Coronavirus New Wave: ದೇಶದಲ್ಲಿ ಮತ್ತೆ ಕೋರೋನಾ ಹೊಸ ಅಲೆಯ ಅಬ್ಬರ !!

Coronavirus New Wave: ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದ ಜನತೆಯ ನಿದ್ದೆಗೆಡಿಸಲು ಕೊರೋನಾ (COVID-19) ವೈರಸ್ ತನ್ನ ಪ್ರಭಾವ ಬೀರಲು ಆರಂಭಿಸಿದ್ದು, ಈಗಾಗಲೇ ಕೊರೊನಾ ವೈರಸ್‌ನ ಹೊಸ ಪ್ರಕರಣಗಳು (Coronavirus New Wave)ವರದಿಯಾಗಿದ್ದು 4 ಜನರು ಬಲಿಯಾಗಿರುವುದು ವರದಿಯಾಗಿದೆ.

ಭಾರತದಲ್ಲಿ ಮತ್ತೆ ಕೊರೊನಾ ವೈರಸ್‌ನ ಹೊಸ ಪ್ರಕರಣಗಳ ಹಾವಳಿ ಅರಂಭವಾಗಿದ್ದು, ಸೋಮವಾರ ದೇಶದಾದ್ಯಂತ 1573 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 4 ಜನರು ಮೃತಪಟ್ಟಿದ್ದು ಜನರಲ್ಲಿ ಭಯ ಆತಂಕ ಸೃಷ್ಟಿ ಮಾಡಿದೆ. ಇದಲ್ಲದೇ, 14 ರಾಜ್ಯಗಳ 32 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರವು ಶೇ.10ನ್ನು ದಾಟಿರುವ ಹಿನ್ನೆಲೆ ಕೊರೊನಾ(Covid New Cases Increasing) ಹೊಸ ಪ್ರಕರಣಗಳ ಹೆಚ್ಚಳವಾಗುತ್ತಿರುವ ಹಿನ್ನೆಲೆ ಜನಸಾಮಾನ್ಯರಲ್ಲಿ ಭಯದ ವಾತಾವರಣ ಮನೆ ಮಾಡಿದೆ.

ಕೊರೊನಾ ವೈರಸ್ XBB1.16ನ ಹೊಸ ರೂಪಾಂತರವು(Coronavirus New Wave) ದೇಶದಲ್ಲಿ ಶರವೇಗದಲ್ಲಿ ಪಸರಿಸುತ್ತಿದ್ದು, ಇದುವರೆಗೆ 610 ಪ್ರಕರಣಗಳು ಕಂಡುಬಂದಿದೆ ಎನ್ನಲಾಗಿದೆ. ಕೊರೊನಾದ ಈ ಹೊಸ ರೂಪಾಂತರದಿಂದ ಸೋಂಕಿನ ಪ್ರಕರಣಗಳು ಕೂಡ ಇತ್ತೀಚೆಗೆ ಹೆಚ್ಚಳವಾಗಲೂ ಕಾರಣ ಎನ್ನಲಾಗಿದೆ. ವೈದ್ಯರ ಮಾಹಿತಿ ಪ್ರಕಾರ, ಕೊರೊನಾ ವೈರಸ್ XBB1.16ನ ಹೊಸ ರೂಪಾಂತರದ ಸೋಂಕಿತ ರೋಗಿಗಳು ಕೆಮ್ಮು, ಶೀತ ಮತ್ತು ಜ್ವರ ಒಳಗೊಂಡಿರುವ ಸಾಮಾನ್ಯ ರೋಗಲಕ್ಷಣಗಳನ್ನು ಒಳಗೊಂಡಿರುತ್ತಾರೆ. ಇದಲ್ಲದೆ, ಕೆಲ ಸಂದರ್ಭಗಳಲ್ಲಿ ಉಸಿರಾಟದ ಸಮಸ್ಯೆ ಕೂಡ ಉಂಟಾಗುತ್ತದೆ. ಆದರೆ ಇಲ್ಲಿ ಸೋಂಕಿತ ರೋಗಿಗಳನ್ನು ಆಸ್ಪತ್ರೆಗೆ ಸೇರಿಸುವ ಸಾಧ್ಯತೆಗಳು ಕಡಿಮೆಯಾಗುತ್ತಿದೆ.

ಅಂಕಿಅಂಶಗಳ ಅನುಸಾರ, XBB1.16 ಹೊಸ ರೂಪಾಂತರದ 610 ಪ್ರಕರಣಗಳು 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಾದರಿಗಳಲ್ಲಿ ಪತ್ತೆಯಾಗಿದೆ. ಈ ರೀತಿಯ ಗರಿಷ್ಠ ಪ್ರಕರಣಗಳು ಮಹಾರಾಷ್ಟ್ರದಲ್ಲಿ 164 ಮತ್ತು ಗುಜರಾತ್‌ನಲ್ಲಿ 164, ತೆಲಂಗಾಣದಲ್ಲಿ 93, ಕರ್ನಾಟಕದಲ್ಲಿ 86 ಪತ್ತೆಯಾಗಿವೆ ಎನ್ನಲಾಗಿದೆ. INSACOG ಡೇಟಾ ಅನುಸಾರ, ಹೊಸ ರೂಪಾಂತರ ‘XBB 1.16’ನ್ನು ಜನವರಿಯಲ್ಲಿ 2 ಮಾದರಿಗಳಲ್ಲಿ ದೃಢೀಕರಿಸಲಾಗಿದೆ ಎನ್ನಲಾಗಿದೆ. ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG)ದ ಮಾಹಿತಿಯ ಅನುಸಾರ, ಈ ಎಲ್ಲಾ ಪ್ರಕರಣಗಳು 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪತ್ತೆಯಾಗಿವೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಜನರು ಕೊರೊನಾ ಹೊಸ ಅಲೆಯ ಪ್ರಭಾವ ಕಂಡುಬರುತ್ತಿರುವ ಹಿನ್ನೆಲೆ ಎಚ್ಚರಿಕೆಯಿಂದ( Precaution Measure)ಮುಂಜಾಗ್ರತಾ ಕ್ರಮವಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದರ(Mask) ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು (Social Distance Maintains) ತಜ್ಞರು ಸಲಹೆ ನೀಡಿದ್ದಾರೆ.

ದೇಶದಲ್ಲಿ ಕೋವಿಡ್ -19 ಹೊಸ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದ್ದು, ಕೇಂದ್ರ ಸರ್ಕಾರವು ಆರ್‌ಟಿ-ಪಿಸಿಆರ್ ಪರೀಕ್ಷೆ( RT-PCR testing) ಮತ್ತು ಜಿನೋಮ್ ಸೀಕ್ವೆನ್ಸಿಂಗ್ (Genome SSequencing) ಹೆಚ್ಚಿಸಲು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ. ಹೀಗಾಗಿ, ಹೊಸ ವ್ಯಕ್ತಿಗೆ ಹೊಸ ಸೋಂಕು ತಗುಲಿದ್ದಲ್ಲಿ ರಕ್ಷಣೆ ಮಾಡಲು ಅನುವು ಮಾಡಿಕೊಡುತ್ತದೆ. ಇದರ ಜೊತೆಗೆ ಏಪ್ರಿಲ್ 10 ಮತ್ತು 11ರಂದು ದೇಶಾದ್ಯಂತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಸಿದ್ಧತೆ ಪರಿಶೀಲಿಸಲು ಅಣಕು ಡ್ರಿಲ್‌ಗಳನ್ನು ಸಹ ಆಯೋಜನೆ ಮಾಡಲಾಗಿದೆ. ಕೆಲ ವರದಿಯ ಅನುಸಾರ, 9 ಜಿಲ್ಲೆಗಳಲ್ಲಿ 2 ವಾರದ ಹಿಂದೆ ಪಾಸಿಟಿವಿಟಿ ದರ ಶೇ.10ರಷ್ಟು ದಾಖಲಾಗಿತ್ತು. ಅದೇ ರೀತಿ, 8 ರಾಜ್ಯಗಳ 15 ಜಿಲ್ಲೆಗಳಲ್ಲಿ ಪಾಸಿಟಿವಿ ಪ್ರಮಾಣವು ಎರಡು ವಾರದ ಹಿಂದೆ 5 ರಿಂದ 10 ಪ್ರತಿಶತದಷ್ಟಿತ್ತು. ಈಗ ಅವುಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಇದೀಗ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 63 ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣವು 5 ರಿಂದ 10 ಪ್ರತಿಶತಕ್ಕೆ ಹೆಚ್ಚಾಗಿದೆ. ಹೀಗಾಗಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಅಗತ್ಯವಿದ್ದು, ಮುಂಜಾಗ್ರತೆ ಕ್ರಮವಾಗಿ ಮಾಸ್ಕ್ ಬಳಕೆ ಜನ ಸೇರುವ ಪ್ರದೇಶದಲ್ಲಿ ಓಡಾಟ ನಡೆಸುವ ಸಂದರ್ಭ ಅಂತರ ಕಾಯ್ದುಕೊಳ್ಳುವುದು ಅತ್ಯವಶ್ಯಕ.

ಇದನ್ನೂ ಓದಿ: Actress Taapsee Pannu : ಎದೆ ಕಾಣುವ ಬಟ್ಟೆಗೆ ದೇವಿಯ ನೆಕ್ಲೆಸ್‌ ಧರಿಸಿದ ಖ್ಯಾತ ನಟಿ! ಪಿಂಕ್‌ ಬೇಬಿ ವಿರುದ್ಧ ದೂರು ದಾಖಲು!

Leave A Reply

Your email address will not be published.