Aadhar card -Pan Card Link: ಆಧಾರ್ ಕಾರ್ಡ್ ಪಾನ್ ಕಾರ್ಡ್ ಲಿಂಕ್ ಕಡ್ಡಾಯವೇ? ಯಾರು ಕಡ್ಡಾಯವಾಗಿ ಇದನ್ನು ಮಾಡಬೇಕು? ಇಲ್ಲಿದೆ ಉತ್ತರ!

Pan Aadhaar link : ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದ್ದು, ಸದ್ಯ ಬೆರಳೆಣಿಕೆಯ ದಿನಗಳಲ್ಲಿ 2022-23ರ ಆರ್ಥಿಕ ವರ್ಷ ಕೊನೆಗೊಳ್ಳಲಿದೆ. ಪ್ಯಾನ್ ಕಾರ್ಡ್ ಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ನೀಡಿರುವ ಎಚ್ಚರಿಕೆಯ ಪ್ರಕಾರ, ಮಾರ್ಚ್ 31, 2023 ರೊಳಗೆ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ (pan aadhaar link ) ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವ ಹಿನ್ನೆಲೆಯಲ್ಲಿ “ಆದಾಯ ತೆರಿಗೆ ಕಾಯ್ದೆ 1961ರ ಪ್ರಕಾರ ಯಾರು ವಿನಾಯಿತಿ ವಿಭಾಗದಡಿ ಬರುವುದಿಲ್ಲವೋ ಅವರು ಮಾರ್ಚ್ 31, 2023ಕ್ಕೂ ಮುನ್ನ ಪ್ಯಾನ್, ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಮುಖ್ಯವಾಗಿದೆ. ಇಲ್ಲವಾದರೆ ನಿಮ್ಮ ಪ್ಯಾನ್ ಕಾರ್ಡ್ ಏಪ್ರಿಲ್ 1ರಿಂದ ನಿಷ್ಕ್ರೀಯವಾಗಲಿದೆ,” ಎಂದು ಆದಾಯ ತೆರಿಗೆ ಇಲಾಖೆಯು ಹೇಳಿದೆ.

ಈಗಾಗಲೇ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಅನ್ನು ಲಿಂಕಿಂಗ್ ಗಡುವನ್ನು CBDT ಅಂದರೆ ಕೇಂದ್ರ ಸರ್ಕಾರದ ನೇರ ತೆರಿಗೆ ಮಂಡಳಿ ಹಲವಾರು ಬಾರಿ ವಿಸ್ತರಣೆ ಮಾಡಲಾಗಿದ್ದು, ಈ ಬಾರಿಯೂ ಪ್ಯಾನ್ ಕಾರ್ಡ್ ನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡದಿದ್ದರೆ, ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ.

ಪ್ಯಾನ್ ಕಾರ್ಡ್ ಮಾಹಿತಿ :
ಒಬ್ಬ ವ್ಯಕ್ತಿ, ಸಂಸ್ಥೆಗಳು ಪ್ಯಾನ್ ಕಾರ್ಡ್ ಹೊಂದುವುದು ಮುಖ್ಯವಾಗಿದೆ. ಮುಖ್ಯವಾಗಿ ಪರ್ಮನೆಂಟ್ ಅಕೌಂಟ್ ನಂಬರ್ ಅನ್ನು ಪ್ಯಾನ್ ಎಂದು ಕರೆಯಲಾಗುತ್ತದೆ. ಇದು ವಿಶಿಷ್ಟವಾದ 10 ಡಿಜಿಟ್‌ನ ಕೋಡ್ ಆಗಿದ್ದು, ಆದಾಯ ತೆರಿಗೆ ಇಲಾಖೆ ನೀಡುತ್ತದೆ. ಹಣಕಾಸು ಕಾರ್ಯಗಳನ್ನು ನಡೆಸಬೇಕಾದರೆ, ಬ್ಯಾಂಕ್ ಖಾತೆಯನ್ನು ತೆರೆಯಬೇಕಾದರೆ, ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಬೇಕಾದರೆ, ಹೂಡಿಕೆ ಮಾಡಬೇಕಾದರೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ.

ಆಧಾರ್ ಕಾರ್ಡ್ ಮಾಹಿತಿ :
12 ಅಂಕಿಗಳ ವಿಶಿಷ್ಟ ಗುರತಿನ ಸಂಖ್ಯೆಯೇ ಆಧಾರ್ ಸಂಖ್ಯೆಯಾಗಿದ್ದು, ಇದನ್ನು ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಭಾರತದ ಜನರಿಗೆ ನೀಡುವ ದಾಖಲೆಯಾಗಿದೆ. ಬಯೋಮೆಟ್ರಿಕ್, ಡೆಮಾಗ್ರಾಫಿಕ್ ಮಾಹಿತಿ ಇದರಲ್ಲಿ ಇರುತ್ತದೆ. ವಿಶ್ವದ ಅತೀ ದೊಡ್ಡ ಬಯೋಮೆಟ್ರಿಕ್ ಐಡೆಂಟಿಫಿಕೇಷನ್ ವ್ಯವಸ್ಥೆ ಆಧಾರ್ ಆಗಿದೆ. ಸರ್ಕಾರದ ಸಬ್ಸಿಡಿ, ಹಣಕಾಸು ವಹಿವಾಟು, ವೈಯಕ್ತಿಕ ಗುರುತಿನ ದೃಢೀಕರಣಕ್ಕೆ ಆಧಾರ್ ಕಾರ್ಡ್ ಮುಖ್ಯವಾಗಿದೆ.

ಈಗಾಗಲೇ ಮಾರ್ಚ್ 31, 2022ಕ್ಕೂ ಮೊದಲು ಆಧಾರ್, ಪ್ಯಾನ್ ಲಿಂಕ್ ಮಾಡೋದು ಉಚಿತವಾಗಿತ್ತು. ಆ ನಂತರ ಅಂದ್ರೆ ಏಪ್ರಿಲ್ 1, 2022ರಿಂದ 500 ರೂಪಾಯಿ ದಂಡ ಹಾಕಲಾಯ್ತು. ಜುಲೈ 1, 2022ರಿಂದ ಶುಲ್ಕದ ಮೊತ್ತವನ್ನು 1000 ರೂಪಾಯಿಗೆ ಏರಿಕೆ ಮಾಡಲಾಗಿದೆ. ಆದಾಯ ತೆರಿಗೆ ಇಲಾಖೆಯ https://www.incometax.gov.in/iec/fop ortal/ ಈ ಅಧಿಕೃತ ವೆಬ್‌ಸೈಟ್‌ನಲ್ಲಿ ಇದರ ಬಗ್ಗೆ ಮಾಹಿತಿ ಲಭ್ಯವಿದೆ.

ನೀವು ಆಧಾರ್, ಪ್ಯಾನ್ ಲಿಂಕ್ ಮಾಡದೇ ಇದ್ದಲ್ಲಿ ಆಗುವ ಪರಿಣಾಮ :
ಏಪ್ರಿಲ್ 1ರಿಂದ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಅದಲ್ಲದೆ ಬ್ಯಾಂಕಿನಲ್ಲಿ 50,000ಕ್ಕೂ ಹೆಚ್ಚಿನ ಹಣವನ್ನು ಠೇವಣಿ ಇಡಲು ಆಗಲ್ಲ. ಇನ್ನು 50,000ಕ್ಕೂ ಹೆಚ್ಚಿನ ಹಣವನ್ನು FD ಅಂದ್ರೆ ಸ್ಥಿರ ಠೇವಣಿ ಆಗಲ್ಲ. ನಿಮ್ಮ ಅಕೌಂಟ್ ನಿಂದ TDS/TCS ಕಡಿತಗೊಳ್ಳುವ ಮೊತ್ತ ಹೆಚ್ಚಾಗುತ್ತದೆ. ಅದಲ್ಲದೆ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಲು ಆಗಲ್ಲ. ನೀವು ಮ್ಯೂಚುವಲ್ ಫಂಡ್ ಹೂಡಿಕೆ ಸಾಧ್ಯವಿಲ್ಲ. ಮುಖ್ಯವಾಗಿ ಹೂಡಿಕೆದಾರರ NSE ಮತ್ತು BSE ವರ್ಗಾವಣೆ ಆಗಲ್ಲ. ನಿಮ್ಮಲ್ಲಿ ಪ್ಯಾನ್ ಇಲ್ಲದಿದ್ರೆ ವಿದೇಶಿ ಕರೆನ್ಸಿ ಕೊಳ್ಳಲು ಆಗುವುದಿಲ್.

ಆದರೆ ಆಧಾರ್, ಪ್ಯಾನ್ ಕಾರ್ಡ್ ಲಿಂಕ್ ಕಡ್ಡಾಯವಾದರೂ ಇದು ಎಲ್ಲರಿಗೂ ಅನ್ವಯವಾಗಲ್ಲ. ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಪ್ರಕಾರ ಈ ಕೆಳಗಿನವರಿಗೆ ಕಡ್ಡಾಯವಲ್ಲ :
> 80 ವರ್ಷ ಮೇಲ್ಪಟ್ಟವರು ಲಿಂಕ್ ಮಾಡುವಂತಿಲ್ಲ.
> ದೇಶದ ಪೌರತ್ವ ಯಾರು ಪಡೆದಿಲ್ಲವೋ ಅವರಿಗೆ ಕಡ್ಡಾಯವಲ್ಲ 3. ಅನಿವಾಸಿ ಭಾರತೀಯರು
> ಅಸ್ಸಾಂ, ಮೇಘಾಲಯ ಮತ್ತು ಕೇಂದ್ರಾಡಳಿತ ಪ್ರದೇಶ ಜಮ್ಮು, ಕಾಶ್ಮೀರದ ನಿವಾಸಿಗಳು.

ನಿಮ್ಮ ಪಾನ್‌ಕಾರ್ಡ್‌ ಆಧಾರ್‌ನೊಂದಿಗೆ ಲಿಂಕ್‌ ಆಗಿದೆಯೇ ಅನ್ನೋದನ್ನು ತಿಳಿಯಲು ಈ ಕೆಳಗಿನಂತೆ ಫಾಲೋ ಮಾಡಿ:
> ಗೂಗಲ್‌ನಲ್ಲಿ www.incometax.gov.in ವೆಬ್‌ಸೈಟ್ ಓಪನ್ ಮಾಡಿ
> ಈಗ ‘ಕ್ವಿಕ್‌ ಲಿಂಕ್ಸ್‌’ನ ಅಡಿಯಲ್ಲಿ ಕಾಣುವ ‘ಲಿಂಕ್ ಆಧಾರ್ ಸ್ಟೇಟಸ್‌’ ಆಯ್ಕೆಯನ್ನು ಒತ್ತಿರಿ.
> ಈಗ ನಿಮ್ಮ ಕಂಪ್ಯೂಟರ್ ಪರದೆಯಲ್ಲಿ / ಸ್ಮಾರ್ಟ್ ಫೋನ್ ನಲ್ಲಿ ಹೊಸ ಪುಟ ತೆರೆಯುತ್ತದೆ.
> ಈಗ ನಿಮ್ಮ ಪಾನ್ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ.
> ವಿವರಗಳನ್ನು ಹಾಕಿದ ನಂತರ ‘ವೀವ್ ಲಿಂಕ್ ಆಧಾರ್ ಸ್ಟೇಟಸ್’ ಆಯ್ಕೆಯನ್ನು ಕ್ಲಿಕ್ ಮಾಡಿ.
ಈಗ ನಿಮ್ಮ ಪಾನ್‌ ಅನ್ನು ಆಧಾರ್ ಜೊತೆ ಲಿಂಕ್ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ದೃಢೀಕರಿಸುವ ಪುಟ ಕಾಣಿಸಿಕೊಳ್ಳುತ್ತದೆ.

ಮುಖ್ಯವಾಗಿ ಕೆಲವರ ಬಳಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್‌ಗಳು ಇದ್ದದ್ದು ಕಂಡು ಬಂದಿದೆ. ಅಲ್ಲದೇ ದೇಶಾದ್ಯಂತ ನಕಲಿ ಪ್ಯಾನ್ ಕಾರ್ಡ್‌ಗಳು ಚಲಾವಣೆಯಲ್ಲಿದ್ದವು. ಇದರಿಂದ ತೆರಿಗೆಯ ಲೆಕ್ಕಾಚಾರ ಮತ್ತು ಆದಾಯ ತೆರಿಗೆ ಸಂಗ್ರಹಕ್ಕೆ ತೀವ್ರ ಪರಿಣಾಮ ಉಂಟಾಗಿದ್ದು ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತೆರಿಗೆ ವಂಚನೆಗೆ ಕಡಿವಾಣ ಹಾಕಲು ಮುಂದಾಗಿದ್ದು, ಆಧಾರ್, ಪ್ಯಾನ್ ಲಿಂಕ್ ಕಡ್ಡಾಯಗೊಳಿಸಿರುವ ಮುಖ್ಯ ಉದ್ದೇಶ ಹೊಂದಿದೆ.

ಇದನ್ನೂ ಓದಿ: Fake PAN Card Alert: ಒಂದೇ ನಿಮಿಷದಲ್ಲಿಯೇ ನಿಮ್ಮ ಪ್ಯಾನ್ ಕಾರ್ಡ್ ಅಸಲಿಯೋ ನಕಲಿಯೋ ಎಂದು ಹೀಗೆ ತಿಳಿಯಿರಿ

Leave A Reply

Your email address will not be published.