Virushka : ನಟಿ ಅನುಷ್ಕಾ ವಿರಾಟ್‌ ಕೊಹ್ಲಿಯ ಕುಡಿತದ ಬಗ್ಗೆ ಹೀಗೆ ಹೇಳಿದ್ರು !

Virushka :ವಿರಾಟ್ ಕೊಹ್ಲಿ ಪತ್ನಿ ನಟಿ ಅನುಷ್ಕಾ ಶರ್ಮಾ ಇತ್ತೀಚೆಗೆ ನಡೆದ ಸಂದರ್ಶನ(interview) ಒಂದರಲ್ಲಿ ತನ್ನ ಪತಿ ವಿರಾಟ್ ಕೊಹ್ಲಿ(virat Kohli)ಬಗ್ಗೆ ತಮಾಷೆಯಾಗಿ ಮಾತುಕತೆ ಮುಂದುವರಿಸುತ್ತಾ ಹೋದಾಗ, ವಿರಾಟ್(Virushka)ಎರಡು ಪೆಗ್(peg) ನ ಬಳಿಕ ಏನು ಮಾಡುತ್ತಾರೆ ಎಂಬ ಮಾಹಿತಿ ನೀಡಿದ್ದಾರೆ.

ಅಂದಹಾಗೆ ಈಗ ವಿರಾಟ್ ಕೊಹ್ಲಿ ಮದ್ಯ ಸೇವನೆ ತ್ಯಜಿಸಿದ್ದಾರೆ. ಹಾಗೆಯೇ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ(Anushka sharma) ಭಾರತದ ನಂಬರ್ ಒನ್ ಟಾಪ್ ಸೆಲೆಬ್ರಿಟಿ ದಂಪತಿಗಳಲ್ಲಿ(celebrity couple) ಮಿನುಗುವ ಜೋಡಿಯೂ ಒಂದು.

ಹೌದು, ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಅಭಿಮಾನಿಗಳ ಮನಸ್ಸಿನಲ್ಲಿ ಹೆಚ್ಚಿನ ಸಂಭಾವನೆ ಪಡೆದ ಜೋಡಿ. ಹಲವು ವೇದಿಕೆಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ವಿರಾಟ್ ಹಾಗೂ ಅನುಷ್ಕಾ ತಮ್ಮ ಪ್ರೀತಿ (love)ಹಾಗೂ ಗೌರವಗಳನ್ನು ತನ್ನ ಅಭಿಮಾನಿಗಳಲ್ಲಿ ತಿಳಿಸುತ್ತಾರೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ಕುಡಿದಾಗ (drinks)ಮಾಡುವ ಕೆಲಸದ ಬಗ್ಗೆ ಮಾತನಾಡಿದ್ದಾರೆ.ಅದೇನಪ್ಪಾ ಅಂದ್ರೆ,

ಪಾರ್ಟಿಗಳಿಗೆ(party) ಹೋದಾಗ ಅಲ್ಲಿದ್ದ ಜನರನ್ನು ಯಾರು ಬೇಗ ಸೆಳೆಯುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿರುವ ನಟಿ ಅನುಷ್ಕಾ ಶರ್ಮಾ, ಅದು ನನ್ನ ಪತಿ ವಿರಾಟ್ ಕೊಹ್ಲಿಯೇ ಆಗಿರುತ್ತಾರೆ ಎಂಬ ಉತ್ತರವನ್ನು ನೀಡಿದ್ದಾರೆ. ಅವರು ಕುಡಿದರೆ ಕೂಡಲೇ ಡ್ಯಾನ್ಸ್(dance) ಫ್ಲೋರ್​ಗೆ ಹೋಗಿ ಡ್ಯಾನ್ಸ್ ಮಾಡಲು ಶುರು ಮಾಡುತ್ತಾರೆ. ಅವರು ಡ್ಯಾನ್ಸ್ ಮಾಡಲು ಆರಂಭ ಮಾಡಿದರೆ ಎಲ್ಲರೂ ಅವರನ್ನೇ ನೋಡಬೇಕು ಎನ್ನುವ ಹಾಗೆ ಕುಣಿದು ಕುಪ್ಪಳಿಸಿ ಜನರನ್ನು ಮನರಂಜಿಸುತ್ತಾರೆ ಎಂದು ಪತ್ನಿ ಅನುಷ್ಕಾ ಶರ್ಮಾ ಹೇಳಿದ್ದಾರೆ.

ಹೌದು, ನಾನು ಎರಡು ಪೆಗ್​ಗಳಿಗಿಂತಲೂ ಹೆಚ್ಚು ಕುಡಿದೆನೆಂದರೆ ಡ್ಯಾನ್ಸ್ ಮಾಡಲು ಆರಂಭಿಸುತ್ತೇನೆ ಎಂದು ಪತ್ನಿಯ(wife) ಮಾತಿಗೆ ಪ್ರತಿಕ್ರಿಯಿಸಿದ್ದಾರೆ. ನನ್ನನ್ನು ತಡೆಯುವುದು ಯಾರಿಗೂ ಸಾಧ್ಯವಾಗದ ವಿಷಯ ಏಕೆಂದರೆ ನಾನು ಬೇರೆ ವಿಚಾರಗಳನ್ನೇ ಮರೆತು ಕುಣಿಯುವುದಕ್ಕೆ ಶುರುಮಾಡಿ ಬಿಡುತ್ತೇನೆ .

ಆದರೆ ನನ್ನ ಈ ವರ್ತನೆ ನನಗೇ ಇಷ್ಟವಾಗುವುದಿಲ್ಲ. ಹಾಗಾಗಿ ನಾನು ಮದ್ಯ ಸೇವನೆ ಮಾಡುದನ್ನೆ ನಿಲ್ಲಿಸಿದ್ದೇನೆ. ಮುಂಚೆ ಎರಡು ಮೂರು ಪೆಗ್ ಕುಡಿದ ತಕ್ಷಣ ಯಾವುದನ್ನು ತಲೆಯಲ್ಲಿ ಇಟ್ಟುಕೊಳ್ಳದೆ ಬಿಂದಾಸ್(bindas) ಆಗಿ ವರ್ತಿಸುತ್ತಿದ್ದೆ. ಆದರೆ ನನಗೆ ಈ ವರ್ತನೆ ಇಷ್ಟವಾಗುತ್ತಿರಲಿಲ್ಲ ಎಂದಿದ್ದಾರೆ ವಿರಾಟ್ ಕೊಹ್ಲಿ.

ವಿರಾಟ್ ಕೊಹ್ಲಿ, ಕುಡಿದು ಕುಪ್ಪಳಿಸುವ ವಿಡಿಯೋಗಳು ಇಲ್ಲಿಯ ತನಕ ಸಾಕಷ್ಟು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಐಪಿಎಲ್(IPL) ಪಾರ್ಟಿಗಳಿಗೆ ಹುರಿದುಂಬಿಸುತ್ತಿದ್ದದ್ದು ವಿರಾಟ್ ಕೊಹ್ಲಿ ಎಂದು ಅವರ ತಂಡದ ಸಹ ಆಟಗಾರರು ಹೇಳಿದ್ದಿದೆ. ವಿರಾಟ್ ಕೊಹ್ಲಿಯು ಐಪಿಎಲ್ ಪಂದ್ಯಾವಳಿಯ ಸಮಯದಲ್ಲಿ ತನ್ನ ತಂಡದ ಜೊತೆಗೆ ಕ್ರೂಸ್​(croos) ಒಂದರಲ್ಲಿ ಕುಡಿದು ಚೆನ್ನಾಗಿ ಪಾರ್ಟಿ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಹಾಗೆಯೇ ವಿರಾಟ್ ಕೊಹ್ಲಿ ತನ್ನ ಫಿಟ್​ನೆಸ್​(fitness) ಬಗ್ಗೆ ಅತಿಯಾದ ಕಾಳಜಿವಹಿಸುತ್ತಿದ್ದಾರೆ. ಮಾಂಸಾಹಾರವನ್ನೂ ತ್ಯಜಿಸಿ ವೀಗನ್ ಡಯಟ್​(vegan diet) ಫಾಲೋ ಮಾಡುತ್ತಿದ್ದಾರೆ. ನಟಿ ಅನುಷ್ಕಾ ಶರ್ಮಾ ಸಹ ಮಾಂಸಾಹಾರ ತ್ಯಜಿಸಿದ್ದಾರೆ. ಅನುಷ್ಕಾ ಶರ್ಮಾ ಸಹ ತಾವು ಈ ಹಿಂದೆ ಡ್ರಿಂಕ್ಸ್ ಮಾಡುತ್ತಿದ್ದಾಗಿಯೂ ಆ ನಂತರ ಮದ್ಯ ತ್ಯಜಿಸಿದ್ದಾಗಿಯೂ ಕಪಿಲ್ ಶರ್ಮಾ(Kapil Sharma) ಶೋನಲ್ಲಿ ಹೇಳಿಕೊಂಡಿದ್ದರು.ಹಾಗಾಗಿ ಇದೀಗ ದಂಪತಿಗಳು ಇಬ್ಬರು ಮದ್ಯಪಾನವನ್ನು ತ್ಯಜಿಸಿದ್ದಾರೆ.

ಈ ಬಾರಿಯೂ ಬೆಂಗಳೂರು ತಂಡಕ್ಕೆ ಕಪ್(cup) ಗೆಲ್ಲಿಸಿಕೊಡಲು ಇದೀಗ ಹಲವು ವರ್ಷಗಳಿಂದ ಆರ್‌ಸಿಬಿ(RCB) ತಂಡದ ಭಾಗವಾಗಿರುವ ವಿರಾಟ್ ಕೊಹ್ಲಿ ಮತ್ತೊಂದು ಐಪಿಎಲ್ ಸೀಸನ್ ನಲ್ಲಿ ಸೆಣಸಾಡಲಿದ್ದಾರೆ. ವಿರಾಟ್ ಕೊಹ್ಲಿ ಪತ್ನಿ ನಟಿ ಅನುಷ್ಕಾ ಶರ್ಮಾ ಮಗು ಆದ ಬಳಿಕ ಮತ್ತೆ ಸಿನಿಮಾ ರಂಗಕ್ಕೆ(film industry) ಕಾಲಿಟ್ಟಿದ್ದು, ಅನುಷ್ಕಾ ನಟನೆಯ ಚಾಕಡ್ ಎಕ್ಸ್​ಪ್ರೆಸ್(chaakad express) ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.ತನ್ನದೇ ಆದ ನಿರ್ಮಾಣ ಸಂಸ್ಥೆಯನ್ನೂ ಆರಂಭಿಸಿದ್ದ ಅನುಷ್ಕಾ ಶರ್ಮಾ ತಮ್ಮ ಸಂಸ್ಥೆಯನ್ನು ಇದೀಗ ತಮ್ಮ ಸಹೋದರನಿಗೆ (brother)ಬಿಟ್ಟುಕೊಟ್ಟಿದ್ದಾರೆ.

Leave A Reply

Your email address will not be published.