಿದೆ. ಅಮೆಜಾನ್ ನಲ್ಲಿನ ಸ್ಮಾರ್ಟ್ ವಾಚ್ ಬೆಲೆ ವಿವರಗಳ ಬಗ್ಗೆ ತಿಳಿಯೋಣ ಬನ್ನಿ.

ಗಾರ್ಮಿನ್ ವೇನು 2 ಪ್ಲಸ್ : ಈ ಸ್ಮಾರ್ಟ್‌ವಾಚ್‌ 1.3 ಇಂಚಿನ ಡಿಸ್‌ಪ್ಲೇ ಹೊಂದಿದೆ. ಮತ್ತು‌ 25 ಸ್ಪೋರ್ಟ್ಸ್‌ ಅಪ್ಲಿಕೇಶನ್‌ಗಳನ್ನು ಕೂಡ ಹೊಂದಿದೆ. ಇದರ ಜೊತೆಗೆ ಸಂಯೋಜಿತ ವಾಯ್ಸ್‌ ಕಾಲ್ ಫೀಚರ್ ಅನ್ನು ಈ ವಾಚ್ ಪಡೆದುಕೊಂಡಿದ್ದು, ವಾಯ್ಸ್‌ ಅಸಿಸ್ಟೆಂಟ್ ಫೀಚರ್ಸ್‌ ಕೂಡ ಇದರಲ್ಲಿ ಲಭ್ಯವಿದೆ. ಇದರಿಂದ ನೀವು ಸ್ಮಾರ್ಟ್‌ಡಿವೈಸ್‌ಗಳನ್ನು ಸರಳವಾಗಿ ಕಂಟ್ರೋಲ್ ಮಾಡಬಹುದು. ಒಂದು ಸಲ ಪೂರ್ಣವಾಗಿ ಚಾರ್ಜಿಂಗ್ ಮಾಡಿದರೆ, 9 ದಿನಗಳ ಕಾಲ ಬ್ಯಾಕಪ್ ನೀಡಲಿದೆ, ನೀವು ಅಮೆಜಾನ್‌ನಲ್ಲಿ ರೂ50,490 ಬೆಲೆಯಲ್ಲಿ ಖರೀದಿಸಬಹುದು.

ಫಿಟ್‌ಬಿಟ್ ವರ್ಸಾ 3: ಈ ಸ್ಮಾರ್ಟ್‌ವಾಚ್‌ 1.58 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಇದರ ಜೊತೆಗೆ ಹೃದಯ ಬಡಿತ, ನಿದ್ರೆ, ಓಟ, ಈಜು ಮತ್ತು ಸೈಕ್ಲಿಂಗ್‌ನಂತಹ ವ್ಯಾಯಾಮ ಚಟುವಟಿಕೆಗಳನ್ನು ಕೂಡ ಟ್ರ್ಯಾಕ್ ಮಾದಲಾಗುತ್ತದೆ. ಹಾಗೆಯೇ ಇದರಲ್ಲಿ ಇನ್‌ಬಿಲ್ಟ್‌ ಜಿಪಿಎಸ್ ಆಯ್ಕೆ ಇದ್ದು, ಈ ಮೂಲಕ ನಿಮ್ಮ ನಡಿಗೆಯನ್ನು ಹಾಗೂ ಇನ್ನಿತರೆ ಚಟುವಟಿಕೆಯನ್ನು ತಪಾಸಣೆ ಮಾಡಬಹುದು. ಈ ವಾಚ್ ಅಮೆಜಾನ್‌ನಲ್ಲಿ ರೂ‌ 16,899 ಬೆಲೆಯಲ್ಲಿ ಪಡೆಯಬಹುದು.

ಅಮಾಜ್ಫಿಟ್ ಜಿಟಿಎಸ್‌ 4 ಮಿನಿ: ಅಮೆಜಾನ್ ನಲ್ಲಿ ಹೆಚ್ಚಾಗಿ ಸೇಲ್ ಆಗುತ್ತಿರುವ ಸ್ಮಾರ್ಟ್ ವಾಚ್ ಗಳಲ್ಲಿ ಅಮಾಜ್ಫಿಟ್ ಜಿಟಿಎಸ್‌ ಕೂಡ ಒಂದಾಗಿದೆ. ಈ ವಾಚ್‌ ಅನ್ನು ಒಂದು ಸಲ ಪೂರ್ಣ ಚಾರ್ಜಿಂಗ್‌ ಮಾಡಿದರೆ ನೀವು 15 ದಿನಗಳ ವರೆಗೆ ಬಳಕೆ ಮಾಡಬಹುದಾಗಿದೆ. ಇದು 1.65 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಇದರಲ್ಲಿ ಅಲೆಕ್ಸಾ, ಇನ್‌ಬಿಲ್ಟ್‌ ಫಿಟ್‌ನೆಸ್ ಟ್ರ್ಯಾಕರ್ ಹಾಗೂ ಹೃದಯ ಬಡಿತ ಟ್ರ್ಯಾಕಿಂಗ್‌ ಸೇರಿದಂತೆ 120+ಸ್ಪೋರ್ಟ್ಸ್‌ ಮೋಡ್‌ಗಳನ್ನು ಕೂಡ ಹೊಂದಿದೆ. ಈ ವಾಚ್‌ ಅನ್ನು ರೂ 6,999 ಗಳಲ್ಲಿ ಖರೀದಿಸಬಹುದು.

ಆಪಲ್ ವಾಚ್ ಅಲ್ಟ್ರಾ: ಈ ವಾಚ್‌ ಜಲ ಕ್ರೀಡೆ ಪಟುಗಳಿಗೆ ಹಾಗೂ ಹೊರಾಂಗಣ ಸಾಹಸಿಗರಿಗೆ ಉತ್ತಮವಾಗಿದೆ. ಮತ್ತು ಪೂರ್ಣ ಚಾರ್ಜಿಂಗ್‌ನಲ್ಲಿ 36 ಗಂಟೆಗಳ ಸುದೀರ್ಘ ಬ್ಯಾಕಪ್‌ ನೀಡಲಿದೆ. ಈ ವಾಚ್ 49 ಮಿಲಿಮೀಟರ್ ತುಕ್ಕು ನಿರೋಧಕ ಟೈಟಾನಿಯಂ ಕೇಸ್‌ ಅನ್ನು ಕೂಡ ಹೊಂದಿದ್ದು, ದೊಡ್ಡ ಡಿಜಿಟಲ್ ಕ್ರೌನ್ ಬಟನ್‌ ಹಾಗೂ ಇತರೆ ಅಗತ್ಯ ಬಟನ್‌ ಆಯ್ಕೆಯನ್ನು ಕೂಡ ಹೊಂದಿದೆ. ನೀವು ಈ ವಾಚ್ ಅನ್ನು ರೂ 82,999 ಖರೀದಿಸಬಹುದು.

Leave A Reply

Your email address will not be published.