Kedarnath Tours : ಐಆರ್‌ಸಿಟಿಸಿ ಯಿಂದ ಕೇದಾರನಾಥ ಯಾತ್ರಾರ್ಥಿಗಳಿಗೆ ಗುಡ್ ನ್ಯೂಸ್!

Kedarnatha : ಐಆರ್‌ಸಿಟಿಸಿ ಯಿಂದ ಯಾತ್ರಾರ್ಥಿಗಳಿಗೆ ಗುಡ್ ನ್ಯೂಸ್ ಒಂದಿದ್ದು, ಕೇದಾರನಾಥಕ್ಕೆ ತೆರಳುವವರಿಗೆ ಹೆಲಿಕಾಪ್ಟರ್ ಸೇವೆಯನ್ನು ಪ್ರಾರಂಭಿಸಿದೆ. ಎಪ್ರಿಲ್ 25ರಂದು ಕೇದಾರನಾಥ (Kedarnatha) ಧಾಮದ ದ್ವಾರಗಳು ತೆರೆಯಲಿದ್ದು, ಯಾತ್ರಾರ್ಥಿಗಳು ತಮ್ಮ ಟಿಕೆಟ್‌ಗಳನ್ನು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ವೆಬ್‌ಸೈಟ್‌ ಮೂಲಕ ಬುಕ್ ಮಾಡಬಹುದು.

ಹೆಲಿಕಾಪ್ಟರ್ ಬುಕಿಂಗ್ ಏಪ್ರಿಲ್ 1ರಿಂದ ತೆರೆಯುವ ಸಾಧ್ಯತೆಯಿದ್ದು, ಐಆರ್‌ಸಿಟಿಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಸೌಲಭ್ಯ ದೊರಕಲಿದೆ. ಈ ಹೆಲಿಕಾಪ್ಟರ್ ಸೇವೆಗಳ ಪ್ರಾಯೋಗಿಕ ರನ್ ಮಾರ್ಚ್ 31 ರೊಳಗೆ ಪೂರ್ಣಗೊಳ್ಳುತ್ತದೆ. ಹೆಲಿಕಾಪ್ಟರ್ ಸೇವೆಗಳನ್ನು ಪಡೆಯಲು, ಯಾತ್ರಾರ್ಥಿಗಳು ಮೊದಲು ಕೇದಾರನಾಥದ ಪವಿತ್ರ ದೇಗುಲಕ್ಕೆ ಭೇಟಿ ನೀಡಲು ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಬೇಕಾಗಿದೆ.

ಬುಕ್ಕಿಂಗ್‌ನ್ನು ‘ಟೂರಿಸ್ಟ್ ಕೇರ್ ಉತ್ತರಾಖಂಡ್ ಅಪ್ಲಿಕೇಶನ್’ ಮತ್ತು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆಯ ವಾಟ್ಸಾಪ್ ಸೇವೆಯ ಮೂಲಕ ಪೂರ್ಣಗೊಳಿಸಬಹುದು. ಮೊಬೈಲ್ ಸಂಖ್ಯೆಗೆ ‘ಯಾತ್ರಾ’ ಎಂಬ ಪಠ್ಯವನ್ನು ಕಳುಹಿಸಬೇಕು. 91 8394833833. ನೋಂದಣಿ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುತ್ತದೆ.

ಏಪ್ರಿಲ್ 22 ರಂದು ಯಮುನೋತ್ರಿ ಮತ್ತು ಗಂಗೋತ್ರಿ ದೇವಾಲಯಗಳನ್ನು ತೆರೆಯುವುದರೊಂದಿಗೆ ಯಾತ್ರೆಯು ಪ್ರಾರಂಭವಾಗುತ್ತದೆ. ಕೇದಾರನಾಥ ಏಪ್ರಿಲ್ 25 ರಂದು ಮತ್ತು ಬದರಿನಾಥ್ ಏಪ್ರಿಲ್ 27 ರಂದು ತೆರೆಯಲಿದೆ ಎಂದು ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ತಿಳಿಸಿದೆ. ಫೆಬ್ರವರಿಯಲ್ಲಿ ಹೆಲಿಕಾಪ್ಟರ್ ಆಪರೇಟರ್‌ಗಳ ಜವಾಬ್ದಾರಿಗಳನ್ನು ಮತ್ತು ಸುರಕ್ಷಿತ ಮತ್ತು ಸುಗಮ ಹೆಲಿಕಾಪ್ಟರ್ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಆಯಾ ಜಿಲ್ಲಾಡಳಿತಕ್ಕೆ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.

Leave A Reply

Your email address will not be published.